ಮುಂಬೈ: ಸಿನಿಮಾಗಳ ವಿಮರ್ಶೆಗಳ ಮೂಲಕ ಖ್ಯಾತಿ ಗಳಿಸಿರುವ ಕಮಾಲ್ ಆರ್. ಖಾನ್ ಅವರು ಇದೀಗ ಒಂದು ಟ್ವೀಟ್ ಮಾಡಿದ್ದು, ಇದು ಸಮಸ್ಯೆಗಳ ಗಂಭೀರಗಳ ಬಗ್ಗೆ ಚರ್ಚೆಗೆ ಒಳಪಡಿಸುವಂತೆ ಮಾಡಿದೆ. ಇತ್ತೀಚಿಗೆ ಪ್ರಕರಣವೊಂದರಲ್ಲಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಅವರು ಬಿಡುಗಡೆ ಹೊಂದಿದ್ದರು.
ಕಮಾಲ್ ಖಾನ್ ಸಿನಿಮಾ ರಂಗದಲ್ಲಿ ವೃತ್ತಿಜೀವನ ಆರಂಭಿಸಿದರು. ನಟನೆ ಅವರ ಕೈ ಹಿಡಿಯಲಿಲ್ಲ. ಮರಳಿ ಅವರು ಆಯ್ಕೆ ಮಾಡಿಕೊಂಡಿದ್ದು ಸಿನಿಮಾ ವಿಮರ್ಶೆ. ಈ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡರು. ಸ್ಟಾರ್ ಸಿನಿಮಾಗಳನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಈ ಕಾರಣಕ್ಕೆ ಹಲವರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈಗ ಅವರ ಹೊಸ ಟ್ವೀಟ್ ಸಾಕಷ್ಟು ಅಚ್ಚರಿ ಮೂಡಿಸಿದೆ.
ಕಮಾಲ್ ಆರ್. ಖಾನ್ ಸಿನಿಮಾ ವಿಮರ್ಶೆ ನಿಲ್ಲಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ನನ್ನ ಬಳಿ ಎರಡು ಆಯ್ಕೆಗಳು ಇದ್ದವು. ಶಾಶ್ವತವಾಗಿ ಮುಂಬೈ ತೊರೆಯುವುದು ಒಂದನೇ ಆಯ್ಕೆ ಆದರೆ, ಎರಡನೇ ಆಯ್ಕೆ ಸಿನಿಮಾ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದು. ನಾನು ಎರಡನೆಯದ್ದು ಆಯ್ಕೆ ಮಾಡಿದೆ. ಏಕೆಂದರೆ ಮುಂಬೈನಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಬಾಲಿವುಡ್ ಮಂದಿ ಸಾಕಷ್ಟು ರಾಜಕೀಯ ಬೆಂಬಲವನ್ನು ಹೊಂದಿದ್ದಾರೆ’ ಎಂದಿದ್ದಾರೆ.
ಬಾಲಿವುಡ್ ನಟರಾದ ಸೈಫ್ ಅಲಿ ಖಾನ್ ಮತ್ತು ಹೃತಿಕ್ ರೋಷನ್ ಅಭಿನಯದ ಮುಂಬರುವ ಚಿತ್ರ ʻವಿಕ್ರಮ್ ವೇದಾʼ ವಿಮರ್ಶಿಸುವ ಕೊನೆಯ ಚಿತ್ರವೆಂದು ಅವರು ಹೇಳಿರುವ ಕಮಾಲ್ ಆರ್. ಖಾನ್, ನನ್ನ ವಿಮರ್ಶೆಗಳನ್ನು ನಂಬಿ ಬಾಲಿವುಡ್ ಇತಿಹಾಸದಲ್ಲಿ ನನ್ನನ್ನು ದೊಡ್ಡ ವಿಮರ್ಶಕನನ್ನಾಗಿ ಮಾಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಕಲಿ ಗಿಮಿಕ್‌ಗಳು, ಕಡಿಮೆ ಟಿಕೆಟ್ ದರಗಳಂತಹ ನಕಲಿ ಸುದ್ದಿಗಳು ಬಾಲಿವುಡ್‌ಗೆ ಸಹಾಯ ಮಾಡುವುದಿಲ್ಲ. ಬಾಲಿವುಡ್‌ಗೆ ಸಹಾಯ ಮಾಡಲು ಬಯಸುವುದಾದರೆ, ನೀವು ದೊಡ್ಡ ಮಟ್ಟದಲ್ಲಿ ಯೋಚಿಸುವ ಅಗತ್ಯವಿದೆ. ಕ್ರೂರ ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿ. ಇಂದಿನ ಕಾಲಕ್ಕೆ ತಕ್ಕಂತೆ ವಿಭಿನ್ನ ಚಿತ್ರಗಳನ್ನು ಮಾಡಬೇಕು. 20 ವರ್ಷಗಳ ಹಿಂದಿನ ಸೂತ್ರವು ಇಂದಿನ ಪ್ರೇಕ್ಷಕರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಕೆಲವು ಟ್ವೀಟ್ ಗಳನ್ನು ಮಾಡಿದ್ದಾರೆ.
ಜೈಲಿನಿಂದ ಜಾಮೀನು ಪಡೆದು ಹೊರ ಬಂದಿರುವ ಕಮಾಲ್ ಆರ್. ಖಾನ್ ಸಕ್ರಿಯವಾಗಿ ಟ್ವೀಟ್ ಮಾಡುತ್ತಿದ್ದಾರೆ. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ.
ಕಮಾಲ್ ಖಾನೆ ವಿರುದ್ಧ ಜನವರಿ 2019 ರಂದು ವರ್ಸೋವಾ ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣ ದಾಖಲಾಗಿದೆ. 2020ರಲ್ಲಿ ದಿವಂಗತ ನಟರಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಅವರು ಸಾಯುವ ಕೆಲವು ದಿನಗಳ ಹಿಂದೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬರೆಯುತ್ತಿದ್ದರು. ಅವರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ದಿವಂಗತ ನಟರ ವಿರುದ್ಧ ಅವರ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.