ತಾಜ್ ಮಹಲ್ ಇರುವ ಭೂಮಿ ನಮ್ಮದು,ಪೂರ್ವಜರ ಆಸ್ತಿ;ದಿಯಾಕುಮಾರಿ

ಜೈಪುರ್: ತಾಜ್‌ ಮಹಲ್‌ ನಿರ್ಮಿಸಲಾಗಿರುವ ಸ್ಥಳವು ಜೈಪುರದ ಮಹಾರಾಜ ಜೈ ಸಿಂಗ್‌ಗೆ ಸೇರಿದ್ದಾಗಿತ್ತು. ಅದನ್ನು ಮೊಘಲ್‌ ಚಕ್ರವರ್ತಿ ಶಾಹ್ ಜಹಾನ್‌ ಆಕ್ರಮಿಸಿಕೊಂಡರು ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿದ್ದಾರೆ.

ಅವರು ನೀಡಿರುವ ಹೇಳಿಕೆಯ ಪ್ರಕಾರ ತಾಜ್ ಮಹಲ್ ಇರುವ ಪ್ರದೇಶ ಜೈಪುರದ ರಾಜ ಜೈ ಸಿಂಗ್ ಗೆ ಸೇರಿದ್ದಾಗಿದ್ದು, ಆನಂತರ ಅದನ್ನು ಶಹಜಾನ್‌ ಆಕ್ರಮಿಸಿಕೊಂಡ ಎಂದು ಹೇಳಿದ್ದಾರೆ. ಇದಕ್ಕೆ  ಸಂಬಂಧಪಟ್ಟ ಹಾಗೆ ಜೈಪುರ ರಾಜವಂಶಸ್ಥರ ಬಳಿ ದಾಖಲೆಗಳು ಲಭ್ಯವಿದೆ ಎಂದು ದಿಯಾ ಕುಮಾರಿ ಹೇಳಿದ್ದಾರೆ.

ತಾಜ್ ಮಹಲ್ ಗೆ ಸಂಬಂಧಿಸಿದ ಇತಿಹಾಸದೆಡೆಗೆ ಸತ್ಯಶೋಧನ ತನಿಖೆಗೆ ಆಗ್ರಹಿಸಿ ಹಾಗೂ 22 ಕೊಠಡಿಗಳ ಬಾಗಿಲನ್ನು ತೆರೆಯುವುದಕ್ಕೆ ಮನವಿ ಮಾಡಿ ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದನ್ನು ಸಂಸದರು ಬೆಂಬಲಿಸಿದ್ದಾರೆ. ಆಗ ನ್ಯಾಯಲಯಗಳು ಇರದ ಕಾರಣ ಬಹುಶಃ ದಾಖಲೆ ಮನವಿ ಸಲ್ಲಿಲು ಸಾಧ್ಯವಾಗಲಿಲ್ಲ, ಅಗತ್ಯವಾದರೆ ದಾಖಲೆಗಳನ್ನು ಈಗ ನೀಡಬಹುದೆಂದು ದಿಯಾಕುಮಾರಿ ಹೇಳಿದ್ದಾರೆ.

ಜೈಪುರದ ರಾಜಮನೆತನದ ಮಾಜಿ ರಾಜಕುಮಾರಿ ಮತ್ತು ಪ್ರಸ್ತುತ ಬಿಜೆಪಿ ಸಂಸದರಾಗಿರುವ ದಿಯಾ ಕುಮಾರ್ ಅವರು ಇದೀಗ ಜೈಪುರದಲ್ಲಿ ತಾಜ್ ಮಹಲ್‌ನ ಮುಚ್ಚಿದ ಬಾಗಿಲು ತೆರೆದರೆ ಅನೇಕ ರಹಸ್ಯಗಳು ಬಹಿರಂಗಗೊಳ್ಳುತ್ತವೆ ಎಂದು ಹೇಳಿಕೊಂಡಿದ್ದಾರೆ. ಒಂದು ರೀತಿಯಲ್ಲಿ ತಾಜ್ ಮಹಲ್ ನಮ್ಮ ಆಸ್ತಿ ಎಂದು ದಿಯಾ ಕುಮಾರಿ ಹೇಳಿದ್ದಾರೆ. ಈ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು, ಅದು ಪುರಾತನದಲ್ಲಿವಶಪಡಿಸಿಕೊಳ್ಳಲಾಗಿತ್ತು. ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು ನಮ್ಮ ಪರಂಪರೆಯಾದಾಗಿತ್ತು. ಈ ಪರಂಪರೆಯನ್ನು ತಿರುಚಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಪುಸ್ತಕ ಮಳಿಗೆಯಲ್ಲಿವೆ ಎಂದು ದಿಯಾ ಕುಮಾರಿ ಹೇಳಿದ್ದಾರೆ. ಕೋರ್ಟ್ ಹೇಳಿದರೆ ಅವರನ್ನೂ ಹಾಜರುಪಡಿಸಬಹುದು. ಮೊಘಲರು ಅದನ್ನು ವಶಪಡಿಸಿಕೊಂಡಿದ್ದಾರೆ ಎಂದು ದಿಯಾ ಕುಮಾರಿ ಹೇಳಿದ್ದಾರೆ.

‘ತಾಜ್‌ಮಹಲ್‌ ಕುರಿತು ಪುರಾತನ ವಿವಾದವೊಂದಿದೆ. ಅಲ್ಲಿ ಬೀಗ ಹಾಕಲ್ಪಟ್ಟ20 ಕೋಣೆಗಳು ಇದ್ದು, ಅಲ್ಲಿಗೆ ಹೋಗಲು ಯಾರನ್ನೂ ಬಿಡುತ್ತಿಲ್ಲ. ಆ ಕೋಣೆಗಳಲ್ಲಿ ಹಿಂದು ವಿಗ್ರಹ, ಧರ್ಮಗ್ರಂಥಗಳು ಇವೆ ಎನ್ನಲಾಗಿದೆ. ಆ ಬಗ್ಗೆ ಪರಿಶೀಲನೆ ನಡೆಸಲಿ ಎಂದು ಅರ್ಜಿ ಸಲ್ಲಿಸಿದ್ದೇನೆ. ಬೀಗ ತೆರೆದು ಕೊಠಡಿ ವೀಕ್ಷಿಸಿ, ವಿವಾದಕ್ಕೆ ತೆರೆ ಎಳೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಡಾ. ರಜನೀಶ್‌ ತಿಳಿಸಿದ್ದಾರೆ. ತಾಜ್ ಮಹಲ್ ಜಾಗದಲ್ಲಿ ಸ್ಮಾರಕ ನಿರ್ಮಿಸುವುದಕ್ಕೂ ಮುನ್ನ ಅಲ್ಲಿ ಏನಿತ್ತು? ಎಂಬುದರ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ ದ ದಿಯಾಕುಮಾರಿ.

ಬೀಗ ತೆರೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕು. ಕೋಣೆಗಳನ್ನು ಪರಿಶೀಲನೆ ನಡೆಸಲು ಹಾಗೂ ಹಿಂದು ವಿಗ್ರಹ, ಧರ್ಮಗ್ರಂಥಗಳ ಕುರುಹು ಹುಡುಕಲು ಸಮಿತಿಯೊಂದನ್ನು ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅಯೋಧ್ಯೆ ಜಿಲ್ಲಾ ಬಿಜೆಪಿ ಮಾಧ್ಯಮ ಉಸ್ತುವಾರಿ ಡಾ. ರಜನೀಶ್‌ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಇವರ ಹೇಳಿಕೆಯನ್ನು ಕೆಲವಿಷ್ಟು ಮಂದಿ ಖಂಡಿಸಿದ್ದು, ಇದು ಹಿಂದು – ಮುಸ್ಲಿಮರ ನಡುವಿನ ಸಾಮರಸ್ಯವನ್ನು ಹಾಳು ಮಾಡುವ, ಕೋಮು ಗಲಭೆ ಸೃಷ್ಟಿಸುವ ಹೇಳಿಕೆಯಾಗಿದೆ ಎಂದು ಆರೋಪಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *