ನಾರಾಯಣ ಮೂರ್ತಿ – ಸುಧಾ ಮೂರ್ತಿ ಲೇವಡಿ ಮಾಡಿದ ಕುನಾಲ್ ಕಾಮ್ರಾ

ವದೆಹಲಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಅಣಕಿಸುವ ವಿಡಿಯೊವನ್ನು ಕುನಾಲ್ ಕಮ್ರಾ ಚಿತ್ರೀಕರಿಸಿದ್ದು ಸಾಕಷ್ಟು ಸದ್ದು ಮಾಡಿತ್ತು. ಈಗ ಕುನಾಲ್‌   ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮತ್ತು ಅವರ ಪತಿ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯನ್ನು ತಮ್ಮ ಇತ್ತೀಚಿನ ‘ನಯಾ ಭಾರತ್’ ಕಾರ್ಯಕ್ರಮದಲ್ಲಿ ಲೇವಡಿ ಮಾಡಿದ್ದಾರೆ.

ಕುನಾಲ್ ಕಾಮ್ರಾ ತಮ್ಮ 45 ನಿಮಿಷಗಳ ಕಾರ್ಯಕ್ರಮದಲ್ಲಿ, ಸುಧಾ ಮೂರ್ತಿಯ ‘ಸರಳ’ ಜೀವನಶೈಲಿ ಮತ್ತು ನಾರಾಯಣ ಮೂರ್ತಿಯವರ ವಾರಕ್ಕೆ 70 ಗಂಟೆ ಕೆಲಸದ ಕುರಿತಾದ ಹೇಳಿಕೆಗಳನ್ನು ಟೀಕಿಸಿದ್ದಾರೆ.

‘ಶ್ರೀಮಂತರಾಗಿರುತ್ತಾರೆ ಆದರೆ, ಮಧ್ಯಮ ವರ್ಗಕ್ಕೆ ಸೇರಿದವರಂತೆ ನಟಿಸುತ್ತಾರೆ’ ಎಂದು ದೇಶದ ಶ್ರೀಮಂತ ಜನರ ಪ್ರಕಾರಗಳ ಬಗ್ಗೆ ಕುನಾಲ್ ಕಾಮ್ರಾ ಮಾತನಾಡಿದ್ದಾರೆ. ಸುಧಾ ಮೂರ್ತಿ ಅವರು ‘ಸರಳ ಎಂದು ಹೇಳಿಕೊಳ್ಳುವವರಲ್ಲಿ ಒಬ್ಬರು’ ಎಂದು ಅವರು ಹೇಳಿದರು.

ಇದನ್ನೂ ಓದಿ: ಮಧ್ಯಪ್ರದೇಶ| ಬಡ ಯುವಕನಿಗೆ 6 ಕೋಟಿ ರೂ. ತೆರಿಗೆ ನೋಟಿಸ್

‘ಮಧ್ಯಮ ವರ್ಗದವರಂತೆ ನಟಿಸುವ ಶ್ರೀಮಂತರಲ್ಲಿ, ಸುಧಾ ಮೂರ್ತಿ ಎಂಬ ಮಹಾನ್ ಮಹಿಳೆ ಇದ್ದಾರೆ. ಅವರು ಸರಳತೆಯ ಪ್ರತಿರೂಪ. ಅವರು ಸರಳರು ಎಂಬುದು ಅವರ ವಾದ. ಅವರು ತಮ್ಮ ಸರಳತೆ ಕುರಿತು 50 ಪುಸ್ತಕಗಳನ್ನು ಬರೆದಿದ್ದಾರೆ. ಯಾವುದೇ ವಿಮಾನ ನಿಲ್ದಾಣದಲ್ಲಿ ನೋಡಿದರೂ, ಸುಧಾ ಮೂರ್ತಿ ಅವರಿಗೆ ಮೀಸಲಾಗಿರುವ ಪುಸ್ತಕ ವಿಭಾಗವನ್ನು ನೀವು ಕಾಣಬಹುದು ಮತ್ತು ಅಲ್ಲಿರುವ ಪ್ರತಿ ಪುಸ್ತಕದ ವಿಷಯವೆಂದರೆ ಅವರು ಸರಳರು’ ಎಂಬುದಾಗಿದೆ ಎಂದರು.

