ಬೆಂಗಳೂರು, ಸೆ.02 : ಕೊವೀಡ್ ಸೋಂಕಿನಿಂದಾಗಿ ಜನ ಆರ್ಥಿಕವಾಗಿ ಸುಧಾರಿಸಿಕೊಳ್ಳುವ ಹೊತ್ತಿನಲ್ಲಿ ಶುಲ್ಕಗಳನ್ನು ಹೆಚ್ಚಿಸುವುದುರ ಮೂಲಕ ಬೆಂಗಳೂರಿನ ಜನತೆಗೆ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಿದೆ.
ಹೌದು ಕಳೆದ ದಿನಗಳಲ್ಲಿ ಬಿಬಿಎಂಪಿ ಪಾರ್ಕಿಂಗ್ ಚಾರ್ಜ್ ಹೆಚ್ಚಿಸಿ ಶಾಕ್ ನೀಡಿತ್ತು. ಈಗ ಅದೇ ಸರದಿಯಲ್ಲಿ ಲಾಲ್ ಬಾಗ್ ಉದ್ಯಾನಕ್ಕೆ ಪ್ರವೇಶ ದರ ಹಾಗೂ ವಾಹನ ನಿಲುಗಡೆ ಶುಲ್ಕವನ್ನು ಹೆಚ್ಚಿಸುವುದರ ಮೂಲಕ ಬೆಂಗಳೂರಿನ ಜನಕ್ಕೆ ತೋಟಗಾರಿಕೆ ಇಲಾಖೆ ಮತ್ತೊಂದು ಶಾಕ್ ಕೊಟ್ಟಿದೆ.
ಇದನ್ನು ಓದಿ : ಪಾರ್ಕಿಂಗ್ ನೀತಿ ಖಾಸಗಿ ಲೂಟಿಗೆ ಕಡಿವಾಣ ಹಾಕಿ
ಲಾಲ್ ಬಾಗ್ ಪ್ರವೇಶ ಶುಲ್ಕವನ್ನು ಹೆಚ್ಚಿಸಲು ಅನುಮತಿ ನೀಡುವಂತೆ ಕೋರಿ ತೋಟಗಾರಿಕಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ತೋಟಗಾರಿಕಾ ಇಲಾಖೆ ಸರ್ಕಾರಕ್ಕೆ ಲಾಲ್ ಬಾಗ್ ಪ್ರವೇಶ ಶುಲ್ಕವನ್ನು 10ರಿಂದ 20ರೂ.ಗಳಿಗೆ ಏರಿಸುವ ಪ್ರಸ್ತಾವನೆಯನ್ನು ಸಲ್ಲಿಸಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶುಲ್ಕ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ತನ್ನ ನಿರ್ಧಾರವನ್ನು ಇಲಾಖೆ ಸಮರ್ತಿಸಿಕೊಂಡಿದೆ.
ಇದನ್ನು ಓದಿ : ಕಸ ನಿರ್ವಹಣೆ ಶುಲ್ಕ ಹೆಚ್ಚಳ ವಿರೋಧಿಸಿ ಬಿಬಿಎಂಪಿ ಚಲೋ
ವಾಹನ ಪ್ರವೇಶ ದರ ಏರಿಕೆ ಕ್ರಮಕ್ಕೆ ಸಾರ್ವಜನಿಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರ ನಡೆಸುತ್ತಿರುವ ಹಗಲು ದರೋಡೆಯಾಗಿದೆ. ಕೋವಿಡ್ ಸಂಕಷ್ಟದಿಂದ ಜನರು ಇನ್ನು ಆರ್ಥಿಕವಾಗಿ ಸುಧಾರಿಸಿಲ್ಲ, ಒಂದರ ಮೇಲೊಂದರಂತೆ ಶುಲ್ಕ ಹೆಚ್ಚಿಸಿರುವುದು ಸರ್ಕಾರ ಕ್ರಮಕ್ಕೆ ವಿರೋಧ ವ್ಯಕ್ತಿಪಡಿಸಿದ್ದಾರೆ. ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡುತ್ತಿರುವುದು ಖಾಸಗೀ ಲೂಟಿಗೆ ಇನ್ನಷ್ಟು ಅವಕಾಶವನ್ನು ತಂದೊಡ್ಡುತ್ತಿದೆ, ಹಾಗಾಗಿ ಪಾರ್ಕಿಂಗ್ ನೀತಿಯನ್ನು ಕೈ ಬಿಡಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.