ಶವ ಸಂಸ್ಕಾರಕ್ಕೆ ಜಾಗದ ಕೊರತೆ: ಮೀನುಗಾರ ಕುಟುಂಬಗಳ ಸಂಕಷ್ಟ

ಚಿಕ್ಕಮಗಳೂರು: ಮೀನುಗಾರ ಕುಟುಂಬಗಳು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾವೂರು ಕ್ಯಾಂಪ್‌ನಲ್ಲಿ ವಾಸಿಸುತ್ತಿದ್ದೂ, ಹಲವು ವರ್ಷಗಳಿಂದ ಶವ ಸಂಸ್ಕಾರಕ್ಕೆ ಜಾಗದ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿವೆ.

ಭದ್ರಾ ಹಿನ್ನೀರು ಪ್ರದೇಶದ ಮಧ್ಯದಲ್ಲಿ ವಾಸಿಸುತ್ತಿರುವ ಈ ಕುಟುಂಬಗಳಿಗೆ ಮಳೆಗಾಲ ಬಂದಾಗ ದೊಡ್ಡ ತೊಂದರೆ ಎದುರಾಗುತ್ತದೆ. ಹಿನ್ನೀರು ಮನೆಗಳ ಹಿಂಬಾಗಿಲವರೆಗೂ ಹರಿದು ಬರುತ್ತದೆ. ಈ ಕಾರಣದಿಂದ ಶವ ಸಂಸ್ಕಾರಕ್ಕೆ ಸೂಕ್ತವಾದ ಸ್ಥಳವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ವಿಫಲಗೊಂಡ ಬಾವಿಗಳನ್ನು ಮುಚ್ಚಲು ಕ್ರಮವಹಿಸಬೇಕು: ಜಿಲ್ಲಾಧಿಕಾರಿ ಲತಾಕುಮಾರಿ

ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲು ಮೃತದೇಹವನ್ನು ತೆಪ್ಪದಲ್ಲೇ ಹೊತ್ತೊಯ್ಯಬೇಕಾದ ಸ್ಥಿತಿ ಎದುರಾಗುತ್ತಿದೆ. ದಡದ ಬಳಿ ಮೊಣಕಾಲು ಮಟ್ಟದ ನೀರಿನಲ್ಲಿ ಶವ ಸಂಸ್ಕಾರ ಮಾಡುವಂತಾಗಿರುವುದು ಕುಟುಂಬಗಳ ಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಕ್ಯಾಂಪ್‌ನ ಜನರು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ, ಇನ್ನೂ ಶಾಶ್ವತ ಪರಿಹಾರ ದೊರೆತಿಲ್ಲ.

ಮಲೆನಾಡಿನ ಹಿನ್ನೀರು ಪ್ರದೇಶದಲ್ಲಿ ಜೀವಜೀವನ ಸಾಗಿಸುತ್ತಿರುವ ಮೀನುಗಾರ ಕುಟುಂಬಗಳ ಈ ಗೋಳು ಕೇಳಿ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.

ಇದನ್ನೂ ನೋಡಿ: Karnataka Legislative Assembly Live – Day 09 – ವಿಧಾನಸಭೆಯ ಮುಂಗಾರು ಅಧಿವೇಶನದ ನೇರ ಪ್ರಸಾರ – ದಿನ 9

Donate Janashakthi Media

Leave a Reply

Your email address will not be published. Required fields are marked *