ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಸಿಎಲ್‌ಪಿ ಸಭೆಯಲ್ಲೇ ಚರ್ಚೆ ನಡೆಸಿದ್ದರೆ, ಇಷ್ಟು ದೊಡ್ಡ ಮಟ್ಟಿಗೆ ಆಗುತ್ತಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಸಿಎಲ್‌ಪಿ ಸಭೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಡೆದಿದ್ದು, ಈ ವೇಳೆ ಪಕ್ಷದ ಎಲ್ಲ ಸದಸ್ಯರು ಭಾಗಿಯಾಗಿದ್ದರು. ಅಲ್ಲಿ ಕೇವಲ ಗಾಂಧಿ ಕಾರ್ಯಕ್ರಮದ ಬಗ್ಗೆ ಮಾತ್ರ ಚರ್ಚೆ ನಡೆಸಿ ಉಳಿದಿದ್ದು, ಮತ್ತೊಮ್ಮೆ ಚರ್ಚೆ ಮಾಡುವ ಎಂದು ನಿರ್ಲಕ್ಷಿಸಿದ್ದರು ಎಂದು ಹೇಳಿದರು.
ಇದನ್ನೂ ಓದಿ : ಕೇಂದ್ರ ಕೃಷಿ ಸಚಿವರ ಸಾಗರ ಭೇಟಿ-ಕಪ್ಪು ಬಾವುಟ ಪ್ರದರ್ಶಿಸಲು ಸಂಯುಕ್ತ ಹೋರಾಟ ಕರ್ನಾಟಕ ಕರೆ
ಎಲ್ಲವೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಬೇಕು, ಅದು ಬಿಟ್ಟು ಹೀಗೆ ಮಾದ್ಯಮದ ಮುಂದೆ ಅವರಿಗೆ ಬೇಕಾದಾಗೆ ಮಾತನಾಡಿದರೆ ಹೀಗೆ ಆಗುತ್ತೆ, ಒಂದು ವೇಳೆ ಸಿಎಲ್‌ಪಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ತೀರ್ಮಾನ ಮಾಡಬೇಕಿತ್ತು, ಅಂದು ಚರ್ಚೆಯಾಗಿದ್ದರೆ ಇಂದು ಹೀಗೆ ಆಗುತ್ತಿರಲಿಲ್ಲ ಎಂದು ಬಿ.ಕೆ ಹರಿಪ್ರಸಾದ್ ತಿಳಿಸಿದರು.
ಇನ್ನಾದರೂ ಬಹಿರಂಗವಾಗಿ ಹೇಳಿಕೆ ನೀಡುವ ಬದಲು ಸಿಎಲ್‌ಪಿ ಸಭೆ ಕರೆದು ಚರ್ಚೆ ಮಾಡಿ ಪಕ್ಷದ ಬಿಕ್ಕಟ್ಟನ್ನು ಕಡಿಮೆ ಮಾಡಬೇಕು, ಅಷ್ಟೇ ಅಲ್ಲದೆ ಕೂಡಲೇ ಹೈಕಮಾಂಡ್ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಇದನ್ನೂ ನೋಡಿ : ನಿವೃತ್ತ ವಿಮಾ ನೌಕರರ ಪ್ರತಿಭಟನೆ : ಪಿಂಚಣಿ ನೌಕರರ ಬಿಕ್ಷೆಯಲ್ಲ, ಹಕ್ಕು Janashakthi Media