ಬೆಳಗಾವಿ: ದೂಧ್ ಸಾಗರ ಜಲಪಾತದ ಕೆಲ ದೂರದಲ್ಲಿ ರೈಲು ಹಳಿಗಳ ಬಳಿ ಭೂ ಕುಸಿತವಾಗಿದೆ.ಇನ್ನೊಂದೆಡೆ ಜಲಪಾತದತ್ತ ಸಾಗುವ ರೈಲು ಹಳಿಗಳ ಸುರಂಗದಲ್ಲಿ ಗುಡ್ಡದ ಭಾಗ ಕುಸಿದು ಹಳಿಗಳ ಮೇಲೆ ಬಿದ್ದಿದೆ. ಎಚ್ಚೆತ್ತುಕೊಂಡ ಅಧಿಕಾರಿಗಳು ಕೆಲ ಕೆಲವನ್ನು ರದ್ದುಗೊಳಿಸಿದ್ದು, ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.
ಜಲಾಶಯದ ಬಳಿ 2 ಕಡೆ ಭೂ ಕುಸಿತವಾಗಿದೆ. ಮುನ್ನೆಚರಿಕೆ ವಹಿಸಿದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ ಗೋವಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳಬೇಕಿದ್ದ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಮೂಂಬೈ ಮಾರ್ಗದ ಮೂಲಕ ಸಂಚರಿಸಿತ್ತು.ಭಾನುವಾರ ರಾತ್ರಿ ದೆಹಲಿಯಿಂದ ಗೋವಾಗ ಹೊರಟಿದ್ದ ರೈಲನ್ನು ಬೆಳಗಾವಿಗೇ ನಿಲ್ಲಿಸಲಾಯಿತು. ಬುಧವಾರ ಬೆಳಿಗ್ಗೆ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಿ ಗೋವಾಗೆ ಕಳುಹಿಸಲಾಯಿತು ಎಂದು ರೈಲ್ವೆ ಮೂಲಗಳು ಹೇಳಿವೆ.
ಇದನ್ನೂ ಓದಿ:ಕಾರ್ಗಿಲ್ ವಿಜಯ ದಿವಸ : ಹುತಾತ್ಮ ಯೋಧರಿಗೆ ರಕ್ಷಣಾ ಸಚಿವರ ಗೌರವ ಸಮರ್ಪಣೆ
ಈ ದೂಧ್ ಸಾಗರಕ್ಕೆ ಹೋಗಲು ಕಾಲುದಾರಿ ಮತ್ತು ರೈಲ್ವೆ ಮಾರ್ಗ ಮಾತ್ರ ಇವೆ.ಭೀರಕ ಮಳೆಯ ಕಾರಣ ಈ ಪ್ರದೇಶದಲ್ಲಿ ಅಪಾಯಕಾರಿ ವಾತವರಣವಿದೆ. ಅದಾಗಿಯೂ ಕಾಡಿನ ದಾರಿಯಲ್ಲಿ ಟ್ರೆಕ್ಕಿಂಗ್ ಮೂಲಕ ಹಲವು ಪ್ರವಾಸಿಗರು ಬರುತ್ತಿದ್ದವರನ್ನು ಅಪಾಯದ ಮುನ್ಸೂಚನೆ ಅರಿತ ಗೋವಾ ಸರ್ಕಾರ ದೂಧ್ ಸಾಗರ ವೀಕ್ಷಣೆಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದೆ.
ದೂಧ್ ಸಾಗರ ವೀಕ್ಷಣೆಗೆ ತೆರಳದಂತೆ ಬೆಳಗಾವಿ ಜಿಲ್ಲೆಯಲ್ಲಿ ಎಸ್ಪಿ ಡಾ. ಸಂಜೀವ ಪಾಟೀಲ ಕೂಡ ಜಾಗೃತಿ ಮೂಡಿಸಿದ್ದರು.ಸಂಚಾರ ನಿರ್ಬಂಧದ ಬಗ್ಗೆ ರೈಲು ನಿಲ್ದಾಣದಲ್ಲಿ ಪ್ರಕಟಣೆ ಕೂಡ ಹಾಕಿದ್ದರು. ಕಳೆದ ನಾಲ್ಕು ದಿನಗಳಿಂದ ಇತ್ತ ಯಾವುದೇ ಪ್ರಯಾಣಿಕರು ಬಂದಿರಲಿಲ್ಲ ಎಂದು ಮೂಲಗಳು ಹೇಳಿವೆ