ಮಂಗಳೂರು: ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ಏಪ್ರಿಲ್ 27ರಂದು ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ, ಅಶ್ರಫ್ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್, ಹೆಡ್ ಕಾನ್ಸ್‌ಟೇಬಲ್ ಚಂದ್ರ.ಪಿ ಮತ್ತು ಕಾನ್ಸ್‌ಟೇಬಲ್ ಯಲ್ಲಾಲಿಂಗ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ .
ಇದನ್ನು ಓದಿ :-ಸಂಪತ್ತನ್ನು ಸೃಷ್ಟಿಸಿದ ವಿಶ್ವ ಕಾರ್ಮಿಕ ದಿನದ ಮಹತ್ವ
ಘಟನೆಯ ದಿನ, ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ ಅಶ್ರಫ್ ಮತ್ತು ಸಚಿನ್ ಎಂಬ ವ್ಯಕ್ತಿಯ ನಡುವೆ ವಾಗ್ವಾದ ಉಂಟಾಗಿ, ಬಳಿಕ 25-30 ಮಂದಿಯ ಗುಂಪು ಅಶ್ರಫ್ ಮೇಲೆ ಹಲ್ಲೆ ನಡೆಸಿದ ಪರಿಣಾಮ, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ..
ಇದನ್ನು ಓದಿ :-ವಿಮೋಚನೆಗೆ 50 ವರ್ಷ : ಹಮಾರಾ ನಾಮ್, ತುಮಾರಾ ನಾಮ್, ವಿಯೇಟ್ನಾಂ ವಿಯೇಟ್ನಾಂ !
ಪೊಲೀಸರು ಪ್ರಾರಂಭದಲ್ಲಿ ಈ ಘಟನೆಯನ್ನು ಅಸಹಜ ಸಾವು ಎಂದು ದಾಖಲಿಸಿದರೂ, ನಂತರದ ತನಿಖೆಯಲ್ಲಿ ಕೊಲೆ ಪ್ರಕರಣವಾಗಿ ಪರಿವರ್ತನೆಗೊಂಡಿದೆ.