ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ ವಾಸವಿರುವ ಕೊರಗ ಸಮುದಾಯದವರು ಈ ನೆಲದ ವಾರಸುದಾರರು: ಮಂಜುನಾಥ ಗಿಳಿಯಾರ್ ಅಭಿಮತ

ಬೆಂಗಳೂರು: ಆದಿವಾಸಿ ಬುಡಕಟ್ಟು ಜನರ ಭೂಮಿಯನ್ನು ಇಲ್ಲಿಗೆ ಆಗಮಿಸಿದ ಇಂದಿನ ಮೇಲ್ ಜಾತಿಗಳ ಜನರು ನಿಮ್ಮ ನೆಲದಲ್ಲಿ ವಾಸಿಸುವ ಅವಕಾಶ ನೀಡಬೇಕು ಎಂದು ಬೇಡುವ ಪದ್ಧತಿ ನಡೆದು ಇಂದಿಗೂ ಮಂತ್ರಗಳ ಮೂಲಕ ಕಟ್ಟಿದ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕು ಎಂದು ಪ್ರಾರ್ಥನೆ ಮಾಡುವ ಆಚರಣೆ ನಡೆಯುತ್ತಾ ಬರುತ್ತಿದೆ. ಇದು ಇಲ್ಲಿನ ಬುಡಕಟ್ಟು ಜನರನ್ನು ಕೇಳುವ ಆಚರಣೆಯಾಗಿದೆ. ಆದರೆ ಆಶ್ರಯ ನೀಡಿದ ಮೂಲನಿವಾಸಿಗಳಿಗೆ ಒಂದು ತುಂಡು ಭೂಮಿ ಇಲ್ಲದ ರೀತಿಯಲ್ಲಿ ಇಂದು ವ್ಯವಸ್ಥಿತವಾಗಿ ಮೇಲ್ ಜಾತಿಗಳ ಆಡಳಿತ ವರ್ಗ ನಡೆದುಕೊಂಡಿದೆ. ಅದರ ಭಾಗವಾಗಿ ಅಜಲು, ಅಸ್ಪೃಶ್ಯತೆ, ಒಡೆಯ ಆಳು ಎನ್ನುವ ಆಚರಣೆ, ಪದ್ಧತಿಗಳು ನಡೆದು ಬಂದಿದೆ ಎಂದು ಅವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನಾಡ ವಲಯ ಸಮಿತಿ ಜನಶಕ್ತಿ ಕಛೇರಿಯಲ್ಲಿ ಆಯೋಜನೆ ಮಾಡಿರುವ ಕಾನೂನು ಮಾಹಿತಿ ಶಿಬಿರ ಮತ್ತು ಆದಿವಾಸಿ ನಾಡ ವಲಯ ಸಮಿತಿ ಸಮಾವೇಶದಲ್ಲಿ ವಿಚಾರ ಮಂಡನೆ ಮಾಡುತ್ತಾ ಮಾತನಾಡಿದರು. ಕರಾವಳಿ 

ಕರಾವಳಿ ಜಿಲ್ಲೆಗಳಲ್ಲಿ ಕೊರಗ ಸಮುದಾಯದವರಿಗೆ ಭೂಮಿ ನೀಡಲು ಡಾಕ್ಟರ್ ಮಹ್ಮದ್ ಫೀರ್ ವರದಿ ಶಿಫಾರಸು ಮಾಡಿದರು ಸಹ ಇಂದಿಗೂ ಕೊರಗ ಸಮುದಾಯಕ್ಕೆ ಭೂಮಿ ಸಿಕ್ಕಿಲ್ಲ. ಅಂದಿನ ದರ್ಖಾಸ್ತು ಕಾನೂನು, ಉಳುವವನೇ ಹೊಲದೊಡೆಯ ಕಾನೂನು ಪ್ರಯೋಜನ ಈ ಸಮುದಾಯಗಳಿಗೆ ಸಿಕ್ಕಿಲ್ಲ. ಏನೀದ್ದರು ಈ ಸಮುದಾಯಗಳಿಗೆ 5 ಸೆಣ್ಸ್ ಭೂಮಿಗಿಂತ ಕಡಿಮೆ ನೀವೆಶನ ನೀಡಿ ಕಾಲೋನಿಗಳನ್ನು ನಿರ್ಮಿಸಿ ಮತ್ತೆ ಕೂಲಿ ಆಳುಗಳು, ಅಜಲಿನ ಸೇವಕರನ್ನಾಗಿ ಮಾಡಲಾಗಿದೆ. ಈ ಸಮುದಾಯದ ಘನತೆ ಗೌರವದ ಬದುಕು ರೂಪಿಸಿಕೊಳ್ಳಲು ಭೂಮಿ ಹಕ್ಕು ಅತ್ಯಂತ ಮಹತ್ವದ ವಿಷಯವಾಗಿದೆ. ಆದಿವಾಸಿ ಸಂಘಟನೆ ನಿರಂತರವಾಗಿ ನಡೆಸುತ್ತಿರುವ ಭೂಮಿ ಚಳುವಳಿ ಅಭಿನಂದನೆಯ ಕೆಲಸವಾಗಿದೆ ಎಂದರು.

ಸಮಾವೇಶ ಉದ್ಘಾಟಿಸಿ ಮಾತನಾಡಿರುವ ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಕೃಷ್ಣ ಇನ್ನಾ ಅವರು ಕೊರಗ ಸಮುದಾಯದ ಘನತೆ ಗೌರವದ ಬದುಕಿಗೆ, ಒಳಮಿಸಲಾತಿಗಾಗಿ, ಉದ್ಯೋಗ, ಆಹಾರ, ಆರೋಗ್ಯ ಮತ್ತು ಭೂಮಿಯ ಹಕ್ಕಿಗಾಗಿ ಮಂಗಳೂರಿನಲ್ಲಿ ಜನವರಿ 23 ರಂದು ನಡೆಯಲಿರುವ ಆದಿವಾಸಿ ಆಕ್ರೋಶ ರ್ಯಾಲಿ ಹಾಗೂ ಬಹಿರಂಗ ಸಭೆಗೆ ಸಮುದಾಯದವರು ಹಾಗೂ ಜನಪರ ಕಾಳಜಿಯನ್ನು ಹೊಂದಿರುವ ಎಲ್ಲಾ ನಾಗರಿಕರು ಭಾಗವಹಿಸಲು ಕರೆ ನೀಡಿದರು. ಕರಾವಳಿ 

ಇದನ್ನೂ ಓದಿ : ವಾರಕ್ಕೆ 90 ಗಂಟೆಗಳ ಕೆಲಸದ ಆಗ್ರಹ!- ಕಾರ್ಮಿಕರನ್ನು ಹಿಂಡಲು ಕಾರ್ಪೊರೇಟ್ ‘ಉದ್ಧಾರಕ’ರ ನಡುವೆ ಧೂರ್ತ ಸ್ಪರ್ಧೆ-ಸಿಐಟಿಯು ಖಂಡನೆ

ವೇದಿಕೆಯಲ್ಲಿ ನಾಡ ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಪಡುಕೋಣೆ, ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ ಉಪಸ್ಥಿತರಿದ್ದರು. ಶ್ರೀಧರ ನಾಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುನೀತಾ ಪಡುಕೋಣೆ ವಂದಿಸಿದರು.

ಸಮಾವೇಶದ ನಿರ್ಣಯಗಳು:

* ನಾಡ, ಆಲೂರು, ಹಕ್ಲಾಡಿ, ಗುಜ್ಜಾಡಿ, ನಾವುಂದ, ಮರವಂತೆ ಮತ್ತು ತ್ರಾಸಿ ಪಂಚಾಯತ್ ವ್ಯಾಪ್ತಿಯ ಭೂರಹಿತ ಕುಟುಂಬಗಳಿಗೆ ಭೂಮಿ ನೀಡುವುದು ಮತ್ತು ಭೂಮಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನೂ ಬಗ್ಗೆ ಹರಿಸುವುದು.
* ಡಿಮ್ಡ್, ಅರಣ್ಯ ಭೂಮಿಯಲ್ಲಿ ವಾಸಿಸುವ ಕುಟುಂಬಗಳಿಗೆ ಭೂಮಿ ಹಕ್ಕು ನೀಡುವುದು.
* ಒಡೆರ ಭೂಮಿಯಲ್ಲಿ ವಾಸಿಸುವ ಕೊರಗರಿಗೆ ಅವರ ಹೆಸರಿನಲ್ಲಿ ಪಹಣಿ ಒದಗಿಸುವುದು
* ಲಭ್ಯವಿರುವ ಡಿ.ಸಿ ಮನ್ನಾ ಭೂಮಿ ಕೊರಗ ಕುಟುಂಬಗಳಿಗೆ ಮೊದಲ ಆದ್ಯತೆಯಲ್ಲಿ ಹಂಚುವುದು
* ವಸತಿ ಸಮಸ್ಯೆ ಇರುವವರಿಗೆ ತುರ್ತು ವಸತಿ ಸೌಲಭ್ಯ ಕಲ್ಪಿಸಲು ಇಲಾಖೆಗಳ ಮುತುವರ್ಜಿ ಯಲ್ಲಿ ನಡೆಯಬೇಕು.
* ಕುಲಕಸುಬು ದಾರರಿಗೆ ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯೋಜನೆ ರೂಪಿಸಿ ಜಾರಿಗೆ ತರಬೇಕು.
* ಕೊರಗ ಸಮುದಾಯದವರಿಗೆ ಆರೋಗ್ಯ ವೆಚ್ಚದ ಅನುದಾನ ಸರ್ಕಾರ ಬಿಡುಗಡೆ ಮಾಡಬೇಕು

ನೂತನ ವಲಯ ಸಮಿತಿ ಆಯ್ಕೆ :

ಅಧ್ಯಕ್ಷರು : ಶಾರದ ಹಕ್ಲಾಡಿ
ಕಾರ್ಯದರ್ಶಿ : ಜಯಂತಿ ಗುಜ್ಜಾಡಿ
ಉಪಾಧ್ಯಕ್ಷರು : ಬಾಬು ಹಕ್ಲಾಡಿ
ಸಹ ಕಾರ್ಯದರ್ಶಿ : ಸುನೀತಾ ಪಡುಕೋಣೆ
ಸಂಚಾಲಕರು: ಶ್ರೀಧರ ನಾಡ.

ಸಮಿತಿ ಸದಸ್ಯರಾಗಿ ಉದಯ ರಾಮನಗರ, ಸುನಂದ ಪಡುಕೋಣೆ, ಮಂಜುನಾಥ ನೂಜಾಡಿ, ಚಿಕ್ಕು ಹೆಮ್ಮುಂಜೆ, ಕೊರಗ ನಾರ್ಕಳಿ, ಮಾಲತಿ ಆಲೂರು, ಮಮತಾ ಪಡುಕೋಣೆ, ಸುನಂದ ಮಾಣಿಕೊಳಲು, ಸರ್ವಾನುಮತದಿಂದ ಆಯ್ಕೆಯಾದರು. ಕರಾವಳಿ 

ಇದನ್ನೂ ನೋಡಿ : ಮುಖ್ಯಮಂತ್ರಿಗೆ ಘೇರಾವ್ : DYFI ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *