ಎಲ್‌.ಡಿ.ಎಫ್‌.ಗೆ ಅಭೂತಪೂರ್ವ ಚಾರಿತ್ರಿಕ ಜನಾದೇಶ – ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ

ಕೇರಳದ ಎಡ ಪ್ರಜಾಪ್ರಭುತ್ವ ರಂಗಕ್ಕೆ ಇನ್ನೊಂದು ಅವಧಿಗೆ ಅಧಿಕಾರದ ಜನಾದೇಶ ದೊರೆತಿದೆ. ಕೇರಳದ ಜನತೆ ಮೊದಲ ಬಾರಿಗೆ ಇದನ್ನು ನೀಡಿದ್ದಾರೆ, ಚರಿತ್ರೆಯ ಪುನರ್ಲೇಖನ ಮಾಡಿದ್ದಾರೆ ಎನ್ನುತ್ತ ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ ಕೇರಳದ ಮತದಾರರಿಗೆ, ಜನತೆಗೆ ಹಾರ್ದಿಕ ಅಭಿವಂದನೆ ಸಲ್ಲಿಸಿದೆ, ಅದು ವಿಜಯಕ್ಕಾಗಿ ಶ್ರಮಿಸಿರುವ ಎಲ್ಲರಿಗೂ ಧನ್ಯವಾದ ಅರ್ಪಿಸಿದೆ.

ಕಳೆದ ಐದು ವರ್ಷಗಳಲ್ಲಿ ಯುಡಿಎಫ್ ಮತ್ತು ಬಿಜೆಪಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಹರಿಯಬಿಟ್ಟು ಮತ್ತು ಬುಡವಿಲ್ಲದ ಆಪಾದನೆಗಳ ಮೂಲಕ ಸರಕಾರವನ್ನು ಉರುಳಿಸಲು ಸರ್ವಪ್ರಯತ್ನಗಳನ್ನು ನಡೆಸಿದವು. ಕಮ್ಯುನಿಸ್ಟ್ವಿರೋಧಿ ಮಾಧ್ಯಮ ಪಡೆಗಳು ಕೂಡ ಪ್ರಚಾರಗಳನ್ನು ಬಲವಾಗಿ ಬೆಂಬಲಿಸಿದವು. ಇದನ್ನು ಕೇರಳದ ಜನತೆ ಸಾರಾಸಗಟು ತಿರಸ್ಕರಿಸಿದ್ದಾರೆ, ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಯುಡಿಎಫ್ ಪರೋಕ್ಷ ಬೆಂಬಲದಿA ತೆರೆದಿದ್ದ ಬಿಜೆಪಿಯಖಾತೆಯನ್ನು ಎಲ್ಡಿಎಫ್ ನೇತೃತ್ವದಲ್ಲಿ ರಾಜ್ಯದ ಜನತೆ ಮುಚ್ಚಿದ್ದಾರೆ. ಬಿಜೆಪಿಯ ಕೋಮುವಾದಕ್ಕೆ ಕೇರಳ ಒಂದು ಬಲವಾದ ಪ್ರತ್ಯುತ್ತರವನ್ನು ನೀಡಿದೆ. ಜಮಾತ್ಇಸ್ಲಾಮಿಯೊಂದಿಗೆ ಕೋಮುವಾದಿ ಕ್ರೋಡೀಕರಣದ ಯುಡಿಎಫ್ ಗುರಿಯನ್ನು ಕೂಡ ಜನತೆ ತಿರಸ್ಕರಿಸಿದ್ದಾರೆ. ಕೇರಳ ಜಾತ್ಯತೀತತೆಯ ರಾಜಕೀಯವನ್ನು ಎತ್ತಿ ಹಿಡಿಯುತ್ತದೆ ಎಂದು ಮತ್ತೊಮ್ಮೆ ಸಾಬೀತಾಗಿದೆ.

ಜನತೆಯ ಪ್ರಶ್ನೆಗಳಿಗೆ ಅವರ ಪಕ್ಷ ವಹಿಸಿ ಉತ್ತರಗಳನ್ನು ಹುಡುಕಲು ಸಮರ್ಪಿಸಿಕೊಂಡಿರುವ ಒಂದು ಆಳ್ವಿಕೆಗೆ ಜನತೆಯ ಸಮರ್ಥನೆ ದೊರೆತಿದೆ ಅದು ಮುಂದುವರೆಯುತ್ತದೆ, ಇದಕ್ಕೆ ಕೇರಳದ ಕೋಟಿಕೋಟಿ ಜನತೆ ಹೃದಯಾಂತರಾಳದ ಬೆಂಬಲವನ್ನು ನೀಡಬೇಕು ಎಂದು ಕಾರ್ಯದರ್ಶಿ ಮಂಡಳಿ ಮನವಿ ಮಾಡಿದೆ.

ಹೊಸ ವಿಶ್ವಾಸ ಮೂಡಿಸಿರುವ ಜನಾದೇಶ

ಹೊಸ ಸರಕಾರ ಜನಗಳ ನಿರೀಕ್ಷೆಯಂತೆ ವರ್ತಿಸುತ್ತದೆ, ಅವರ ಆಕಾಂಕ್ಷೆಗಳಿಗೆ ನ್ಯಾಯ ಒದಗಿಸುತ್ತದೆ ಎಂದು ಅದು ಆಶ್ವಾಸನೆ ನೀಡಿದೆ. ಈ ತೀರ್ಪು ಸಿಪಿಐ(ಎಂ) ಗೆ ಮತ್ತು ಎಡ ಪ್ರಜಾಪ್ರಭುತ್ವವಾದೀ ಶಕ್ತಿಗಳಿಗೆ ಜನಗಳ ನಡುವೆ ಕೆಲಸ ಮಾಡಲು ಹೊಸ ವಿಶ್ವಾಸವನ್ನು ಕೊಡುತ್ತದೆ ಎಂದು ಅದು ಹೇಳಿದೆ.

ಇದನ್ನು ಓದಿ: ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಸಿಪಿಐ(ಎಂ)ಗೆ ಎರಡರಲ್ಲಿ ಜಯ

1957ರಿಂದ ವಿವಿಧ ಎಲ್‌.ಡಿ.ಎಫ್. ಸರಕಾರಗಳು ಅಂಚಿಗೊತ್ತಲ್ಪಟ್ಟವರ ಉದ್ಧಾರಕ್ಕೆ ಕೆಲಸ ಮಾಡಿವೆ. ಈ ತೀರ್ಪು ಅದರ ಮುಂದುವರಿಕೆಯನ್ನು ಬಲಪಡಿಸುತ್ತದೆ. ಕೇರಳದ ಎಡ -ಪ್ರಜಾಪ್ರಭುತ್ವವಾದಿ ಶಕ್ತಿಗಳು ಪ್ರತಿಗಾಮಿ ಶಕ್ತಿಗಳ ದುಷ್ಟ ಪ್ರಚಾರಗಳಿಗೆ ಸವಾಲು ಹಾಕುವಷ್ಟು ಬಲಿಷ್ಟವಾದ ಬುನಾದಿಯನ್ನು ಹೊಂದಿವೆ ಎಂಬುದನ್ನು ಕೂಡ ಈ ತೀರ್ಪು ಸಿದ್ಧಪಡಿಸಿದೆ. ಈ ವಿಜಯ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂವಿಧಾನದ ವಿರುದ್ಧ ನಡೆಸಿರುವ ಕ್ಷಿಪ್ರಕ್ರಾಂತಿಯ ವಿರುದ್ಧ ಜನತಾ ಆಂದೋಲನಗಳನ್ನು ಬಲಿಷ್ಟಗೊಳಿಸುತ್ತವೆ, ಈ ಧೋರಣೆಗಳ ವಿರುದ್ಧ ದೇಶದಲ್ಲಿ ಹೋರಾಡುತ್ತಿರುವವರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಸಿಪಿಐ(ಎಂ) ಕೇರಳ ಕಾರ್ಯದರ್ಶಿ ಮಂಡಳಿ ಆಶಿಸಿದೆ.

ಜನತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ಅಭಿವೃದ್ಧಿ ಪ್ರಯತ್ನಗಳನ್ನು ಮುಂದುವರೆಸಬೇಕು ಮತ್ತು ವಿಸ್ತರಿಸಬೇಕು ಎಂದು ಬಯಸುತ್ತಾರೆ ಎಂಬುದನ್ನು ಕೂಡ ಈ ವಿಜಯ ತೋರಿಸುತ್ತದೆ. ಎಲ್‌ಡಿಎಫ್ ಸರಕಾರ ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ನ್ಯಾಯ ಖಾತ್ರಿಪಡಿಸುವ ಅಭಿವೃದ್ಧಿಗೆ ಮತ್ತು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆಯನ್ನು ಎತ್ತಿ ಹಿಡಿಯಲು ಅವಿಶ್ರಾಂತವಾಗಿ ಕೆಲಸ ಮಾಡಿದೆ. ಎಲ್ಲ ಬಿಕ್ಕಟ್ಟಿನ ಸನ್ನಿವೇಶಗಳಲ್ಲೂ ತಮ್ಮ ಜೊತೆಗೇ ಇದ್ದ ಒಂದು ಸರಕಾರಕ್ಕೆ ಜನರಿಂದ ಅಪಾರ ಬೆಂಬಲ ಕೂಡ ಈ ವಿಜಯದಲ್ಲಿ ಕಾಣ ಬರುತ್ತದೆ.

ಸರಕಾರ ಉರುಳಿಸುವ ಪ್ರಯತ್ನಗಳಿಗೆ ಬಲವಾದ ಪ್ರತ್ಯುತ್ತರ

ಈ ವಿಜಯ ಕೇಂದ್ರದಲ್ಲಿನ ಬಿಜೆಪಿ ಸರಕಾರದ ಜನ-ವಿರೋಧಿ ಆರ್ಥಿಕ ನೀತಿಗಳು ಮತ್ತು ಕೋಮುವಾದಿ ಅಜೆಂಡಾಗಳಿಗೆ ಎಡ ಪರ್ಯಾಯವನ್ನು ಎತ್ತಿ ಹಿಡಿಯಲು ಕೂಡ ನೆರವಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಯುಡಿಎಫ್ ಮತ್ತು ಬಿಜೆಪಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಹರಿಯಬಿಟ್ಟು ಮತ್ತು ಬುಡವಿಲ್ಲದ ಆಪಾದನೆಗಳ ಮೂಲಕ ಸರಕಾರವನ್ನು ಉರುಳಿಸಲು ಸರ್ವಪ್ರಯತ್ನಗಳನ್ನು ನಡೆಸಿದವು. ಕಮ್ಯುನಿಸ್ಟ್-ವಿರೋಧಿ ಮಾಧ್ಯಮ ಪಡೆಗಳು ಕೂಡ ಈ ಪ್ರಚಾರಗಳನ್ನು ಬಲವಾಗಿ ಬೆಂಬಲಿಸಿದವು. ಎಡ-ವಿರೋಧಿ ಶಕ್ತಿಗಳು ದೊಡ್ಡ ಪ್ರಮಾಣದ ಹವಾಲಾ ಹಣದ ನೆರವಿನಿಂದ ಮತ್ತು ಹುಸಿ ಪ್ರತಿಭಟನೆೆಗಳನ್ನು ನಡೆಸುವ ಮೂಲಕ ಚುನಾವಣೆಗಳನ್ನು ಬುಡಮೇಲು ಮಾಡಲು ಪ್ರಯತ್ನಿಸಿದವು. ಕೆಲವು ಸಮುದಾಯಗಳ ಮುಖಂಡರು ಎಲ್‌ಡಿಎಫ್‌ನ್ನು ಸೋಲಿಸಬೇಕು ಎಂದು ಮಾಡಿದ ನೇರ ಸಾರ್ವಜನಿಕ ಕರೆಗಳನ್ನು ಈ ಪ್ಯಯತ್ನದ ಭಾಗವಾಗಿ ಕಾಣಬಹುದು. ಕೇಂದ್ರದ ಬಿಜೆಪಿ ಸರಕಾರ ಕೇರಳದ ಎಲ್‌ಡಿಎಫ್ ಸರಕಾರವನ್ನು ಉರುಳಿಸಲು ಎಲ್ಲ ಕೇಂದ್ರೀಯ ಏಜೆನ್ಸಿಗಳನ್ನು ಬಳಸಿಕೊಂಡಿತು. ಎಲ್‌ಡಿಎಫ್‌ಗೆ ಕೇರಳದ ಜನತೆಯ ಬಲವಾದ ಬೆಂಬಲದಿAದಾಗಿ ಈ ಎಲ್ಲ ತಪ್ಪುನಡೆಗಳನ್ನು ಮೀರಿ ನಿಲ್ಲಲು ಸಾಧ್ಯವಾಯಿತು. ಚುನಾವಣಾ ಫಲಿತಾಂಶಗಳು ಇದನ್ನು ಸಾಬೀತು ಮಾಡಿವೆ ಎಂದು ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ ಹೇಳಿದೆ. ಎಲ್‌ಡಿಎಫ್ ರಾಜ್ಯದ ಬಹುಮುಖೀ ಅಭಿವೃದ್ಧಿಯ ಗುರಿ ಇಟ್ಟುಕೊಂಡಿರುವ ಒಂದು ಪ್ರಣಾಳಿಕೆಯನ್ನು ಮುಂದಿಟ್ಟಿದೆ. ಇದನ್ನು ಆಚರಣೆಗೆ ತರಲಿಕ್ಕಾಗಿ ಈ ಜನಾದೇಶ, ಕೇರಳದ ಜನರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆಸಿದ ಅಭಿವೃದ್ಧಿ ಪ್ರಯತ್ನಗಳು ಮುಂದುವರೆಯಬೇಕು ಎಂದು ಬಯಸುತ್ತಾರೆ.

ಇದನ್ನು ಓದಿ: ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಸೋಲು – ಸಿಪಿಐ(ಎಂ) ಪೊಲಿಟ್ ಬ್ಯುರೊ

ಬಿಜೆಪಿ ಖಾತೆ ಬಂದ್ಕೋಮುವಾದಿ ಕ್ರೋಡೀಕರಣಕ್ಕೆ ತಿರಸ್ಕಾರ

ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಯುಡಿಎಫ್‌ನ ಪರೋಕ್ಷ ಬೆಂಬಲದಿಂದ ತೆರೆದಿದ್ದ ಬಿಜೆಪಿಯ ‘ಖಾತೆ’ಯನ್ನು ಎಲ್‌ಡಿಎಫ್ ನೇತೃತ್ವದಲ್ಲಿ ರಾಜ್ಯದ ಜನತೆ ಮುಚ್ಚಿದ್ದಾರೆ. ಬಿಜೆಪಿಯ ಕೋಮುವಾದಕ್ಕೆ ಕೇರಳ ಒಂದು ಬಲವಾದ ಪತ್ರುö್ತತ್ತರವನ್ನು ನೀಡಿದೆ. ಕೋಟ್ಯಂತರ ಖರ್ಚು ಮಾಡಿದ ಮೋದಿ-ಷಾ ಜೋಡಿಯ ಮತ್ತು ಒಂದಿಷ್ಟು ಕೇಂದ್ರೀಯ ಮಂತ್ರಿಗಳ ಪ್ರಚಾರ ಕೆಲಸಕ್ಕೆ ಬರಲಿಲ್ಲ. ಬಿಜೆಪಿಯ ರಾಜ್ಯ ಅಧ್ಯಕ್ಷರು ಎರಡು ಕಡೆ ಸ್ಪರ್ಧಿಸಿ ಈ ಪಕ್ಷ ಅಧಿಕಾರಕ್ಕೆ ಬಲವಾದ ಸ್ಪರ್ಧೆ ಒಡ್ಡುತ್ತಿದೆ ಎಂಬ ಭಾವನೆಯನ್ನು ಸೃಷ್ಟಿಸಲು ಪ್ರಯತ್ನಿಸಿದರು. 35 ಸ್ಥಾನಗಳನ್ನು ಪಡೆದರೆ ಸಾಕು ಅಧಿಕಾರಕ್ಕೆ ಬರುತ್ತೇವೆ ಎಂದು ಕೊಚ್ಚಿಕೊಂಡವರಿಗೆ ಕೇಂದ್ರೀಯ ಏಜೆನ್ಸಿÀಗಳ ಪ್ರಯತ್ನಗಳ ಹೊರತಾಗಿಯೂ ಒಂದು ಸೀಟೂ ದಕ್ಕಲಿಲ್ಲ. ಒಕ್ಕೂಟ ತತ್ವಗಳನ್ನು ಉಲ್ಲಂಘಿಸಿ ಮತ್ತು ಕೇಂದ್ರದ ಅಧಿಕಾರವನ್ನು ಬಳಸಿಕೊಂಡು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಕೇಂದ್ರ ಸರಕಾರದ ಪ್ರಯತ್ನಗಳಿಗೆ ಕೇರಳ ಒಂದು ಬಲವಾದ ಛೀಮಾರಿಯನ್ನು ಹಾಕಿದೆ. ಈ ಪರಮ ಪ್ರಜಾಸತ್ತಾತ್ಮಕ ಪ್ರಜ್ಞೆ ಕೇರಳದ ಜನತೆ ಕೋಮುವಾದಿ ಭಯೋತ್ಪಾದನೆಗೆ ಜಗ್ಗುವುದಿಲ್ಲ ಎಂಬ ಒಂದು ರಣಕಹಳೆ ಕೂಡ ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಹೇಳಿದೆ.

ಇದನ್ನು ಓದಿ: 51 ಸಾವಿರ ಅಂತರದ ಗೆಲವು ಸಾಧಿಸಿದ ನಾಗೈ ಮಣಿ

ಜಮಾತ್-ಎ-ಇಸ್ಲಾಮಿಯೊಂದಿಗೆ ಕೋಮುವಾದಿ ಕ್ರೋಡೀಕರಣದ ಯುಡಿಎಫ್ ಗುರಿಯನ್ನು ಕೂಡ ಜನತೆ ತಿರಸ್ಕರಿಸಿದ್ದಾರೆ. ಕೇರಳ ಜಾತ್ಯತೀತತೆಯ ರಾಜಕೀಯವನ್ನು ಎತ್ತಿ ಹಿಡಿಯುತ್ತದೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಸಮಾಜದ ಎಲ್ಲ ವಿಭಾಗಗಳು ಎಲ್‌ಡಿಎಫ್‌ನ್ನು ಬೆಂಬಲಿಸಿವೆ. ಈ ಅಭೂತಪೂರ್ವ ಜನತಾ ತೀರ್ಪು ಸಿಪಿಐ(ಎಂ) ಮತ್ತು ಅದರ ಕಾರ್ಯಕರ್ತರನ್ನು ಇನ್ನಷ್ಟು ಜವಾಬ್ದಾರಿಯುತರನ್ನಾಗಿ ಮತ್ತು ವಿನೀತರನ್ನಾಗಿ ಮಾಡಿದೆ ಎಂದಿರುವ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಮಂಡಳಿ, ಜನತೆಯ ಪ್ರಶ್ನೆಗಳಿಗೆ ಅವರ ಪಕ್ಷ ವಹಿಸಿ ಉತ್ತರಗಳನ್ನು ಹುಡುಕಲು ಸಮರ್ಪಿಸಿಕೊಂಡಿರುವ ಒಂದು ಆಳ್ವಿಕೆ ಮುಂದುವರೆಯುತ್ತದೆ, ಇದಕ್ಕೆ ಕೇರಳದ ಕೋಟಿ-ಕೋಟಿ ಜನತೆ ಹೃದಯಾಂತರಾಳದ ಬೆಂಬಲವನ್ನು ನೀಡಬೇಕು ಎಂದು ಮನವಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *