ಕೋಲಾರ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ಬಿಜೆಪಿ ಸರಕಾರದ ಸಚಿವರ ಬೆಂಗಾವಲು ವಾಹನದಿಂದ ಹುತಾತ್ಮರಾದ ಐದು ಜನ ರೈತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ಗಾಂಧಿವನದಲ್ಲಿ ಸಂಯುಕ್ತ ಹೋರಾಟ – ಕರ್ನಾಟಕ ಕೋಲಾರ ಘಟಕದ ನೇತೃತ್ವದಲ್ಲಿ ನಡೆಯಿತು.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತ ವಿರೋಧಿ ಕಾನೂನುಗಳಿಂದ ಕೃಷಿ ವಲಯದ ಮೇಲೆ ಬಹು ದೊಡ್ಡ ಪೆಟ್ಟು ಬೀಳುತ್ತಿದೆ. ಈ ಸಂದರ್ಭದಲ್ಲಿ ರೈತರ ಪರವಾಗಿ ಗಟ್ಟಿ ಧ್ವನಿ ಮೊಳಗಬೇಕಿದೆ. ಇದನ್ನು ಸದ್ದುಬಡಿಯಲು ಸರಕಾರ ನಾನಾ ಬಗೆಯ ತಂತ್ರಗಳನ್ನು ಬಳಸಿಕೊಂಡು ರೈತರ ಹೋರಾಟವನ್ನು ಮಟ್ಟ ಹಾಕಲುಹೊರಟಿದೆ ರೈತರನ್ನು ಉಳಿಸಿಕೊಳ್ಳುವ ಹೊಣೆಯನ್ನು ನಮ್ಮ ನಮ್ಮೆಲ್ಲರ ಮೇಲೆ ಇದೆ ಎಂದರು.
ದೇಶಕ್ಕೆ ಅನ್ನ ನೀಡುವರ ಬಿಕ್ಕಟ್ಟಿನಿಂದ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ರೈತರ ಕೃಷಿಯನ್ನು ಬಲಪಡಿಸಲು ಅಗತ್ಯವಿರುವ ಕೃಷಿ ಭೂಮಿ ಹಂಚಿಕೆ ನೀರಾವರಿ ಸೌಲಭ್ಯಗಳನ್ನು ವಿಸ್ತರಣೆ ಮಾಡಬೇಕು ರೈತರಿಗೆ ಬಡ್ಡಿ ರಹಿರ ಬ್ಯಾಂಕ್ ಸಾಲ ನೀಡಬೇಕು ಮಾರುಕಟ್ಟೆ ರಕ್ಷಣೆ ಮಾಡಬೇಕು ಕೃಷಿ ಭೂ ಸುಧಾರಣೆ ಎಪಿಎಂಸಿ ಕಾಯಿದೆಗಳನ್ನು ತಿದ್ದುಪಡಿಯನ್ನು ಮಾಡಿರುವುದು ಬಿಟ್ಟು ರದ್ದುಪಡಿಸಬೇಕ ಎಂದು ಒತ್ತಾಯಿಸಿದರು.
ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ರದ್ದುಪಡಿಸಬೇಕು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ವಿಶೇಷ ಮುತುವರ್ಜಿ ವಹಿಸಬೇಕು, ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಿಸಬೇಕು, ಕಬ್ಬು ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಕೇಂದ್ರ ಸರಕಾರ ನಡೆಸಿರುವ ಹಗಲು ದರೋಡೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸೇವಾ ವಲಯದಂತೆ ಸಾರ್ವಜನಿಕ ಆಸ್ತಿಯಾಗಿರುವ ವಿದ್ಯುತ್ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ಮೂರು ಕಾಸಿಗೆ ಮಾರಾಟ ಮಾಡಲು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ ಇದರ ಪರಿಣಾಮವಾಗಿ ಅನೇಕ ಉಚಿತ ವಿದ್ಯುತ್ ಯೋಜನೆಯನ್ನು ನಿಲ್ಲಿಸಿದಂತೆ ಆಗುತ್ತದೆ ಇದರಿಂದ ವಿದ್ಯುತ್ ದರ ಏರಿಕೆ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕಷ್ಟ ಆಗುತ್ತದೆ ಎಂದು ಆರೋಪಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಅಬ್ಬಣಿ ಶಿವಪ್ಪ, ಟಿ.ಎಂ ವೆಂಕಟೇಶ್, ಎನ್.ಎನ್ ಶ್ರೀರಾಮ್, ಭೀಮರಾಜ್, ಪ್ರಸನ್ನ, ಅಚ್ಚುತ್ ಆನಂದ್, ಮಂಜುನಾಥಗೌಡ, ಅಂಕಿತಾ, ವಿಜಿಯಕೃಷ್ಣ, ಮುಸ್ತಫ್, ಈಧರೆ ವೆಂಕಟಾಚಲಪತಿ, ಕೆ.ವಿ ಮಂಜುನಾಥ್ ವಿಜಿಕುಮಾರಿ, ಮುಂತಾದವರು ಇದ್ದರು.