ಬೆಂಗಳೂರು: ಸಮಸ್ಯೆ ಗಂಭೀರವಾಗಿರುವ ಆಧಾರದ ಮೇಲೆ ಪರಿಹಾರ ಕೇಳಿದ್ದು, 18,000 ಕೋಟಿಗೆ ಮನವಿ ಸಲ್ಲಿಸಿಲಾಗಿತ್ತು. ಆದರೆ, 3,400 ಕೋಟಿಯಷ್ಟು ಹಣ ಕೊಟ್ಟಿದ್ದಾರೆ. ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದ್ದಾರೆ. ಬರಪರಿಹಾರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಿದ್ದೇವೆ. ಆದರೆ, ಯಾವುದೇ ಅಧಿಕೃತ ದೃಢೀಕರಣ ಆಗಿಲ್ಲ. ನಾವು ಅಧಿಕೃತ ಆದೇಶದ ನೀರಿಕ್ಷೇಯಲ್ಲಿದ್ದೇವೆ ಎಂದು ಹೇಳಿದರು. ಬರಪರಿಹಾರ
ಇದನ್ನುಓದಿ : ಮೋದಿ ಸುಳ್ಳುಗಳ ಮಾರುಕಟ್ಟೆಯ ಸರದಾರ: ಮತಗಳ ಧೃವೀಕರಣಕ್ಕಾಗಿ ಮೋದಿಯದ್ದು ಕೀಳುಮಟ್ಟದ ರಾಜಕಾರಣ ಖಂಡಿಸಿದ ಸಿಎಂ ಸಿದ್ದರಾಮಯ್ಯ
ಅವರ ಬಳಿ ಸಮಯ ಇದ್ದಾಗ ರಾಜ್ಯಕ್ಕೆ ಪರ ಪರಿಹಾರ ಬಿಡುಗಡೆ ಅವಕಾಶ ತೆಗೆದುಕೊಂಡಿಲ್ಲ. 4 ತಿಂಗಳು ನಾವು ನೀಡಿದ ಪತ್ರದ ಮೇಲೆ ಕೂತಿದ್ದರು. ಕರ್ನಾಟಕದ ಹಕ್ಕಿಗೆ ಯಾವುದೇ ಬೆಲೆಯನ್ನೂ ಕೊಡಲಿಲ್ಲ. ಅವರ ಕೈಯಲ್ಲಿ ತೀರ್ಮಾನ ಇದ್ದಾಗ ರಾಜ್ಯಕ್ಕೆ ಕೊಡಬಾರದು ಅನ್ನೋ ಧೋರಣೆ ಹೊಂದಿದ್ದರು. ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಹಣ ಬಿಡುಗಡೆ ಮಾಡಬೇಕಿತ್ತು.
ಇದನ್ನು ನೋಡಿ : ಏನಯ್ಯಾ ಏನೀ ದರ್ಬಾರು? ಆ ದಿಲ್ಲಿ ದೊರೆಯ ದೌಲತ್‌ನಲ್ಲಿ ಹೇಳಿದ್ದೇಳಲ್ಲ ಸುಳ್ಳುಗಳೆ ನೋಡು Janashakthi Media