ಲಸಿಕೆಗಳೆ ಲಭ್ಯವಿಲ್ಲ 2ನೇ ಡೋಸ್ ಹೇಗೆ ನೀಡುತ್ತೀರಿ, ಏನಿದು ನಿಮ್ಮ ಲಸಿಕೆ ಅಭಿಯಾನ?’: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ನಡೆಸುವುದಾಗಿ ಘೋಷಿಸಿ ಆರಂಭಿಸಿರುವುದು ಗೊತ್ತೇ ಇದೆ. ಆದರೆ ಲಸಿಕೆ ಅಭಿಯಾನದಲ್ಲಿ ಈಗ ಸಾಕಷ್ಟು ಎಡವಟ್ಟುಗಳಾಗುತ್ತಿರುವುದು ಎದ್ದು ಕಾಣುತ್ತಿದೆ.

18 ರಿಂದ 44 ವರ್ಷದವರಿಗೆ ಲಸಿಕೆಯ ಮೊದಲ ಡೋಸ್ ನೀಡುವುದಾಗಿ ಘೋಷಿಸಿತ್ತು. ಆದರೆ ಲಸಿಕೆ ಕೊರತೆಯಿಂದ ಸ್ಥಗಿತವಾಗಿದೆ, ಇನ್ನೊಂದೆಡೆ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡುವಲ್ಲಿ ಕೂಡ ಸರ್ಕಾರ ಎಡವಿರುವುದು ಸ್ಫಷ್ಟವಾಗಿ ಗೋಚರವಾಗುತ್ತಿದೆ. ಎರಡನೇ ಡೋಸ್ ನೀಡಲು ಕೂಡ ಸರ್ಕಾರ ಬಳಿ ಲಸಿಕೆ ಕೊರತೆ ಕಾಣುತ್ತಿದೆ. ಮೊದಲ ಡೋಸ್ ಹಾಕಿಕೊಂಡವರಿಗೆ ಎರಡನೇ ಡೋಸ್ ಸರಿಯಾಗಿ ಸಿಗುತ್ತಿಲ್ಲ, ಈ ಎಲ್ಲಾ ವಿಚಾರವಾಗಿ ಹೈಕೋರ್ಟ್ ಇಂದು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಇದನ್ನು ಓದಿ: ಕೋವಿಶೀಲ್ಡ್: ಎರಡು ಡೋಸ್‌ಗಳ ನಡುವೆ 12–16 ವಾರಗಳ ಅಂತರಕ್ಕೆ ಶಿಫಾರಸು

ಕೇಂದ್ರ ಸರ್ಕಾರವನ್ನು ಕೂಡ ಲಸಿಕೆ ಪೂರೈಕೆಯಲ್ಲಿನ ಗೊಂದಲ ಬಗ್ಗೆ ತರಾಟೆಗೆ ತೆಗೆದುಕೊಂಡ ಕರ್ನಾಟಕ ಉಚ್ಛ ನ್ಯಾಯಾಲಯವು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಕುತ್ತಿರುವ ಲಸಿಕೆ ಪ್ರಮಾಣ ಎಷ್ಟು, ಕೊರೊನಾ ಲಸಿಕೆ ವಿತರಣೆಯಲ್ಲಿ ತೆಗೆದುಕೊಂಡಿರುವ ಸಮರ್ಪಕವಾದ ಅಂಕಿ ಅಂಶ ದಾಖಲೆಗಳನ್ನು ನೀಡಿ, ಜನರನ್ನು ದಾರಿತಪ್ಪಿಸಬೇಡಿ ಎಂದು ಛೀಮಾರಿ ಹಾಕಿದೆ.

ಕೇಂದ್ರ ಸರಕಾದ ಸಹಕಾರದೊಂದಿಗೆ ರಾಜ್ಯದಲ್ಲಿ ಸರ್ಕಾರವು ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ಅಭಿಯಾನ‌ ಆರಂಭಿಸಿತ್ತು.

ಜನರ ಜೀವಿಸುವ ಹಕ್ಕನ್ನು ಉಲ್ಲಂಘಿಸಬೇಡಿ ಎಂದ ಹೈಕೋರ್ಟ್, ಆರೋಗ್ಯದ ಹಕ್ಕು ಜೀವಿಸುವ ಭಾಗವಾಗಿದ್ದು 2ನೇ ಡೋಸ್ ನ್ನು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡದಿದ್ದರೆ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. 14 ಲಕ್ಷ ಡೋಸ್ ಸಿಕ್ಕರೂ ರಾಜ್ಯಕ್ಕೆ ಸಾಕಾಗುವುದಿಲ್ಲ, 26 ಲಕ್ಷ ಜನರಿಗೆ 2ನೇ ಡೋಸ್ ನೀಡಬೇಕಿದೆ, ಅದನ್ನು ಹೇಗೆ ನೀಡುತ್ತೀರಿ ಎಂದು ಕೇಳಿದೆ.

ಮೊದಲನೆ ಡೋಸ್ ಪಡೆದುದವರಿಗೆ ಎರಡನೆ ಡೋಸ್ ನೀಡಲು ಲಸಿಕೆಗಳು ಇಲ್ಲ ಎಂದು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡುತ್ತಿದ್ದಂತೆಯೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯದಲ್ಲಿ 6 ಕೋಟಿಗೂ ಹೆಚ್ಚಿನ ಜನಸಂಖ್ಯೆ ಇದೆ. ಸರಕಾರ ಒಂದು ಪರ್ಸೆಂಟ್ ಜನರಿಗೂ ಲಸಿಕೆಯನ್ನು ನೀಡಿಲ್ಲ. ಇದೇನಾ ನಿಮ್ಮ ಲಸಿಕೆ ಅಭಿಯಾನ ಕಾರ್ಯಕ್ರಮದ ನೀತಿ. ಎಂದು ಕಟುವಾಗಿ ಟೀಕಿಸಿತು.

ಲಸಿಕೆ ಎಷ್ಟಿದೆ ಹೇಳಿ: ಸರ್ಕಾರಿ ಪರ ವಕೀಲ ಅಟಾರ್ನಿ ಜನರಲ್ ಹೈಕೋರ್ಟ್ ಮುಂದೆ, ಲಸಿಕೆ ಕೊರತೆ ನಿಜವಾಗಿದ್ದು ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಜಾಗತಿಕ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ 3 ಕೋಟಿ ಲಸಿಕೆ ಡೋಸ್ ಗಳನ್ನು ತರಿಸಲು ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಿದೆ ಎಂದರು.

ಇದನ್ನು ಓದಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಿ – ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ

ಅದಕ್ಕೆ ಹೈಕೋರ್ಟ್ ನ್ಯಾಯಾಧೀಶರು, ಲಸಿಕೆ ಲಭ್ಯತೆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು ನಿಜವಾದ ಪರಿಸ್ಥಿತಿ ಏನಿದೆ ಎಂದು ಹೇಳಿ, ಜನರ ಮುಂದೆ ವಾಸ್ತವ ಸತ್ಯವನ್ನು ಹೇಳಬೇಕು. ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯುವುದೆಲ್ಲ ಸದ್ಯಕ್ಕೆ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

ಕೇಂದ್ರಕ್ಕೂ ಆದೇಶ: ಲಸಿಕೆ ಪೂರೈಕೆ, ಜನರಿಗೆ ನೀಡುವ ಬಗ್ಗೆ ಕೇಂದ್ರ ಸರ್ಕಾರವೂ ಶಿಸ್ತುಬದ್ಧವಾಗಿ ನಡೆದುಕೊಳ್ಳಬೇಕು, ಮೊದಲ ಡೋಸ್ ನೀಡಿ ಎರಡನೇ ಡೋಸ್ ನೀಡುವ ಮಧ್ಯೆ ಇರುವ ಭಾರೀ ಅಂತರವನ್ನು ಕಡಿಮೆಮಾಡಬೇಕು. ಮಾರ್ಗಸೂಚಿಯನ್ನು ಮೊದಲು ಸರಿಯಾಗಿ ಸಿದ್ಧಪಡಿಸಿ ಎಂದು ಕೇಂದ್ರ ಸರ್ಕಾರಕ್ಕೂ ಹೈಕೋರ್ಟ್ ಛೀಮಾರಿ ಹಾಕಿತು.

ಕೇಂದ್ರ ಸರಕಾರದ ಪರ ಎಎಸ್‌ಜಿ ಐಶ್ವರ್ಯ ಭಾಟಿ ಅವರು ಲಸಿಕೆಗಳು ವಿಳಂಬವಾದರೆ ನಿಷ್ಪಲವಾಗುವುದಿಲ್ಲ. ಕೊವ್ಯಾಕ್ಸಿನ್ 2ನೇ ಡೋಸ್‌ಗೆ 6 ವಾರ ಕಾಲಾವಕಾಶವಿದೆ. ಕೋವಿಶೀಲ್ಡ್‌ ಗೆ 8 ವಾರ ಕಾಲಾವಕಾಶವಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ ತಜ್ಞರ ಸಮಿತಿಯೂ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ, ಕೇಂದ್ರ ಸರಕಾರ ರಾಜ್ಯಗಳಿಗೆ ಮಾರ್ಗಸೂಚಿ ನೀಡಿ ಕೊಟ್ಟಿರುವ ಲಸಿಕೆಯಲ್ಲಿ ಶೇ.70ರಷ್ಟನ್ನು 2ನೇ ಡೋಸ್‌ಗೆ ಬಳಸಲು ತಿಳಿಸಿತ್ತು. ಆದರೆ ರಾಜ್ಯ ಮಾರ್ಗಸೂಚಿ ಪಾಲಿಸಿಲ್ಲ ಎಂದು ವಿವರಿಸಿದರು.

ಇದನ್ನು ಓದಿ: ಪ್ರಧಾನ ಮಂತ್ರಿಗಳಿಗೆ ಮತ್ತೊಮ್ಮೆ 12 ಪ್ರತಿಪಕ್ಷಗಳ ಮುಖಂಡರ ಜಂಟಿ ಪತ್ರ

ಇದೇ ಸಂದರ್ಭದಲ್ಲಿ ಹೈಕೋರ್ಟ್ ನಾಗರಿಕರ ಕೊರೊನಾ ಪರೀಕ್ಷೆ ಮಾಡಿ 24 ಗಂಟೆಯೊಳಗೇ ವರದಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಈ ಮೂಲಕ ಕೊರೊನಾ ತೀವ್ರವಾಗಿ ಇತರರಿಗೆ ಹರಡದಂತೆ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮುಂದಾಗಬೇಕು. ಇದಕ್ಕೆ ಎಲ್ಲಾ ಪ್ರಯೋಗಾಲಯಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು. ನಿನ್ನೆ ಕೋರ್ಟ್ ನ ಸಿಬ್ಬಂದಿಯೊಬ್ಬರು ಕೋವಿಡ್ ನಿಂದ ಮೃತಪಟ್ಟರು, ಅವರ ಸ್ವಾಬ್ ಟೆಸ್ಟ್ ಮೊನ್ನೆ 10ರಂದು ತೆಗೆದುಕೊಂಡಿದ್ದು ಇನ್ನೂ ಸಿಕ್ಕಿಲ್ಲ ಎಂದು ಅವ್ಯವಸ್ಥೆಯನ್ನು ಹೈಕೋರ್ಟ್ ತೆರೆದಿಟ್ಟಿತು.

ಕೇಂದ್ರ ಸರಕಾರ ಕೊರತೆ ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನು ಕೇಂದ್ರ ಸರಕಾರ ರಾಜ್ಯಕ್ಕೆ 3 ಮಾರ್ಗಸೂಚಿ ಪತ್ರ ಬರೆದಿದ್ದು, ಅವನ್ನು ರಾಜ್ಯ ಸರಕಾರ ಏಕೆ ಪಾಲಿಸಿಲ್ಲ ಎಂಬುದಕ್ಕೆ ವಿವರಣೆ ನೀಡಬೇಕು. ಹಾಗೆಯೇ, ಎರಡನೇ ಡೋಸ್ ನೀಡುವುದರ ಕುರಿತು  ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಬೇಕು ಎಂದು ನಿರ್ದೇಶಿಸಿ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಂತೆ ಹೈಕೋರ್ಟ್ ಕೇಳಿದಾಗ ಸರ್ಕಾರಿ ಪರ ವಕೀಲರು ಸಮಯಾವಕಾಶ ಕೇಳಿದರು. ವಿಚಾರಣೆಯನ್ನು ನ್ಯಾಯಾಲಯ ಮುಂದಿನ ವಾರಕ್ಕೆ ಮುಂದೂಡಿತು.

Donate Janashakthi Media

Leave a Reply

Your email address will not be published. Required fields are marked *