ಬೆಂಗಳೂರು: ಮೂವತ್ತು ಲಕ್ಷ, 60 ಲಕ್ಷ, ಕೊನೆಗೆ 1 ಕೋಟಿ ರೂ. ಹೀಗೆ ಲಕ್ಷ ಕೋಟಿ ರೂ. ಲೆಕ್ಕದಷ್ಟು ತೆರಿಗೆ ಪಾವತಿ ಮಾಡಿ ಎಂದು ಬೇಕರಿ, ಚಹಾ ಅಂಗಡಿ, ಕಾಂಡಿಮೆಂಟ್ಸ್ಗಳಿಗೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಚಹಾ
ಈ ನೋಟೀಸನ್ನು ವಿರೋಧಿಸಿ ಜುಲೈ 25 ರಂದು ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಧರಣಿ ಮಾಡುತ್ತೇವೆ ಎಂದು ಕಾಂಡಿಮೆಂಟ್ಸ್ ಮಾಲೀಕ ಚಿಕ್ಕಯ್ಯ ಎಚ್ಚರಿಸಿದ್ದಾರೆ.
ಅಲ್ಲದೇ ಜುಲೈ 21 ರೊಳಗೆ ಪಾವತಿ ಮಾಡದೇ ಇದ್ದರೆ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ತೆರಿಗೆ ಇಲಾಖೆ ನೀಡಿದೆ. ಈ ತೆರಿಗೆಯನ್ನು ಮನ್ನಾ ಮಾಡುವಂತೆ ಸರ್ಕಾರ ಹಾಗೂ ತೆರಿಗೆ ಇಲಾಖೆಗೆ ಈಗಾಗಲೇ ವರ್ತಕರು ಮನವಿ ಸಲ್ಲಿಕೆ ಮಾಡಿದ್ದು, ಹತ್ತು ದಿನಗಳ ಗಡುವು ನೀಡಿದ್ದಾರೆ.
ಇದನ್ನೂ ಓದಿ: ಕೊವಿಡ್ ಲಸಿಕೆಯಿಂದ ನರ ಮಂಡಲ್ ಸಮಸ್ಯೆ: ವರದಿ ಬಹಿರಂಗ
ಈ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕಯ್ಯ, ಸರ್ಕಾರ ಈ ತೆರಿಗೆ ಮನ್ನಾ ಮಾಡದಿದ್ದರೆ ವಿಷ ತಗೊಂಡು ಸಾಯುವುದಷ್ಟೇ ನಮಗೆ ದಾರಿ. ನಮ್ದು ಸಣ್ಣದಾದ ಕಾಂಡಿಮೆಂಟ್ಸ್ ಇದೆ. ಟೀ,ಕಾಫಿ, ಬ್ರೇಡ್, ಪೇಪರ್ ಮಾರಾಟ ಮಾಡುತ್ತೇವೆ. ನಮಗೆ ಈ ಜಿಎಸ್ಟಿ ಅಂದರೆ ಏನು ಎಂದು ಗೊತ್ತಿಲ್ಲ. ಏಕಾಏಕಿ 23 ಲಕ್ಷ ರೂ. ತೆರಿಗೆ ಪಾವತಿಸಿ ಎಂದರೆ ಹೇಗೆ? ನಾವು ಮಾಡಿರುವ ಸಾಲವನ್ನು ಪಾವತಿಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಹಾಲು, ಹಾಲಿನ ಉತ್ಪನ್ನ ಮಾರಾಟ ಮೂರು ದಿನ ಬಂದ್
- ಜುಲೈ 23, 24, 25 ರಂದು ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಬಂದ್.
- ಜುಲೈ 25 ರಂದು ರಾಜ್ಯಾದ್ಯಾಂತ ಕಾಂಡಿಮೆಂಟ್ಸ್, ಬೇಕರಿ, ಚಹಾ, ಬೀಡ ಅಂಗಡಿ ಬಂದ್.
- ಸಿಗರೇಟ್ ಮಾರಾಟವೂ ಬಂದ್.
- ಕೆಲ ತರಕಾರಿ ಅಂಗಡಿಯೂ ಬಂದ್.
23 ರಿಂದ ಹಾಲು, ಮೊಸರು, ಬ್ರೆಡ್ ಎಲ್ಲಾ ವ್ಯಾಪಾರ ನಿಲ್ಲಿಸುತ್ತೇವೆ. 25ಕ್ಕೆ ನಮ್ಮ ಅಂಗಡಿ ಬಂದ್ ಮಾಡಿ ಕುಟುಂಬದ ಜೊತೆಯಲ್ಲಿ, ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ಬಾರಿ ತೆರಿಗೆ ಮನ್ನಾ ಮಾಡಿಕೊಡಿ. ಮುಂದಿನ ದಿನಗಳಲ್ಲಿ ಪಾವತಿ ಮಾಡುತ್ತೇವೆ ಎಂದು ಚಿಲ್ಲರೆ ಅಂಗಡಿ ವ್ಯಾಪಾರೀಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಚನ್ನರಾಯಪಟ್ಟಣ| ಗೆದ್ದ ಅನ್ನದಾತ, ಮಣಿದ ಕಾರ್ಪೊರೇಟ್ ಧಣಿ! Janashakthi Media
