ನವದೆಹಲಿ: ಮೋದಿ ವಿರುದ್ಧ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿ ಅದು ತಿರಸ್ಕೃತಗೊಂಡ ಮೇಲೆ ಶ್ಯಾಮ್‌ರಂಗೀಲಾ ನಗಬೇಕಾ ಅಳಬೇಕಾ? ಎಂದು ಲೇವಡಿ ಮಾಡಿದ್ದಾರೆ.
ಹೇಳಿಕೇಳಿ ಶ್ಯಾಮ್‌ರಂಗೀಲಾ ಒಬ್ಬ ಹಾಸ್ಯನಟ, ಅಷ್ಟೇ ಅಲ್ಲ ಇತ್ತೀಚೆಗೆ “ದಿ ವೈರ್” ಮೋದಿ ಮೊದಲ ಬಾರಿಗೆ ಪ್ರೆಸ್ಮೀಟ್ ಮಾಡಿದ್ರೆ ಹೇಗಿರುತ್ತೆ? ಅವ್ರು ಹೇಗೆ ಪತ್ರಕರ್ತರಿಗೆ ರಿಯ್ಯಾಕ್ಟ್
ಮಾಡಬಹುದು ಅಂತ ರಂಗೀಲಾ ಜೊತೆ ವಿಡಂಬನಾತಾತ್ಮಕವಾಗಿ ಒಂದು ಪ್ರೆಸ್ಮೀಟ್ ಮಾಡಿದ್ದರು. ಇದು ಸಖತ್ ಸುದ್ದಿಯಾ ಜೊತೆಗೆ ವೈರಲ್ ಆಗಿತ್ತು ಕೂಡ. ಇದೂವರೆಗೂ ಮೋದಿ ಪ್ರಧಾನಿ ಆಗಿ ಹತ್ತುವರ್ಷಗಳಾದರೂ ಒಂದೇ ಒಂದೂ ಪ್ರೇಸ್ಮೀಟ್ ಮಾಡದೇ ಇರೋದು ಹಾಗೂ ಬಿಜೆಪಿ ವಿರುದ್ಧ ಧ್ವನಿಯೆತ್ತುವ ಪತ್ರಕರ್ತರಿಗೆ ಶಿಕ್ಷೆ, ಜೈಲು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕುಗ್ಗಿಸುತ್ತಿರೋದು, ಪತ್ರಿಕಾ ಸ್ವಾತಂತ್ರದ ಹರಣ ಇಂತಹ ನೈಜ ಘಟನೆಯಾಧರಿಸಿದ ಪ್ರೆಸ್ಮೀಟ್ ಇದಾಗಿತ್ತು. ಪತ್ರಕರ್ತರೇ ಪ್ರಶ್ನೆ ಕೇಳಿ ಪತ್ರಕರ್ತರೇ ಉತ್ತರಿಸಿಕೊಳ್ಳಬೇಕಾದಂತ ಕಾಲಘಟ್ಟದಲ್ಲಿ ಪತ್ರಕರ್ತರು ಇದ್ದಾರೆ ಎನ್ನುವ ಅಂಶ ರೂಪಕದ ಪ್ರೆಸ್ಮೀಟ್ ಹೊಂದಿತ್ತು ಅನ್ನೋದು ಇಲ್ಲಿ ಗಮನಾರ್ಹ.
ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಹಾಸ್ಯನಟ ಶ್ಯಾಮ್ ರಂಗೀಲಾ ಅವರ ಅಫಿಡವಿಟ್ ಅನ್ನು ಚುನಾವಣಾ ಆಯೋಗ ಬುಧವಾರ ತಿರಸ್ಕರಿಸಿದೆ. ಈ ಮೊದಲಿನಿಂದಲೂ ರಂಗೀಲಾ ಸ್ಪರ್ಧೆಗೆ ವಿರೋಧ ಮಾಡಲೇ ಆಗ್ತಿತ್ತು ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು. ಕೊನೆಗೂ ನಾಮಪತ್ರ ಸಲ್ಲಿಸಿದ್ದ ಶ್ಯಾಮ್ ರಂಗೀಲಾ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕಾರ ಮಾಡಿರೋದು ಜನರಲ್ಲಿ ದೊಡ್ಡ ಪ್ರಶ್ನೆಯಾಗಿ ಉದ್ಭವಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಕಸಿಯಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರ್ತಿವೆ.
ಇನ್ನು ನಾಮಪತ್ರ ತಿರಸ್ಕಾರದ ಬಳಿಕ ಮಾತನಾಡಿರುವ ಶ್ಯಾಮ್, ಚುನಾವಣಾ ಆಯೋಗವನ್ನು ನೋಡಿ ನಗಬೇಕಾ? ಅಥವಾ ಅಳಬೇಕಾ? ಎಂದು ಟೀಕಿಸಿದ್ದಾರೆ.
ಇದನ್ನು ಓದಿ : ವಾರಸುದಾರಿಕೆ ತೆರಿಗೆ : ಪ್ರಧಾನ ಮಂತ್ರಿಗಳ ಬರಡು ದೂಷಣೆಗಳು-ಅರಿವಿನ ಕೊರತೆ
ವೀಡಿಯೊ ಸಂದೇಶದಲ್ಲಿ ತಿಳಿಸಿದ ಶ್ಯಾಮ್, 55 ಅಭ್ಯರ್ಥಿಗಳ ಪೈಕಿ 36 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. ಆದರೆ ಪಿಎಂ ಮೋದಿ ಮತ್ತು ಕಾಂಗ್ರೆಸ್ ನಿಂದ ಆಯ್ಕೆಯಾದ ಅಜಯ್ ರೈ ಸೇರಿದಂತೆ 15 ಅಭ್ಯರ್ಥಿಗಳ ಅಫಿಡವಿಟ್‌ಗಳು ಪರಿಶೀಲನೆಯ ಪ್ರಕ್ರಿಯೆಯ ಮೂಲಕ ಸಾಗಿವೆ.
ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಹಲವು ಅಡೆತಡೆಗಳನ್ನು ಎದುರಿಸಿದ್ದಾಗಿ ಆರೋಪಿಸಿದ ರಂಗೀಲಾ, ತಮ್ಮ ಪತ್ರಗಳನ್ನು ಸಮಯಕ್ಕೆ ಸಲ್ಲಿಸಲು ನಿರ್ಬಂಧಿಸಲಾಗಿದೆ. ಈ ಆರೋಪವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೂ ತೆಗೆದುಕೊಂಡು ಹೋಗಿದ್ದೇವೆ. ಫೈಲಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಕೂಡಾ ಬಂದಿಲ್ಲ ಎಂದು ಆರೋಪಿಸಿದರು.
ಇಂದು ಜಿಲ್ಲಾಧಿಕಾರಿಗಳು ನನ್ನ ದಾಖಲೆಗಳಲ್ಲಿ ಸಮಸ್ಯೆ ಇದೆ. ಮತ್ತು ಪ್ರಮಾಣ ವಚನ ಸ್ವೀಕರಿಸಲಿಲ್ಲ. ನನ್ನೊಂದಿಗೆ ವಕೀಲರನ್ನು ಒಳಗೆ ಹೋಗಲು ಬಿಟ್ಟಿಲ್ಲ. ಮತ್ತು ನನ್ನನ್ನು ಒಬ್ಬಂಟಿಯಾಗಿ ಕರೆದಿದ್ದಾರೆ. ನನ್ನ ಸ್ನೇಹಿತನನ್ನು ಥಳಿಸಿದ್ದಾರೆ. ನಿನ್ನೆ 27 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂದು 32 ತಿರಸ್ಕೃತವಾಗಿದೆ ಎಂದು ಬೇಸರವ್ಯಕ್ತಪಡಿಸಿದ್ದು, ಜನತೆ ಪತ್ರಿಕಾಸ್ವಾತಂತ್ರದ ಹರಣದ ಜೊತೆ ಲೋಕತಂತ್ರ ವ್ಯವಸ್ಥೆಯನ್ನು ಹತ್ತಿಕ್ಕಲು ಚುನಾವಣಾ ಆಯೋಗದ ಮೇಲೆ ಒತ್ತಡವಿರಬಹುದೇ? ಎಂದು ಕೇಳುತ್ತಿದ್ದಾರೆ.
ಇದನ್ನು ನೋಡಿ : ಎರಡು ಕೋಟಿ ಉದ್ಯೋಗ : ಎಲ್ಲಿ ಹೋದವು? ಮೋದಿ ಸರ್ಕಾರದ ಉತ್ತರವೇನು? Janashakthi Media