ಶಿಕಾರಿಪುರ: ಕೃಷಿಕೂಲಿಕಾರರ ನಡುವೆ ನಿರಂತರವಾಗಿ ಸಂಘಟನಾತ್ಮಕವಾಗಿ ಚಳುವಳಿಯನ್ನು ನಡೆಸುವುದರೊಂದಿಗೆ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಗಳನ್ನು ನಡೆಸುತ್ತಿರುವ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು)ದ ಮಾಯತಮ್ಮನಮುಚುಡಿ ಗ್ರಾಮ ಘಟಕ ರಚನೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾಯತಮ್ಮನಮುಚುಡಿ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ ಅವರು ಸಂಘದ ಸದಸ್ಯತ್ವ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಂಘಟನೆ ವಿಸ್ತರಣೆ ಬಗ್ಗೆ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಕೃಷಿಕೂಲಿಕಾರರ ಪ್ರಶ್ನೆಗಳು ಹಾಗೂ ಬೆಲೆ ಏರಿಕೆ, ಕೃಷಿ ನೀತಿಗಳು ಮತ್ತು ಆಳುವ ಸರಕಾರಗಳು ಅನುಸರಿಸುತ್ತಿರುವ ಜನವಿರೋಧಿ ನೀತಿಗಳ ಬಗ್ಗೆ ಕೂಲಿಕಾರರಲ್ಲಿ ವಿಷಯವನ್ನು ಪ್ರಸ್ತಾಪಿಸಿದರು.
ಮಾಯತಮ್ಮನಮುಚುಡಿ ಗ್ರಾಮಘಟಕದ ಅಧ್ಯಕ್ಷರಾಗಿ ರಾಜೇಂದ್ರ.ಹ.ಭೋವಿ, ಉಪಾಧ್ಯಕ್ಷರಾಗಿ ಕುಮಾರ್.ಶೇ.ತಳವರ, ಕಾರ್ಯದರ್ಶಿಯಾಗಿ ಹನುಮಂತ ಭೋವಿ, ಸಹಕಾರ್ಯದರ್ಶಿಯಾಗಿ ಮಂಜುನಾಥ.ಶೇ.ಮಡುವಾಳರ ಖಜಾಂಚಿಯಾಗಿ ಷಣ್ಮುಖ. ಬಿ, ಸದಸ್ಯರಾಗಿ ಗಂಗಮ್ಮ, ಸರೋಜಮ್ಮ, ಹನುಮ್ಮ, ಗೀರಿಜಾಮ್ಮ, ನಾಗಮ್ಮ ಆಯ್ಕೆಯಾಗಿದ್ದಾರೆ.