ಬೆಂಗಳೂರು: ನಾವು ಚುನಾಯಿಸದ ಸರ್ಕಾರಗಳು ನಮ್ಮನ್ನು ನಿರ್ಲ್ಯಕ್ಷಿಸಿ, ಶ್ರೀಮಂತರಪರ ನಿಲುವು ಜಾರಿ ಮಾಡುತ್ತಿವೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಅಖಿಲ ಭಾರತ ಕಾರ್ಯದರ್ಶಿ ವಿಜೂ ಕೃಷ್ಣನ್ ಆಕ್ರೋಶ ವ್ಯಕ್ತಪಡಿಸಿದರು.
ರೈತ ಹಾಗೂ ಜನ ವಿರೋಧಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಪ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಗೆ ಚಾಲನೆ ನೀಡಿ ಮಾತನಾಡಿದರು, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರೈತ ಕೃಷಿ ಕೂಲಿಕಾರರನ್ನು ನಿರ್ಲಕ್ಷಿಸಿದ್ದಾರೆ. ಅವರಿಗೆ ಏನೂ ನೀಡಿಲ್ಲ. ಉದ್ಯೋಗ ಖಾತ್ರಿಗೆ ಅನುದಾನ ಕಡಿತ ಮಾಡಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರೋಧಿ ನೀತಿಗಳಿಂದಾಗಿ ರೈತ ಸಾಲಗಾರನಾಗುವಂತಾಗಿದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಮೋದಿ ಮತ್ತು ಸಿದ್ದರಾಮಯ್ಯ ವಿಫಲವಾಗಿದ್ದಾರೆ ಎಂದು ಆರೋಪಿಸಿದರು. ವಿಜೂ ಕೃಷ್ಣನ್
ಇದನ್ನೂ ಓದಿ: ರಾಜ್ಯ ಮಟ್ಟದ ವಿಚಾರಸಂಕಿರಣ ಆಚರಣೆ – ಚಿಂತಕ ಬಂಜಗೆರೆ ಜಯಪ್ರಕಾಶ್ ರ ಸಾಂಸ್ಕೃತಿಕ ಕೊಡುಗೆ
ಭೂಮಿ ನಮ್ಮ ಹಕ್ಕು, ನಮಗೆ ಭೂಮಿ ಕೊಡಿ ಎಂದು ಕೇಳುತ್ತಿದ್ದವೇ, ನಾವು ಭೂಮಿ ಉಳಿಮೆ ಮಾಡಲು ಮುಂದಾದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಕೇರಳದಲ್ಲಿ ಎಡರಂಗ ಸರ್ಕಾರಿ ಭೂಮಿಯನ್ನು, ಮನೆ – ನಿವೇಶನವನ್ನು ನೀಡುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ನೀಡಬೇಕು ಎಂದರು.
ಅಖಿಲ ಭಾರತ ಕೂಲಿಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಮಾತನಾಡಿ, ಬಲವಂತದ ಭೂಸ್ವಾಧೀನವನ್ನು ನಾವು ವಿರೋಧಿಸುತ್ತೇವೆ. 1975 ರಿಂದ ಉಳಿಮೆ ಮಾಡುತ್ತಿರುವ ನಮಗೆ ಸಾಗುವಳಿ ಚೀಟಿ ನೀಡಬೇಕು. ಭೂಮಿ ಇಲ್ಲದ ಕುಟುಂಬಕ್ಕೆ ಎರಡು ಎಕರೆ ಭೂಮಿ ನೀಡಬೇಕು. ಬಲವಂತವಾಗಿ ನೀವು ಭೂಮಿಯನ್ನು ಕಿತ್ತುಕೊಳ್ಳಲು ಮುಂದಾದರೆ ಅಧಿಕಾರದಿಂದ ನಿಮ್ಮನ್ನು ಕಿತ್ತು ಹಾಕುವ ಶಕ್ತಿ ರೈತ ಕಾರ್ಮಿಕರಿಗೆ ಇದೆ ಎಂದರು.
ಮನೆ-ನಿವೇಶನ, ಬಗರ್ ಹುಕುಂ -ಅರಣ್ಯ ಸಾಗುವಳಿ ರೈತ-ಕೂಲಿಕಾರರ ಹಕ್ಕು ರಕ್ಷಣೆಗಾಗಿ, ಬಲವಂತದ ಭೂ ಸ್ವಾಧೀನ ಹಾಗೂ ಭೂ ಸಂಪತ್ತಿನ ಕಾರ್ಪೊರೇಟ್ ಲೂಟಿ ಹಿಮ್ಮೆಟ್ಟಿಸಲು, ಜನ ವಿರೋಧಿ ಕರಾಳ ರಾಜ್ಯ ಕೃಷಿ, ಕಂದಾಯ ಹಾಗೂ ಭೂ ಸ್ವಾಧೀನ ಕಾಯ್ದೆಗಳ ರದ್ದತಿಗಾಗಿ, ಸಾಲಮನ್ನಾ ಹಾಗೂ ಕನಿಷ್ಟ ಬೆಂಬಲ ಬೆಲೆ ಹಕ್ಕಿಗಾಗಿ, ಕಿರುಕುಳ-ಲಂಚ ಇಲ್ಲದೇ ದರ್ಖಾಸ್ತ್ ಮಂಜೂರು ಹಾಗೂ ಇತರೆ ಭೂಮಿಗಳ ದುರಸ್ತ್ ಪೋಡಿ ಮಾಡಲು ಈ ವೇಳೆ ಪ್ರತಿಭಟನೆಕಾರರು ಆಗ್ರಹಿಸಿದರು. ಈ ವೇಳೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆಯ ರಾಜಾಧ್ಯಕ್ಷ ಪುಟ್ಟಮಾಧು, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಉಪಾಧ್ಯಕ್ಷ ಜಿ.ಎನ್. ನಾಗರಾಜ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ಹಣಕಾಸು ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ.ಕೆ ಪ್ರಕಾಶ್, ಹಾಗೂ ಮುಖಂಡರಾದ ಮಲ್ಲಮ್ಮ, ಸಂಗಮ್ಮ, ಭರತ್‌ರಾಜ್, ಚನ್ನಪ್ಪ ಆನೆಗೊಂದಿ, ದಾವಲಸಾಬ್, ಬಸವರಾಜ ಮರಕುಂಬಿ ಸೇರಿದಂತೆ ಅನೇಕರಿದ್ದರು.
ಇದನ್ನೂ ನೋಡಿ: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ರೈತ ಕೂಲಿಕಾರರ ಪ್ರತಿಭಟನೆ Janashakthi Media ವಿಜೂ ಕೃಷ್ಣನ್