ಪಶ್ಚಿಮ ಬ್ರೆಜಿಲಿಯನ್ ಅಮೆಜಾನ್‌ನಲ್ಲಿ ದಶಕಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಬುಡಕಟ್ಟಿನ ಏಕಾಂಗಿ ವ್ಯಕ್ತಿ ಎಂದೇ ಕರೆಯಲಾಗುತ್ತಿದ್ದ ಜಗತ್ತಿನ ಅತ್ಯಂತ ದಟ್ಟ ಕಾಡು ಅಮೆಜಾನ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ವ್ಯಕ್ತಿ ಸಾವನ್ನಪ್ಪಿದ್ದಾನೆ.
‘ಮ್ಯಾನ್ ಆಫ್ ದಿ ಹೋಲ್’ ಆಗಸ್ಟ್ 23, 2022 ರಂದು ತನ್ನ ಗುಡಿಸಲಿನ ಹೊರಗೆ ಸತ್ತಿರುವುದು ಕಂಡುಬಂದಿದೆ. ದಿ ಮ್ಯಾನ್ ಆಫ್ ದಿ ಹೋಲ್ ಅಥವಾ ತನಾರು ಇಂಡಿಯನ್ , ಬ್ರೆಜಿಲಿಯನ್ ರಾಜ್ಯದ ರೊಂಡೋನಿಯಾದಲ್ಲಿ ಅಮೆಜಾನ್ ಮಳೆಕಾಡಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಸ್ಥಳೀಯ ವ್ಯಕ್ತಿ. ಅವರು 2007 ರಲ್ಲಿ ಬ್ರೆಜಿಲಿಯನ್ ಸರ್ಕಾರದಿಂದ ಗುರುತಿಸಲ್ಪಟ್ಟ ಸಂರಕ್ಷಿತ ಸ್ಥಳೀಯ ಪ್ರದೇಶವಾದ ತಾನಾರು ಸ್ಥಳೀಯ ಪ್ರಾಂತ್ಯದ ಏಕೈಕ ನಿವಾಸಿಯಾಗಿದ್ದರು.
ಒಂದೇ ಕಡೆ ಇಂದ ಮತ್ತೊಂದು ಕಡೆಗೆ ಆಗಾಗ ವಾಸಸ್ಥಳ ಬದಲಿಸುತ್ತಿದ್ದ ಆವ್ಯಕ್ತಿಯು ತಾನು ತಂಗಿದ್ದ ಜಾಗದಲ್ಲಿ ರಂದ್ರಗಳನ್ನು ಕೊರೆದು ಬಿಟ್ಟು ಹೋಗುತ್ತಿದ್ದ ಕಾರಣದಿಂದ ಅವನನ್ನು ಮಾನ್ ಆಫ್ ಹೋಲ್ ಎಂದು ಕರೆಯಲಾಗುತ್ತಿತ್ತು. ಮ್ಯಾನ್ ಆಫ್ ದಿ ಹೋಲ್ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು, ಅವನ ಜನರು ಅವರನ್ನು ಏನೆಂದು ಕರೆಯುತ್ತಿದ್ದರು ಅಥವಾ ಅವನ ಹೆಸರೇನು ಎಂದು ಇದು ವರಿಗೂ ತಿಳಿದು ಬಂದಿರಲಿಲ್ಲ.
1970-1990 ರ ದಶಕದಲ್ಲಿ ಬ್ರೆಜಿಲಿಯನ್ ವಸಾಹತುಗಾರರಿಂದ ಅವರ ಅತ್ಯಕಾಂಡದ ನಂತರ , ಕೊನೆಯದಾಗಿ ಅವರ ಜನಾಂಗದಲ್ಲಿ ಇವನೊಬ್ಬನೇ ಉಳಿದಿದ್ದ ಕಾರಣದಿಂದ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ಅಂದಾಜು 60 ನೇ ವಯಸ್ಸಿನಲ್ಲಿ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದೆ. ಹಿಂಸಾಚಾರ ಅಥವಾ ಹೋರಾಟದಂತಹ ಯಾವುದೇ ಕುರುಹುಗಳು ಅಥವಾ ಮಾಹಿತಿಗಳು ತಿಳಿದುಬಂದಿಲ್ಲ. ಅಮೆಜಾನ್ ಬುಡಕಟ್ಟು ಜನರ ಹತ್ಯಾಕಾಂಡದಲ್ಲಿ ಅಮೆಜೋನಿಯನ್ ಜನಾಂಗದ ಏಲ್ಲರನ್ನು ಅತ್ಯೆ ಮಾಡಲಾಗಿದ್ದು, ಕೊನೆಯದಾಗಿ ಅವರ ಜನಾಂಗದಲ್ಲಿ ಇವನೊಬ್ಬನೇ ಉಳಿದಿದ್ದ ಕಾರಣದಿಂದ ಅವನನ್ನು ಹಾಗೆ ಬಿಡಲಾಗಿತ್ತು. ಕಳೆದ 20 ವರ್ಷಗಳಿಂದ ಆ ವ್ಯಕ್ತಿಯು ಒಬ್ಬಂಟಿಯಾಗಿ ಆದೇ ಕಾಡಿನಲ್ಲಿ ಇಷ್ಟು ದಿನ ಬದುಕುತ್ತಿದ್ದನು. ಈಗ ಇವನ ಸಾವು ಸಂಭವಿಸಿರುವುದರಿಂದ ಅಮೆಜೋನಿಯನ್ ಬುಡಕಟ್ಟು ಜನಾಂಗದ ಸಂತತಿ ಪೂರ್ತಿಯಾಗಿ ನಶಿಸಿ ಹೋಗಿದೆ. ನಾಗರೀಕತೆಯ ಜನರು ತನ್ನ ಜನಾಂಗಕ್ಕೆ ಮಾಡಿದ ದ್ರೋಹಕ್ಕೆ ಇಷ್ಟು ದಿನ ಒಬ್ಬಂಟಿಯಾಗಿ ಬದುಕಿ ಪ್ರತಿಭಟಿಸುತ್ತಿದ್ದ ಅವನ ಹೋರಾಟ ಕೊನೆಯಾಗಿದೆ.