ಉತ್ತರ ಪ್ರದೇಶ| ಭೂ ವಿವಾದ: ವೃದ್ಧ ದಲಿತ ಮಹಿಳೆಯನ್ನು ಥಳಿಸಿದ ವ್ಯಕ್ತಿ

ತ್ತರ ಪ್ರದೇಶ: ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಅಪರಾಧ ಕೃತ್ಯಗಳು ಮಾತ್ರ ಕಡಿಮೆ ಆಗುತ್ತಿಲ್ಲ. ಆರೋಪದ ನಡುವೆಯೇ ಇದೀಗ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧ ದಲಿತ ಮಹಿಳೆ ಮತ್ತು ಆಕೆಯ ಮಗನನ್ನ ವ್ಯಕ್ತಿಯೊಬ್ಬ ಥಳಿಸಿದ್ದಾನೆ. ಉತ್ತರ 

ಆರೋಪಿ ಆಶಿಶ್ ಪಾಂಡೆ ಮತ್ತು ಸಹಚರರು ಹಲವು ದಿನಗಳಿಂದ ದಲಿತ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದರು, ಈ ಸ್ಥಿತಿಯಲ್ಲಿ ದಿಢೀರ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ದೃಢ – ವೈರಸ್ ಹರಡದಂತೆ ಜಿಲ್ಲಾಡಳಿತ ಸಜ್ಜು

ಗೌರಿ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಭೂ ವಿವಾದ ಸಂಬಂಧ ಗಲಾಟೆ ನಡೆದಿದೆ ಎಂದು ಆರೋಪಿಸಲಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಪಡೆ ಕೂಡ ಅಲರ್ಟ್ ಆಗಿದ್ದು, ಗೌರಿ ಬಜಾರ್ ಪೊಲೀಸ್ ಠಾಣೆಯಲ್ಲಿ ಆಶಿಶ್ ಪಾಂಡೆ ಮತ್ತು ಮನೀಶ್ ಪಾಂಡೆ ವಿರುದ್ಧ SC/ST ಕಾಯ್ದೆ ಸೆಕ್ಷನ್ 117(2), 115(2), 352, 351(2), BNS ಮತ್ತು 3(2)5 ರ ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಆಶಿಶ್ ಪಾಂಡೆಯನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ.

ಇದನ್ನೂ ನೋಡಿ: ಕೋಲಾರ :- ರಾಜ್ಯಮಟ್ಟದ ಜಾನಪದ ಉತ್ಸವಕ್ಕೆSCSP/TSP ಹಣ ದುರ್ಬಳಕೆ – ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದ ಹೋರಾಟಗಾರರು

Donate Janashakthi Media

Leave a Reply

Your email address will not be published. Required fields are marked *