‘ಒಮ್ಮೆ, ನಾನು (ಸುಧಾ ಮೂರ್ತಿ) ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದವರ ಬಳಿಗೆ ಹೋದೆ, ಮತ್ತು ಆತ ನನಗೆ 100 ರೂ.ಗೆ ಎಂಟು ಮಾವಿನ ಹಣ್ಣುಗಳನ್ನು ನೀಡಿದನು. ನಂತರ, ಒಬ್ಬ ಮಹಿಳೆ ಕಾರ್ಪೊರೇಟ್ ಉಡುಪಿನಲ್ಲಿ ಬಂದರು ಮತ್ತು ಮಾರಾಟಗಾರ ಆಕೆಗೆ ಎಂಟು ಮಾವಿನ ಹಣ್ಣುಗಳನ್ನು 150 ರೂ.ಗೆ ಕೊಟ್ಟನು. ನಾನು ಆತನ ಬಳಿಗೆ ಹೋಗಿ, ‘ನೀವು ನನಗೆ ಕಡಿಮೆ ಬೆಲೆಗೆ ಮಾವಿನ ಹಣ್ಣನ್ನು ಏಕೆ ಕೊಟ್ಟಿದ್ದೀರಿ?’ ಎಂದು ಕೇಳಿದೆ. ಅದಕ್ಕೆ ಆತ, ಆ ಮಹಿಳೆ ಇನ್ಫೋಸಿಸ್ ಎಂಬ ಅಂತರರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದರು’ ಎಂದು ಸುಧಾ ಮೂರ್ತಿಯವರ ಕಥೆಯನ್ನು ಅನುಕರಿಸಿದರು.

‘ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಲು ಏಕೆ ಬಯಸುತ್ತಾರೆಂದು ಈಗ ನಿಮಗೆ ಅರ್ಥವಾಗಿದೆಯೇ? ಸುಧಾ ಮೂರ್ತಿ ಅವರು ‘ಮೈ ಸಿಂಪಲ್ ಹುಂ’ (ನಾನು ಸಿಂಪಲ್) ಎಂದು ಆಗ್ಗಾಗ್ಗೆ ಹೇಳುತ್ತಲೇ ಇರುತ್ತಾರೆ. ಅವರ ಸರಳತೆಯು ನಾರಾಯಣ ಮೂರ್ತಿಯವರಿಗೆ ಸಂಕಷ್ಟದಂತೆ ಕಂಡಿದೆ. ಹೀಗಾಗಿಯೇ ನಾರಾಯಣ ಮೂರ್ತಿ ಅವರು ‘ಮೈ ಘರ್ ಕೆ ಬಾಹರ್ ಹು’ (ನಾನು ಮನೆಯಿಂದ ಹೊರಗಿದ್ದೇನೆ) ಎಂದು ಹೇಳುತ್ತಾರೆ. ಅಂದರೆ, ಅವರು ಹೆಚ್ಚಾಗಿ ಕೆಲಸದಲ್ಲಿ ಮುಳುಗಿರುತ್ತಾರೆ’ ಎಂದರು.

ಭಾರತೀಯ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಕಳೆದ ವರ್ಷ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಬಳಿಕ ಮುಂಬೈನ ಎಎಂಸಿಯ ಕಿಲಾಚಂದ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡುವಾಗ ಸ್ಪಷ್ಟನೆ ನೀಡಿದ್ದ ಅವರು, ಯಾರೊಬ್ಬರು ಯಾರ ಮೇಲೂ ಒತ್ತಾಯಪೂರ್ವಕವಾಗಿ ಅದನ್ನು ಹೇರುವಂತಿಲ್ಲ ಎಂದಿದ್ದರು.

ಸುಧಾ ಮೂರ್ತಿಯವರ ಬಗ್ಗೆ ಮಾತು ಮುಂದುವರಿಸಿದ ಕುನಾಲ್ ಕಾಮ್ರಾ, ‘ಎರಡು ವರ್ಷ ಅವರು ಇಡೀ ಯುಕೆಯ ಅತ್ತೆಯಾಗಿದ್ದರು. ಈ ಸರಳತೆ ಹೇಗಿದೆ? ಅವರು ರಾಜ್ಯಸಭೆಗೆ ಹೋಗುತ್ತಿದ್ದಾರೆ. ಅದು ಕೂಡ ಸರಳವಾಗಿ’ ಎಂದು ಕುಟುಕಿದ್ದಾರೆ.

ಇದನ್ನೂ ನೋಡಿ: ರಂಗಭೂಮಿ ದಿನ | ಜರ್ನಿ ಥಿಯೇಟರ್ ತಂಡದಿಂದ ರಂಗಗೀತೆಗಳು Janashakthi Media

Donate Janashakthi Media

Leave a Reply

Your email address will not be published. Required fields are marked *