ಲಡಾಖ್‌ ಪ್ರವಾಸ: ಖರ್ದುಂಗ್‌ ಲಾಗೆ ಭೇಟಿ ನೀಡಿದ ರಾಹುಲ್‌ ಗಾಂಧಿ

ನವದೆಹಲಿ: ಲಡಾಖ್‌ ಪ್ರವಾಸದ ಕೈಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲೇಹ್‌ನ ಖರ್ದುಂಗ್‌ ಲಾಗೆ ಭೇಟಿ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾನುವಾರ ಲೇಹನ್‌ ಪ್ಯಾಂಗಾಂಗ್‌ ಸರೋವರದ ಬಳಿ ತಮ್ಮ ತಂದೆ ರಾಜೀವ್‌ ಗಾಂಧಿ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದರು.ಆಗಸ್ಟ್‌ 25ರವರೆಗೆ ರಾಹುಲ್‌ ಲಡಾಖ್‌ನಲ್ಲಿ ಇರಲಿದ್ದಾರೆ.

ಈ ಸಂದರ್ಭದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಹುಲ್‌ ಗಾಂಧಿಯವರು  ಭಾರತ ಮತ್ತು ಚೀನಾ ನಡುವಿನ ಗಡಿ ವಿಚಾರ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂಓದಿ:ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಪುನಃಸ್ಥಾಪಿಸಿದ ಲೋಕಸಭೆ ಸಚಿವಾಲಯ

ಲಡಾಖ್‌ನ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಮೋದಿ ಅವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಕಿಡಿಕಾರಿದ್ದರು. ಚೀನಾ ಸೇನೆ ಲಡಾಖನ ಹುಲ್ಲುಗಾವಲನ್ನು  ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರು ತಲ್ಲಣಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಚೀನಾ ಸೇನ ಒಳನುಸುಳಿ ತಮ್ಮ ಹುಲ್ಲುಗಾವಲು ವಶಪಡಿಸಿಕೊಂಡಿದೆ.ಅಲ್ಲಿಗೆ ಪ್ರವೇಶಿಸಲು ತಮಗ್ಯಾರಿಗೂ ಅವಕಾಶವಿಲ್ಲ ಎಂದು ಇಲ್ಲಿನ ಜನರು ಸ್ಜಷ್ಟವಾಗಿ ಹೇಳಿದ್ದಾರೆ ಎಂದಿದ್ದರು.

ಈಗಾಗಲೇ ಪ್ಯಾಂಗಾಂಗ್‌ಗೆ ಬಂದಿದ್ದೇನೆ. ನಂತರ ನುಬ್ರಾ ಮತ್ತು ಕಾರ್ಗಿಲ್‌ಗೆ ಭೇಟಿ ನೀಡಲಿದ್ದೇನೆ ಜನರ ಕಷ್ಟಗಳನ್ನು ಆಲಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *