ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯ್ದೆಗಳನ್ನುರದ್ದು ಪಡಿಸಲು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳೆಯರ ವಿಧಾನಸೌಧ ಚಲೋ ನಡೆಸುವುದರ ಮೂಲಕ ರಾಜಧಾನಿಯಲ್ಲಿ ರೈತ ಕಹಳೆ ಮೊಳಗಿಸಿದರು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಸಾವಿರ ಸಾವಿರ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳೆಯರು ಮರೆವಣಿಗೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗಾರಿಯನ್ನು ಬಾರಿಸುವುದುರ ಮೂಲಕ ಕಾರ್ಯಕ್ರ ಉದ್ಘಾಟಿಸಲಾಯಿತು. ರೈತ ಗೀತೆ ಉಳುವಾ ಯೋಗಿಯ ನೋಡಲ್ಲಿ ಗೀತೆ ರೈತರಿಗೆ ಮತ್ತಷ್ಟು ಉತ್ಸಾಹವನ್ನು ತುಂಬಿತು.
ಸಂಯುಕ್ತ ಹೋರಾಟ ಕರ್ನಾಟಕ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ರೈತ ರಾಷ್ಟ್ರ ನಾಯಕಾರದ ರಾಕೇಶ್ ಸಿಂಗ್ ಟಿಕಾಯತ್, ಡಾ.ದರ್ಶನ್ ಪಾಲ್, ಯುದ್ಧವೀರ ಸಿಂಗ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುದ್ಧವೀರ ಸಿಂಗ್ : ರೈತ ನಾಯಕ ಯುದ್ಧವೀರ್ ಸಿಂಗ್ ಮಾತನಾಡಿ, ಈ ಆಂದೋಲನ ಸುದೀರ್ಘ ಆಂದೂಲನ, ನಮ್ಮ ಬೇಡಿಕೆಗಳನ್ನೂ ಸರ್ಕಾರ ಈಡೇರಿವರೆಗೂ ಈ ಹೋರಾಟ ನಿಲ್ಲುವುದಿಲ್ಲ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟದಂತೆ ಬೆಂಗಳೂರನ್ನೇ ದೆಹಲಿಯಾಗಿ ಮಾಡಿ ಹೋರಾಟವನ್ನು ಮುಂದುವರೆಸೋಣ ಕರ್ನಾಟಕದಲ್ಲಿ ನಡೆಯುವ ಈ ಹೋರಟಕ್ಕೆ ಧೈರ್ಯ ತುಂಬಬೇಕು ಎಂದರು.
ರಾಕೇಶ್ ಟಿಕಾಯತ್ : ರಾಷ್ಟ್ರ ರೈತ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಯುತ್ತಿರುವ ಈ ಹೋರಾಟ ಎರಡನೇ ಸ್ವಾತಂತ್ಯ ಹೋರಾಟವಾಗಿದೆ. ಈ ಹೋರಾಟಕ್ಕೆ ನಾವು ಕೈ ಜೊಡಿಸಬೇಕು. ಈ ಹೋರಾಟದಿಂದ ಹಿಂದೆ ಸರಿಯಬೇಡಿ. ಸರ್ಕಾರ ಈ ಹೋರಾಟವನ್ನು ಕಟ್ಟಿಹಾಕುತ್ತಿದೆ. 26 ಸಾರ್ವಜನಿಕ ಕಂಪನಿಗಳನ್ನು ಖಾಸಗೀಕರಣಕ್ಕೆ ಮುಂದಾಗಿದೆ. ಜನರ ಸಮಸ್ಯೆಗಳನ್ನು ಪರಿಹರಿಸದೇ, ಧರ್ಮದ ಅಫೀಮು ಬಿತ್ತು ಅವರನ್ನು ಕಟ್ಟಿಹಾಕುತ್ತಿದ್ದಾರೆ. ಮಣ್ಣು ವ್ಯಾಪಾರಕ್ಕೆ, ಆಹಾರ ವ್ಯಾಪಾರಕ್ಕೆ ಖಾಸಗಿ ಕಂಪನಿಗಳು ಮುಂದಾಗಿವೆ. ಹಸಿವಿನ ಮೇಲಿನ ವ್ಯಾಪಾರ ಮಾಡುತ್ತಿದ್ದಾರೆ.
ರೈತರು ಬೆಳದ ಆಹಾರ ಗೋಡಾನಿಗೆ ಸೇರಿತ್ತಿವೆ, ಕನಿಷ್ಠ ಬೆಂಬಲ ಬೆಲೆ ಪ್ರಸ್ಥಾಪ ಬರುತ್ತಿಲ್ಲ. ಖಾಸಗೀ ಕಂಪನಿಗಳು ಬಹಳ ದೊಡ್ಡ ಪ್ರಭಾವ ಬಂದಿದೆ. ರೈತರು ಯುವಜನರು ಜಾಗೃತಿಗೊಳಬೇಕು. ಯಾಕಂದ್ರೆ ಉದ್ಯೋಗ ನೀಡದೇ ಅವರನ್ನು ಶಿಕ್ಷಿಸುತ್ತಿದೆ. ಸೈನಿಕರಿಗೆ, ರೈತರಿಗೆ ಪಿಂಚಣಿ ಇಲ್ಲ. ಎಂ ಎಲ್ ಎ ಯವರಿಗೆ ಪಿಂಚಣಿ ನಿಲ್ಲಿಸಿ. ಬೆಲೆ ಏರಿಕೆ ಜಾಸ್ತಿಯಾಗಿದೆ. ಬಿಜೆಪಿ ಆಡಳಿತ ಬಂದನಂತರ ಸಂಕಷ್ಟಗಳು ಹೆಚ್ಚಾಗಿವೆ. ಹಾಗಾಗಿ ನೀವು ಹೋರಾಟ ಮುಂದುವರೆಸಿ ಬಿಡಬೇಡಿ ಎಂದು ಜನರು ನಮಗೆ ಹೇಳುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಆಂದೋಲವನ್ನು ಹುಟುಹಾಕಬೇಕಿದೆ. ಟ್ರ್ಯಾಕ್ಟರ್ ಗಳ ಮೂಲಕ ದೆಹಲಿ ಗಡಿಯಲ್ಲಿ ರೈತರು ಬ್ಯಾರಿಕೇಟ್ ಮುರಿದು ಹೋರಾಟಕ್ಕೆ ಮುಂದಾಗಿದ್ದಾರೆ. ಹಾಗಾಗಿ 10 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಟ್ರ್ಯಾಕ್ಟರ್ ಬ್ಯಾನ ಮಾಡಬೇಕೆಂದು ಸರ್ಕಾರ ಹೇಳುತ್ತಿದೆ. ಆದರೆ ರೈತ 10 ವರ್ಷಕ್ಕೆ ಟ್ರ್ಯಾಕ್ಟರ್ ಕೊಳ್ಳಲು ಸಾಧ್ಯವೆ? ವಿದ್ಯುತ್ ಕಾಯ್ದೆ ತಂದಿದ್ದಾರೆ. ಇದರಿಂದ ಬಡ ಜನರಿಗೆ ತೊಂದರೆ ಉಂಟಾಗಿದೆ. ಮಾರುಕಟ್ಟೆ ಬೇಕಾಗಿಲ್ಲ ರೈತ ಎಲ್ಲಿಬೇಕು ಅಲ್ಲೇ ಮಾರಿ ಎಂದು ಸರ್ಕಾರ ಹೇಳುತ್ತದೆ. ಈ ಆಂದೋಲಕ್ಕೆ ಯುವಜನರು ಈ ಹೋರಾಟಕ್ಕೆ ದೊಡ್ಡ ಸಂಖ್ಯೆಯಲ್ಲಿ ಮುನ್ನುಗ್ಗಬೇಕು. ನಮ್ಮ ಭೂಮಿಯನ್ನು ಮಾರುವುದಿಲ್ಲ, ನಮ್ಮ ಭೂಮಿ ಉಳಿವಿಗಾಗಿ ಎಂದು ಹೇಳಬೇಕು ಎಂದರು. ಪಿಂಚಣಿ ಇಲ್ಲದವರಿಗೆ ಪಿಂಚಣಿ, ಮನೆ ಇಲ್ಲದವರಿಗೆ ಮನೆಗಳನ್ನು ಕೊಡಬೇಕು ಎಂದರು.
ಯು ಬಸವರಾಜ್ : ಈ ರೈತರ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಆಂದೋಲನ ಎಂದ ಯುು. ಬಸವರಾಜ, ಜಮೀದಾರಿ, ಜಾವೀದಾರಿ ಮುಷ್ಠಿಯಿಂದ ಭೂಮಿಯನ್ನು ಬಿಡುಗಡೆಗೊಳಿಸಲು ಅಂದು ಹೋರಾಟ ಮಾಡಿದರೆ ಇಂದು ಕಾರ್ಫೋರೇಟ್ ಕುಳಗಳಿಂದ ನಮ್ಮ ಭೂಮಿಯನ್ನು ನಾವು ರಕ್ಷಿಸಬೇಕಿದೆ. ಈ ಹೋರಾಟಕ್ಕೆ ಭಾಗವಹಿಸಿರುವ ಕಾರ್ಮಿಕರು, ರೈತರು, ಮಹಿಳೆಯರಿಗೆ, ದಲಿತರು, ಯುವಜನ,ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಈ ಆಂದೋಲ ಮುಂದುವರೆಯುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಕಾರ್ಪೋರೇಟ್ ಗುಲಾಮರಾಗಿ ಕೆಲಸ ಮಾಡುತ್ತಿದೆ. ರೈತರ ಕುಟುಂಬದ ಸರಾಸರಿ ಆದಾಯ ಕಡಿಯಾಗಿದೆ, ಇವರದೇ ಆದಾಯ ಈಗಾದರೆ ಕೂಲಿಕಾರರರು, ದಲಿತರು, ಕಾರ್ಮಿಕರು, ಮಹಿಳೆಯರ ಪರಿಸ್ಥಿತಿ ಹೇಗೆ? ಹಾಗಾಗಿ ಈ ದೇಶದ ತಲಾ ಆದಾಯವನ್ನು ಹೆಚ್ಚಿಸಬೇಕು. ಬೇಕಾದಾಗ ಬೆಲೆ ಏರಿಕೆ, ಬೇಡವಾದಾಗ ಇಳಿಸಿ ರೈತರುನ್ನು ಲೂಟಿ ಮಾಡುತ್ತಿರುವ ಸರ್ಕಾರದ ವಿರುದ್ಧ ಕಿಡಿಕಾರಿದರು. ಅನೇಕ ಜನ ಇದು ಎರೆಡನೇ ಸ್ವಾತಂತ್ರದ ಹೋರಾಟ ಮಾತ್ರವಲ್ಲ, 20-21 ಸಾಲಿನ ದೊಡ್ಡ ಅಲೆಯಾಗಿದೆ, ರೈತ ವಿರೋಧಿ ಕಾಯ್ದೆ ತಂದ್ರು, ಕೋರೋನಾ ಟೈಮ್ ನಲ್ಲಿ ರಾಜ್ಯ ಕೇಂದ್ರಗಳು, ರೈತವಿರೋಧಿ ಕಾಯ್ದೆ ತಂದಿದ್ದಾರೆ. ಯಾರು ರೈತರ ಪರವಾಗಿ ನಿಲ್ಲಿತ್ತಾರೋ ಅವರೇ ದೇಶ ಭಕ್ತರು ಎಂದರು.
ನಟ ಚೇತನ್ : ಕೃಷಿ ಕಾಯ್ದೆ ರದ್ದತಿಗಾಗಿ ಇಂದು ನಡೆದ ರೈತರ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಚಿತ್ರನಟ ಚೇತನ್ ಭಾಗವಹಿಸಿ ಮಾತನಾಡುತ್ತಾ, ಅನ್ನದಾತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ ಅವರನ್ನು ಭಯೋತ್ಪಾದಕರು, ಖಲೀಸ್ತಾನಿಗಳು, ದೇಶದ್ರೋಹಿ ಎಂದು ಬಿಂಬಿಸಿದರು. ರೈತರು ಅಂಬೇಡ್ಕರ್, ಗಾಂಧಿಯವರ ಹಾದಿಯಲ್ಲಿ ಶಾಮತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಅವರು ಹಿಂಸೆ ಮಾಡಲಿಲ್ಲ. ಆದರೆ ರೈತರ ಮೇಲೆ ಹಿಂಸೆ ಮಾಡುತ್ತಿರುವವರು ಭಯೋತ್ಪಾದಕರು, ರೈತರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಅವರು ದೇಶದ್ರೋಹಿಗಳು. ಮಣ್ಣಿನ ಮಕ್ಕಳು ಎಂದು ರೈತರ ವಿರೋಧಿಯಾಗಿದ್ದಾರೆ, ಮುಖ್ಯಮಂತ್ರಿಗಳು ಹಸಿರು ಶಾಲು ಹಾಕುತ್ತಾರೆ ಆದರೆ ರೈತರಪರವಾಗಿಲ್ಲ, ಉತ್ತಮ ಸಮಾಜ ಕಟ್ಟಲು ಕುವೆಂಪು, ಅಂಬೇಡ್ಕರ್, ಗಾಂಧಿ, ಬಸವ ಅವರ ಹಾದಿಯಲ್ಲಿ ನಡೆಯೋಣ ಈ ಹೋರಾಟವನ್ನು ಮತ್ತಷ್ಟು ಹೆಚ್ಚಿಸೋಣ ಎಂದರು.
ಶಿವಪ್ರಕಾಶ : ರೈತ ಮುಖಂಡ ಶಿವಪ್ರಕಾಶ ಮಾತನಾಡಿ, ಎರಡನೇ ಬಾರಿ ಅಧಿಕಾರ ಬಂದರೂ ಸ್ವಾವಲಂಬನೇಯಾಗಿ ಬದುಕಲು ಬಿಡುತ್ತಿಲ್ಲ, ಗೋಹತ್ಯೆ, ಹೊಸ ಕೃಷಿ ಕಾಯ್ದೆ ಜಾರಿಗಳಿಸುವುದ ಮೂಲಕ ಬಡಜನರ ಮೇಲೆ ದಮನ ಮಾಡುತ್ತಿದ್ದಾರೆ. ಅವರ ಆಹಾರ ಹಕ್ಕುನ ಮೇಲೆ ದಾಳಿಮಾಡುತ್ತಿದ್ದಾರೆ. ಸ್ವಾಭಿಮಾನ ಮತ್ತು ಸ್ವಾವಲಂಬನೆ ಬದುಕಿಗಾಗಿ ರೈತರು ಹಗಲಿರುಳು ಹೋರಾಟ ಮಾಡುತ್ತಿದ್ದಾರೆ. ತನ್ಮೋಲಕ ಈ ದೇಶವನ್ನು ಸರ್ಕಾರ ಸರ್ವಾಧಿಕಾರ ಜಾರಿಮಾಡಲು ಹೋರಟಿದೆ. ಮೂರನೇ ಬಾರಿ ಈ ರೀತಿಯ ತಪ್ಪಾಗದಂತೆ ಮೋದಿ ಸರ್ಕಾರವನ್ನು ಅಧಿಕಾರದಿಂದ ಇಳಿಸೋಣ ಎಂದು ಕರೆಕೊಟ್ಟರು.
ಆರ್ ಕೆ ಎಸ್ ದಿವಾಕರ್ : RKS ನ ದಿವಾಕರ್ ಮಾತನಾಡುತ್ತಾ, ರಾಜ್ಯದ ವಿವಿಧ ಜಿಲ್ಲೆಯಿಂದ ಬಂದಿರುವ ರೈತರಿಗೆ ಅಭಿನಂಸಿದರು. ಇವತ್ತು ನಮ್ಮ ರೈತರ ಪರಿಸ್ಥಿತಿಗೆ ಕಾರಣ ಯಾರು? ಕಳೆದ 74 ವರ್ಷದಿಂದ ಟಾಟಾ, ಬಿರ್ಲಾ, ಅಂಬಾನಿ, ಅಂದಾನಿ ಸೇರಿದಂತೆ ಈ ದೇಶವನ್ನು ಲೂಟಿಮಾಡಲು ಹೋರಟಿದ್ದಾರೆ. ಈ ಪರಿಸ್ಥಿತಿಗೆ ಎಲ್ಲಾ ಪಕ್ಷಗಳು ಕಾರಣ . ಯಾವ ಚಳುವಳಿ ಸಂದಾನ ತೀತವಾಗಿ ನಡೆಯುತ್ತದ ಅದು ಯಾಶಸಸ್ಸು ಕಾಣುತ್ತದೆ. ಯುವಜನ ವಿರೋಧಿಸಿ, ವಿದ್ಯಾರ್ಥಿ, ಮಹಿಳೆ, ಕಾರ್ಮಿಕ ವಿರೋಧಿ ಕಾಯ್ದೆ ತಂದು ಅವರನ್ನು ಮತ್ತಷ್ಟು ಕೆಳಸ್ಥರಕ್ಕೆ ತರುತ್ತಿದೆ. ಯಾವ ಶಕ್ತಿಗಳ ಜೊತೆ ಸಂದಾನ ಮಾಡದೇ ಹೋರಾಟ ನಡೆಸಿದರೆ ಚಳುವಳಿ ಯಶಸ್ವಿಯಾಗುತ್ತದೆ. ರೈತರ ಹೋರಾಟವನ್ನು ಬಿಜೆಪಿ ಸರ್ಕಾರ ಕೆಟ್ಟದಾಗಿ ಪ್ರಚಾರಮಾಡುತ್ತಿದೆ. ಅವರೇಲ್ಲ ಭಗತ್ ಸಿಂಗ್ ಅಭಿಮಾನಿಗಳಲ್ಲ. ಮೋದಿ ತಂದಿರುವ ಎಲ್ಲಾ ಕೃಷಿ ಕಾಯ್ದೆ ವಾಪಾಸ್ ಆಗಬೇಕು. ಹೋರಾಟ ಬೆಳಯಲು ಒಗ್ಗಟ್ಟಿನಿಂದ ನಡೆಯೋಣ ಎಂದರು. ದುಡಿಯುವ ಅಧಿಕಾರ ಬರಬೇಕು ಅಂದಾಗ ಘನತೆಯ ಬದುಕು ಸಾಧ್ಯ ಎಂದರು.
ಚುಕ್ಕಿ ನಂಜುಡಸ್ವಾಮಿ : ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡುತ್ತಾ, ದೆಹಲಿಯಲ್ಲಿ ಯಾವುದೇ ಚಳಿ ಗಾಳಿ ಎನ್ನದೇ 60-70ರ ವಯಸ್ಸಿನ ಹಿರಿಯರು ಸೇರಿದಂತೆ ಅನೇಕ ಯುವಕರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಕಾರಣ ಈ ಮೂರು ಕರಾಳ ತಿರುಳು ಜನರಿಗೆ ಅರ್ಥವಾಗಿದೆ. ಹಾಗಾಗಿ ಈ ಹೋರಾಟಕ್ಕೆ ಮುಂದಾಗಿದಾರೆ. ಅಪಪ್ರಚಾರ ಮಾಡುವುದುರ ಮೂಲಕ, ರೈತ ಹೋರಾಟವನ್ನು ನಿಲ್ಲಿಸುವ ತಂತ್ರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಈಗಾಗಲೇ 310 ಜನ ರೈತರು ಹುತಾತ್ಮರಾಗಿದ್ದಾರೆ. ಕಾನೂನಿನ ಈ ಹೋರಾಟವನ್ನು ಹಳ್ಳಿಗೆ ತಲುಪಿಸೋಣ, ಈ ಹೋರಾಟವನ್ನು ಮತ್ತಷ್ಟು ಹೆಚ್ಚಿಸೋಣ ಎಂದರು.
ಕೊಡಿಹಳ್ಳಿ ಚಂದ್ರು ಶೇಖರ್ : ಕೃಷಿ ಮಾರುಕಟ್ಟೆ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಭೂ ಸುಧಾರಣೆ ಕಾಯ್ದೆಯನ್ನು ತಂದು ಜನರ ಮೆಚ್ಚಗೆ ಪಡೆಯಲು ಸರ್ಕಾರ ಮುಂದಾಗಿದೆ. ಆದರೆ ಇದನ್ನು ವಿರೋಧಿಸಿ ದೆಹಲಿಯಲ್ಲಿ, ಕರ್ನಾಟದಲ್ಲಿ , ಕೆನಡಾ, ಲಂಡನ್ ಪಾರ್ಲಿಮೆಂಟಗಳಲ್ಲೂ ಈ ಹೋರಾಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಲ್ಯಾಣ ನಾಡು, ಬಸವನ ಬೀಡು, ಸಮಾನತೆ ನೀತಿ, ಜಾತಿ ಮುಖ್ಯವಲ್ಲ, ಮಾತನವೀಯತೆ ಮುಖ್ಯ ಎಂದು ಈ ನೆಲೆದಲ್ಲಿ ಹೇಳಿಕೊಟ್ಟವರು. ಕೃಷಿ ಕೃತ್ಯವನ್ನು ಮಾಡುವ ರೈತನನ್ನ ಪಾದ ಮುಟ್ಟಿಬೆಕೆಂದು ಬಸವಣ್ಣನವರು ಹೇಳುತ್ತಾರೆ. ಅಂತಹ ನೆಲದಲ್ಲಿ ಕರ್ನಾಟದಲ್ಲಿ 2019-20 ಸಾಲಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ, ಕೃಷಿ ಬೆಲೆ ಎಂಎಸ್ ಪಿ ಗಿಂತ ಮಾರುಕಟ್ಟೆಯಲ್ಲಿ ಖರಿದಿಯಾದ ಕೃಷಿ ಉತ್ಪನ್ನಗಳಿಗೆ ಸಂಬಂಧ ಪಟ್ಟಂತೆ ಕಳೆದ ವರ್ಷ ಎಷ್ಟು ವ್ಯತ್ಯಾಸ 3119 ಕೋಟಿ ರೂ ರೈತರಿಗೆ ಅನ್ಯಾವಾಗಿದೆ. ಡಾ. ಸ್ವಾಮಿನಾಥ್ ವರದಿಗೆ ಹೋಲಿಸಿದರೆ 2339 ಕೋಟಿ ರೂ ರೈತರಿಗೆ ನಷ್ಟವಾಗುತ್ತದೆ. 13 ಕೃಷಿ ಉತ್ಪನ್ನಗಳು ಜೊತೆ ಈ ನಾಡಿನ ಎಲ್ಲಾ ಕೃಷ್ಟಿ ಉತ್ಪನಗಳ ಬೆಲೆಯನ್ನು ಒಂದು ವರ್ಷಕ್ಕೆ 1 ಲಕ್ಷ ಕೋಟಿ ರೂ ರೈತನಿಗೆ ನಷ್ಟವಾಗುತ್ತದೆ. ಸ್ವಾಮಿನಾಥನಿಗೆ ವರದಿಗೆ ಹೋಲಿಸಿದರೆ, ರೈತರು ಈ ಹಗಲು ದರೋಡೆ ತಂತ್ರ ಅರ್ಥ ಮಾಡಕೊಳ್ಳಬೇಕು. ಆರ್ ಬಿ ಐ ಬ್ಯಾಂಕ್ ನೀತಿ ತಲೆ ಕೆಳಗಾಗುತ್ತಿದೆ. 1 ಲಕ್ಷ ಕೋಟಿ ರೈತರ ಎಲ್ಲರ ಜೋಬಿನಲ್ಲಿ ಇದ್ರೆ ರೈತರು ಬಡವಾಗುತ್ತಿರಲಿಲ್ಲ. ಇದು ಅತ್ಯಂತ ಅಪಾಯಕಾರಿ ಉತ್ಪಾದನೆಯಿಂದ ಮಾರಾಟದವರೆಗೂ ಖಾಸಗೀಕರಣವಾಗುತ್ತಿದೆ. ಹಾಗಾಗಿ ರೈತರ ಪರವಾಗಿ ಕಾಯ್ದೆ ತನ್ನಿ ಎಂದು ಮನವಿ ಮಾಡಿದರು.
ಸ್ಥಳಕ್ಕೆ ಆಗಮಿಸಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ಮನವಿಯನ್ನು ಸ್ವೀಕರಿಸಿ ಈ ಕುರಿತು ಸಿಎಂ ಯಡಿಯೂರಪ್ಪ ಅವರ ಜೊತೆ ಮಾತನಾಡಿ ಬೇಡಿಕೆಗಳನ್ನು ಈಡೇಡಿಸುವುದಾಗಿ ಭರವಸೆ ನೀಡಿದರು.
CITU ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ಸಿರಿಮನಿ ನಾಗರಾಜ್, ಡಾ.ಕೆ.ಪ್ರಕಾಶ್, ಅಪ್ಪಣ, ಶಾಮಣ್ಣ ರೆಡ್ಡಿ, ಸತ್ಯಾನಂದ, ಸೋಮಶೇಕರ್, ನಾಡಗೌಡ, ಶಿವಶಂಕರ್, ಕಾಳಪ್ಪ, ನಿತ್ಯಾನಂದ ಸ್ವಾಮಿ, ಜಯರಾಮ, ಮರಿಯಪ್ಪ, ದೇವಿ, ಪೃತ್ವಿರೆಡ್ಡಿ, ವಿ.ಗಾಯಿತ್ರಿ, ರಾಮಸ್ವಾಮಿ, ಜಯಣ್ಣ, ವಾಸುದೇವ ರಡ್ಡಿ, ನಾಗಪ್ಪಪಾಟೀಲ್, ಚಾಮರಸ್ ಪಾಟೀಲ್, ಅಣ್ಣಯ್ಯ, ಶಿವಪ್ರಕಾಶ, ಜ್ಯೋತಿ, ,ಅನುಸೂಯಮ್ಮ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರೆಗೂಡು ಸೇರಿದಂತೆ ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು.