ಪೂಂಚ್, ಜಮ್ಮು-ಕಾಶ್ಮೀರ: ಮೇ 23, ರಂದು, ಪಾಕಿಸ್ತಾನ ಗಡಿಗೆ ಸಮೀಪವಿರುವ ಪೂಂಚ್ ಜಿಲ್ಲೆಯ ಕೃಷ್ಣಘಾಟಿ ಪ್ರದೇಶದಲ್ಲಿ ಉಂಟಾದ ಕಾಡ್ಗಿಚ್ಚಿನಿಂದಾಗಿ ಹಲವಾರು ಲ್ಯಾಂಡ್‌ಮೈನ್‌ಗಳು ಸ್ಫೋಟಗೊಂಡವು. ಈ ಘಟನೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಡ್ಗಿಚ್ಚು ಪರ್ವತ ಪ್ರದೇಶದ ದೊಡ್ಡ ಭಾಗವನ್ನು ಆವರಿಸಿದ್ದು, ಸೈನ್ಯ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ.
ಇದನ್ನು ಓದಿ:ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ; ಆನ್‌ಲೈನ್ ಮೂಲಕ ಅರ್ಜಿಗಳ ಆಹ್ವಾನ
ಈ ಪ್ರದೇಶವು ಗಡಿಭಾಗವಾಗಿರುವುದರಿಂದ, ಲ್ಯಾಂಡ್‌ಮೈನ್‌ಗಳು ಸಾಮಾನ್ಯವಾಗಿ ಅಳವಡಿಸಲಾಗುತ್ತವೆ. ಆದರೆ, ಕಾಡ್ಗಿಚ್ಚು ಕಾರಣವಾಗಿ ಅವು ಸ್ಫೋಟಗೊಂಡಿರುವುದು ಪರಿಸರ ಮತ್ತು ಭದ್ರತಾ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ.
ಸೈನ್ಯ ಮತ್ತು ಅರಣ್ಯ ಇಲಾಖೆ ಬೆಂಕಿಯನ್ನು ನಂದಿಸಲು ನಿರಂತರ ಪ್ರಯತ್ನಿಸುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ರಮಗಳನ್ನು ಕೈಗೊಂಡಿದ್ದಾರೆ.
ಇದನ್ನು ಓದಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೆ ಇಡಿ ದಾಳಿ