ಗುಡಿಬಂಡೆ : ಸರ್ಕಾರಗಳು ರೈತರಿಂದ ಸಾವಿರಾರು ಎಕರೆ ಪ್ರದೇಶದಷ್ಟು ಕೃಷಿ ಭೂಮಿಯನ್ನು ಭೂ ಸ್ವಾದೀನ ಮಾಡಿಕೊಳ್ಳುತ್ತಿದೆ .ಆದರೆ ವರ್ಷಗಳೇ ಕಳೆದರು ಸಹ ಅಲ್ಲಿ ಕಾರ್ಖಾನೆಗಳು ಮಾತ್ರ ತಲೇ ಎತ್ತಲಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೆಚ್ ಪಿ ಲಕ್ಷ್ಮೀನಾರಾಯಣ ಗಂಭೀರವಾಗಿ ಆರೋಪಿಸಿದರು .
ಬುಧವಾರ ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆಯನ್ನು ನಡೆಸಿ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗಿ ಕೆಲಕಾಲ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿ .ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೆಚ್ ಪಿ ಲಕ್ಷ್ಮೀನಾರಾಯಣ ಮಾತನಾಡುತ್ತಾ ಸರ್ಕಾರಗಳು ರೈತರ ಕೃಷಿ ಭೂಮಿಯನ್ನು ಭೂ ಸ್ವಾದೀನ ಮಾಡಿಕೊಳ್ಳುತ್ತಾರೆ . ಆ ಭೂಮಿಯಲ್ಲಿ ಯಾವುದೇ ತರಹದ ಕಾರ್ಖಾನೆಗಳು ಮಾತ್ರ ಸ್ಥಾಪಿಸಿದ್ದು ಮಾತ್ರ ನೋಡಲಿಲ್ಲ . ಆ ಭೂಮಿಗಳು ಕೃಷಿಯೇತರ ಜಮೀನುಗಳು ಆಗುತ್ತೀರುವುದು ನೋವಿನ ವಿಷಯವಾಗಿದೆ .
ಮಳೆ ಹಾನಿಯಿಂದ ನಾಶವಾಗುತ್ತೀರುವ ಮನೆಗಳಿಗೆ ವೈಜ್ಞಾನಿಕವಾದ ಬೆಲೆಯನ್ನು ಕೊಡುತ್ತೀಲ್ಲ ಹಾಗೇ ಮಳೆಯಿಂದ ಅನೇಕ ಕಡೆ ಜಮೀನುಗಳು ಕೊಚ್ಚಿಕೊಂಡು ಹೋಗಿವೆ ಅವುಗಳಿಗೂ ಸಹ ನಷ್ಟ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು .
ಇದನ್ನೂ ಓದಿ : ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಜನಪರ ಸಂಘಟನೆಗಳ ವಿರೋಧ
ನಂತರ ತಾಲೂಕು ಕಾರ್ಯದರ್ಶಿ ಆದಿನಾರಾಯಣಸ್ವಾಮಿ ಮಾತನಾಡಿ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸರ್ಕಾರ ನಿಗದಿ ಮಾಡಿರುವ ಹಣವನ್ನು ತಾಲೂಕು ಮಟ್ಟದಲ್ಲಿ ಕೊಡದೇ ಇವರೇ ಒಂದು ಬೆಲೆಯನ್ನು ನಿಗದಿ ಮಾಡಿ ರೈತರಿಗೆ ಮೋಸ ಮಾಡುತ್ತೀದ್ದಾರೆ .ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಸರಿಯಾಗಿ ಕೆಲಸಗಳನ್ನು ನೀಡುತ್ತೀಲ್ಲ .ಅರ್ಜಿ ಹಾಕಿರುವ ಎಲ್ಲಾರಿಗೂ ಸಾಗುವಳಿ ಚೀಟಿಯನ್ನು ನೀಡಬೇಕು ಎಂದು ಒತ್ತಾಯಿಸಿದರು .
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ನಾಗರಾಜು, ಪೋಲಂಪಲ್ಲಿ ಮಂಜುನಾಥ್ , ರಮೇಶ್ ,ರಹಮತ್ , ಡಿ ಆರ್ ದೇವರಾಜು , ಶ್ರೀನಿವಾಸ್ , ರಾಜು , ಪುರಷೋತ್ತಮ್ , ರಾಮಲಿಂಗ , ಗಂಗಿರೆಡ್ಡಿ , ಸೇರಿದ್ದಂತೆ ಇನ್ನೀತರರು ಉಪಸ್ಥಿತರಿದ್ದರು .