ವಕೀಲ ಜಗದೀಶ್ ಸಾವು ಅನುಮಾನಾಸ್ಪದ, ಸೂಕ್ತ ತನಿಖೆಗೆ ಒತ್ತಾಯ – ಎ ಐ ಎಲ್ ಯು

ಇಂದು ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ನಡೆದ ವಕೀಲ ಜಗದೀಶ್ ಸಾವು ಆಕಸ್ಮಿಕವಲ್ಲ ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬದವರು ಪೋಲೀಸ್ ಠಾಣೆಯಲ್ಲಿ ಈಗಾಗಲೇ ದೂರು ನೀಡಿದ್ದು, ಸೂಕ್ತ ತನಿಖೆಯ ನಿಟ್ಟಿನಲ್ಲಿ ಪೋಲಿಸರ ವಿಶೇಷ ತಂಡವನ್ನು ರಚಿಸಿ ಕೂಡಲೇ ತನಿಖೆ ಆರಂಭಿಸುವಂತೆ ಅಖಿಲ ಭಾರತ ವಕೀಲರ ಒಕ್ಕೂಟ (AILU) ಬೆಂಗಳೂರು ಜಿಲ್ಲಾ ಸಮಿತಿ​ ಒತ್ತಾಯಿಸಿದೆ.

ಇದನ್ನು ಓದಿ:ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರು ಹಬ್ಬ, ಐಫಾ ಪ್ರಶಸ್ತಿ ಸಮಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

ವಕೀಲ ಜಗದೀಶ್ ಸಾವು ನಗರದ ನೈಸ್ ರಸ್ತೆಯಲ್ಲಿ ಸಂಭವಿಸಿದ್ದು, ದೇಹ ಪೂರ್ತಿ ರಕ್ತಸಿಕ್ತವಾಗಿದೆ ಹಾಗೆಯೇ ದೇಹ ಬಿದ್ದಿರುವ ಪ್ರದೇಶದಿಂದ ಸುಮಾರು ೨೦೦ ಮೀಟರ್ ಅಂತರದಲ್ಲಿ ಅವರ ಕಾರು ದೊರೆತಿದ್ದು ಆ ಕಾರಿನ ಹಿಂದೆ ಹಾಗೂ ಮುಂದೆ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇವೆಲ್ಲವೂ ಗಮನಿಸಿದಾಗ ವಕೀಲ ಜಗದೀಶ್ ಅವರ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿವೆ

ಇತ್ತೀಚಿಗೆ ವಕೀಲರ ಮೇಲೆ ದಿನದಿಂದ ದಿನಕ್ಕೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ‘ವಕೀಲರ ರಕ್ಷಣಾ ಕಾಯ್ದೆ’ ಇದ್ದರೂ ಅದು ಸಮರ್ಪಕವಾಗಿ ಜಾರಿಯಾಗಬೇಕಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡಿ ಮೃತನ ಕುಟುಂಬಕ್ಕೆ ಪರಿಹಾರವನ್ನು ಒದಗಿಸಿಕೊಡುವ ಕ್ರಮವನ್ನು ಕೈಗೊಳ್ಳಬೇಕೆಂದು ಈ ಮೂಲಕ ಅಖಿಲ ಭಾರತ ವಕೀಲರ ಒಕ್ಕೂಟ (AILU) ಬೆಂಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.

ಇದನ್ನು ಓದಿ:ಯುವತಿಯ ಮೇಲೆ ಕಿಡಿಗೇಡಿಯಿಂದ ಲೈಂಗಿಕ ಕಿರುಕುಳ

 

Donate Janashakthi Media

Leave a Reply

Your email address will not be published. Required fields are marked *