ಸಿರುಗುಪ್ಪ: ಸಾರಿಗೆ ಸಂಸ್ಥೆ ಬಸ್ ಒಂದು ರಾಷ್ಟ್ರೀಯ ಹೆದ್ದಾರಿ 150 ಎ ಭೈರಾಪುರ – ಸಿರಿಗೇರಿ ಕ್ರಾಸ್ ಬಳಿ ಕುರಿಗಳ ಮೇಲೆ ಹಾಯ್ದ ಪರಿಣಾಮ 45ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಈ ಘಟನೆಯು ಕೂಡ್ಲಿಗಿ ತಾಲ್ಲೂಕಿನ ಬೊಮ್ಮಘಟ್ಟ ಗ್ರಾಮದ ಕುರಿಗಾಹಿಗಳಿಗೆ ಸೇರಿದ ಕುರಿಮಂದೆ ಭೈರಾಪುರ ಹೆದ್ದಾರಿ ಪಕ್ಕದ ಹೊಲಗಳಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಸಂಭವಿಸಿದೆ. ಹಾಯ್ದ
ಇದನ್ನೂ ಓದಿ: ಭಾರತೀಯ ಸಂಸ್ಕೃತಿ ಉತ್ಸವ ಎಂಬ ಧತ್ತೂರಿ ಮರ
ಕಲಬುರಗಿಯಿಂದ ಬಳ್ಳಾರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕುರಿ ಮೇಲೆ ಹರಿದ ಪರಿಣಾಮ 15 ಲಕ್ಷ ಮೌಲ್ಯದ 45ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಅಲ್ಲದೆ 20ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ.
ಸಿರಿಗೇರಿ ಹಾಗೂ ತೆಕ್ಕಲಕೋಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಬದುಕುಳಿದ ಕುರಿಗಳ ರಕ್ಷಣಾ ಕಾರ್ಯ ನಡೆಸಿದರು. ಈ ಬಗ್ಗೆ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ನೋವು ಮೆಟ್ಟಿ ಬದುಕು ಕಟ್ಟಿಕೊಳ್ಳೊಣ – ಪಪ್ಪೆಟ್ ಜಾನು ಜೊತೆ ಮಾತುಕತೆ Janashakthi Media