ಬೆಂಗಳೂರು: ನಗರದಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ನಡೆದಾಡುವಾಗ ಸ್ವಲ್ಪ ಎಚ್ಚರಿಕೆ ಇರಲಿ! ಒಂದು ಕ್ಷಣ ಯಾಮಾರಿದರೂ ಜೇಬಲ್ಲಿದ್ದ ದುಡ್ಡು, ಬ್ಯಾಗ್, ಮೊಬೈಲ್, ಲ್ಯಾಪ್‌ಟಾಪ್‌ಗಳು ಮಾಯವಾಗಿ ಹೋಗುತ್ತದೆ. ಇನ್ನು ತಡರಾತ್ರಿ ಓಡಾಟ ನಡೆಸುವಾಗ ರಕ್ಷಣೆ ಬಗ್ಗೆ ಒಂದು ಕೈಹೆಚ್ಚಾಗಿಯೇ ಕ್ರಮವಹಿಸಬೇಕು. ಬೆಂಗಳೂರು
ಏಪ್ರಿಲ್.12, 16 ಮತ್ತು 18 ರಂದು ಕ್ರಮವಾಗಿ ಟರ್ಮಿನಲ್ 1,2, ಮತ್ತು 3ರಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಮೂವರ ಲ್ಯಾಪ್ ಟಾಪ್ ಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು
ಜೆಪಿ ನಗರದಲ್ಲಿ ವಾಸವಿರುವ ಬಿ.ಟೆಕ್ ವಿದ್ಯಾರ್ಥಿ ಅಜನ್ (21) ಏಪ್ರಿಲ್ 12 ರಂದು ಆಂಧ್ರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರು. ನೀರು ಖರೀದಿಸಲು ಟರ್ಮಿನಲ್ 3 ರಲ್ಲಿ ಬಸ್ ಇಳಿದ ನಂತರ 60,000 ರೂ. ಮೌಲ್ಯದ ಅವರ ಲ್ಯಾಪ್‌ಟಾಪ್ ಕಳ್ಳತನವಾಗಿದೆ.
ಇದನ್ನೂ ಓದಿ: ಬಿರುಗಾಳಿಯಿಂದ ಮೋಟಾರ್ಸ್ ಕಾರ್ ಶೋರೂಂನಲ್ಲಿ ಅನಾಹುತ
ಅಜನ್ ಅವರು ತಮ್ಮ ಲ್ಯಾಪ್‌ಟಾಪ್ ಅನ್ನು ಸೀಟಿನ ಮೇಲಿನ ಲಗೇಜ್ ವಿಭಾಗದಲ್ಲಿ ಇರಿಸಿದ್ದರು. ಮತ್ತೆ ಬಸ್ ಹತ್ತಿದ ನಂತರ, ಮೊದಲ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಇತರ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.
ಆರೋಪಿ ಬಸ್ ಹತ್ತಿದ್ದನ್ನು ನಾನು ಗಮನಿಸಿದ್ದೆ. ವ್ಯಕ್ತಿ ಚೆನ್ನಾಗಿ ಬಟ್ಟೆ ಧರಿಸಿದ್ದರು. ಇಪ್ಪತ್ತು ವಯಸ್ಸಿನ ಯುವಕ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿ ಎಂಬಂತೆ ಕಾಣಿಸುತ್ತಿದ್ದ ಎಂದು ಅಜನ್ ಅವರು ಹೇಳಿದ್ದಾರೆ.
ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದ 26 ವರ್ಷದ ವೈದ್ಯಕೀಯ ಪ್ರತಿನಿಧಿ ಅನುಷಾ ಎಂಬುವವರ ಲ್ಯಾಪ್ ಟಾಪ್ ಕೂಡ ಕಳ್ಳತವಾಗಿದೆ.
ರಾತ್ರಿ 10 ರಿಂದ 10.30 ರ ನಡುವೆ ಘಟನೆ ನಡೆದಿದೆ. ಟರ್ಮಿನಲ್ 2 ರಲ್ಲಿ ಲಗೇಜ್ ಅನ್ನು ಹೊರತೆಗೆಯುವಾಗ 50,000 ರೂ. ಮೌಲ್ಯದ ಲ್ಯಾಪ್‌ಟಾಪ್ ಕಳ್ಳತನವಾಗಿದೆ. ಇದರ ಜೊತೆಗೆ ಬ್ಯಾಗ್ ನಲ್ಲಿದ್ದ ಪ್ಯಾನ್ ಕಾರ್ಡ್ ಹಾಗೂ ಎಲೆಕ್ಷನ್ ಐಡಿ ಹಾಗೂ ಇತರೆ ದಾಖಲೆಗಳೂ ನಾಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಮತ್ತೊಂದು ಘಟನೆಯಲ್ಲಿ ದಾವಣಗೆರೆಯ ವೈದ್ಯಕೀಯ ಪ್ರತಿನಿಧಿ ಮಂಜುನಾಥ್ (36) ಅವರು ರಾತ್ರಿ 11.30 ರಿಂದ 11.40 ರ ನಡುವೆ ಟರ್ಮಿನಲ್ 1 ರಲ್ಲಿ ಸ್ನೇಹಿತನೊಂದಿಗೆ ಬಸ್‌ಗಾಗಿ ಕಾಯುತ್ತಿದ್ದಾಗ 25,000 ರೂ. ಮೌಲ್ಯದ ಲ್ಯಾಪ್‌ಟಾಪ್ ಅನ್ನು ಕಳೆದುಕೊಂಡಿದ್ದಾರೆ.
ಮೂರು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿದ್ದು, ಆರೋಪಿ ಪತ್ತೆಗೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿ ವೃತ್ತಿಪರನಂತೆ ತೋರುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ನೋಡಿ: ನಿಶಿಕಾಂತ್ ದುಬೆ, ಧನ್ಕರ್ ಅವರ ಸುಪ್ರೀಂಕೋರ್ಟ್ ವಿರುದ್ಧ ಮಾತುಗಳು ನ್ಯಾಯಾಂಗ ನಿಂದನೆಯಲ್ಲವೇ? Janashakthi Media