75ನೇ ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ: ಲಾಲ್‍ಬಾಗ್‌ನಲ್ಲಿ ಪುನೀತ್ ವಿಶೇಷದ ಫಲಪುಷ್ಪ ಪ್ರದರ್ಶನ

ಬೆಂಗಳೂರು: ನಗರದ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವ ಅಂಗವಾಗಿ ಫಲಪುಷ್ಪ ನಡೆಯಲಿದೆ. ಪ್ರದರ್ಶನಕ್ಕೆ ಇನ್ನೆರಡು ದಿನದಲ್ಲಿ ಚಾಲನೆ ಸಿಗಲಿದ್ದು, ಈ ಬಾರಿ ಡಾ. ರಾಜ್‌ಕುಮಾರ್‌ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ಫಲಪುಷ್ಪ ಪ್ರದರ್ಶನ ಸಮರ್ಪಣೆ ಮಾಡಲಾಗುತ್ತಿದೆ.

ಲಾಲ್‌ಬಾಗ್‌ನಲ್ಲಿನ ಫಲಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷತೆಯಲ್ಲಿ ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ನಡೆಯುತ್ತಿದ್ದು, ಇದರಲ್ಲಿ 35 ಅಡಿ ಪುನೀತ್ ಚಿನ್ನದ ಪ್ರತಿಮೆ ಇರುವ ಲೇಪನವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗುತ್ತದೆ. ಅದೇ ರೀತಿ ಡಾ. ರಾಜ್‌ಕುಮಾರ್ ವಾಸ ಮಾಡಿದ ಮನೆಯನ್ನು ಹೂವಿನ ಅಲಂಕಾರದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತೋಟಗಾರಿಕ ಸಚಿವ ಮುನಿರತ್ನ ತಿಳಿಸಿದ್ದಾರೆ.

ಗಾಜಿನ ಮನೆಯಲ್ಲಿ ವರ್ಷಪೂರ್ತಿ ಹೂವು ಬಿಡುವಂತಹ 65ಕ್ಕಿಂತ ಹೆಚ್ಚು ಹೂವು ಜೋಡಣೆ ಮಾಡಲಾಗುತ್ತಿದೆ. ಊಟಿಯಿಂದ ಈಗಾಗಲೇ ಹೂವಿನ ಗಿಡಗಳು ಬಂದಿದ್ದು, ಬೇರೆ ಬೇರೆ ದೇಶಗಳಿಂದ ಕೂಡ ಹೂವಿನ ಗಿಡ ಬಂದಿದೆ. ಹಂತ ಹಂತವಾಗಿ ಲಾಲ್‌ಬಾಗ್ ಅಭಿವೃದ್ಧಿ ಆಗುತ್ತಿದೆ. ಇನ್ನು ಹೆಚ್ಚಿನ ಗಮನ ಹರಿಸಿ ಅಭಿವೃದ್ಧಿ ಮಾಡುತ್ತೇವೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

ಆಗಸ್ಟ್‌ 5 ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 5 ರಂದು ಬೆಳಿಗ್ಗೆ 11 ಗಂಟೆಗೆ ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಉದಯ್ ಬಿ.ಗರುಡಾಚಾರ್ ವಹಿಸಲಿದ್ದಾರೆ. ಸಮಾರಂಭದಲ್ಲಿ ನಟರಾದ ಡಾ.ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಮತ್ತು ಅಶ್ವಿನಿ ಪುನೀತ್‌ ರಾಜ್‍ಕುಮಾರ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಎ.ದೇವೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಎಲ್‌.ಎನ್.ಎಸ್.ಪ್ರಸಾದ್, ರಾಜೇಂದರ್ ಕುಮಾರ್ ಕಟಾರಿಯಾ ವಿಶೇಷ ಅತಿಥಿಗಳಾಗಿ ಭಾಗವಹಿಸುವರು.

ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಫಲಪುಷ್ಪ ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಬಾರಿ ಟಿಕೆಟ್ ದರವನ್ನು ಇಳಿಕೆ ಮಾಡಲಾಗಿದ್ದೂ 75 ರೂಪಾಯಿ ದರ ನಿಗದಿಪಡಿಸಲಾಗಿದೆ. 10 ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ಬಾರಿ ಹೊರ ರಾಜ್ಯ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪುಷ್ಪ ಪ್ರದರ್ಶನದ ಅಂಗವಾಗಿ ಆಗಸ್ಟ್‌ 6 ಮತ್ತು 7 ರಂದು ಕುಂಡದಲ್ಲಿ ಹೂವಿನ ಗಿಡಗಳ ಪ್ರದರ್ಶನ, ಇಕೆಬಾನಾ , ಹೂವಿನ ಕಲೆ, ಬೋನ್ಸಾಲ್, ತರಕಾರಿ ಕೆತ್ತನೆ, ಥಾಯ್ ಕಲೆ ಮತ್ತು ಅಲಂಕಾರಿಕ ತೋಟಗಾರಿಕೆ ಸ್ಪರ್ಧೆಗಳು ಸಹ ನಡೆಯಲಿದೆ.

ಲಾಲ್‍ಬಾಗ್‍ನಲ್ಲಿ 1912 ರಿಂದ ನಡೆಸಲಾಗುತ್ತಿರುವ ಫಲಪುಷ್ಪ ಪ್ರದರ್ಶನ ದೇಶವಷ್ಟೇ ಅಲ್ಲ, ಜಗತಿನಲ್ಲೆ ದಾಖಲೆ ನಿರ್ಮಿಸಿದೆ. ತೋಟಗಾರಿಕಾ ಇಲಾಖೆ ಮೈಸೂರು ತೋಟಗಾರಿಕಾ ಸೊಸೈಟಿಯ ಸಹಯೋಗದಲ್ಲಿ ವರ್ಷಕ್ಕೆ ಎರಡು ಬಾರಿ ಪುಷ್ಪ ಪ್ರದರ್ಶನ ಆಯೋಜನೆ ಮಾಡುತ್ತಾ ಬರುತ್ತಿದೆ.

ಇದುವರೆಗೆ 211 ಬಾರಿ ಫಲಪುಷ್ಪ ಪ್ರದರ್ಶನ ನಡೆದಿದೆ. ಒಂದೂವರೆ ವರ್ಷದ ಬಳಿಕ ಈ ಬಾರಿ ಪ್ರದರ್ಶನ ನಡೆಯುತ್ತಿದ್ದೂ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ಸಾಧ್ಯತೆಗಳಿವೆ.

Donate Janashakthi Media

Leave a Reply

Your email address will not be published. Required fields are marked *