ಟಿ. ನರಸೀಪುರ: ಸಾರ್ವಜನಿಕರಿಂದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಗುತ್ತಿಗೆದಾರರು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಸೇವಾಶ್ರಯ ಫೌಂಡೇಶನ್ ಸಂಸ್ಥಾಪಕ ಗಂಭೀರ ಆರೋಪ ಮಾಡಿದ್ದಾರೆ. ಬಸ್
ಎರಡು ದಿನಕ್ಕೆ ದ್ವಿಚಕ್ರ ವಾಹನಕ್ಕೆ 70 ರೂಗಳನ್ನು ಪಡೆದರೆ ಸಾರ್ವಜನಿಕರು ಎಲ್ಲಿಂದ ಬರಿಸಬೇಕು. ಇಂದಿನ ಟಿಸಿ ಅಧಿಕಾರಿಗಳಿಗೆ ದೂರು ಹೇಳಿದರೆ ಇದೇ ರೀತಿ ದೂರುಗಳು ಬಂದಿವೆ ಮೇಲಾಧಿಕಾರಿಗಳ ತಿಳಿಸಿದ್ದೇವೆ ಎಂದು ಸಹಾಯಕರಾಗಿದ್ದಾರೆ ಎಂದರು.
ಇದನ್ನೂ ಓದಿ: ಫ್ಯಾಸಿಸ್ಟ್ ಮತ್ತು ನವ-ಫ್ಯಾಸಿಸ್ಟ್ ಗುಣಲಕ್ಷಣಗಳು ಎಂಬುದರ ಚರ್ಚೆಯ ಸುತ್ತ
ಕೆ ಎಸ್ ಆರ್ ಟಿ ಸಿ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಾರೆ. ಇಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸಂಬಂಧಪಟ್ಟ ಕೆ ಎಸ್ ಆರ್ ಟಿ ಸಿ ಇಲಾಖೆಯವರು ಪಾರ್ಕಿಂಗ್ ನಲ್ಲಿ ಹಣ ಸುಲಿಗೆ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಕೆ ಎಸ್ ಆರ್ ಟಿ ಸಿ ಇಲಾಖೆಯವರು ನೀಡಿರುವ ನಿಗದಿ ದರ ಫಲಕವನ್ನು ಸಾರ್ವಜನಿಕವಾಗಿ ಅಳವಡಿಸಬೇಕು ಇಲ್ಲವಾದಲ್ಲಿ ವಿರುದ್ಧವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆರ್ ಮಣಿಕಂಠ ರಾಜ್ ಗೌಡ ಎಚ್ಚರಿಕೆ ನೀಡಿದರು.
ಇದನ್ನೂ ನೋಡಿ: CITU| ಶ್ರಮಿಕರ ಅಹೋರಾತ್ರಿ ಹೋರಾಟ 5ನೇ ದಿನಕ್ಕೆ | ಅಂಗವಾಡಿ ನೌಕರರ ಸಂಘಟನೆಯಿಂದ ಧರಣಿ