ಬಲ್ಡೊಟ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಇಂದು ಕೊಪ್ಪಳ ಬಂದ್

ಕೊಪ್ಪಳ: ಇಂದು ಸೋಮವಾರ ಬಲ್ಡೊಟ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಕೊಪ್ಪಳ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಿ ಇದೀಗ ಬೆಂಬಲ ನೀಡಲಾಗಿದೆ. ಸ್ವಯಂ ಪ್ರೇರಣೆಯಿಂದ ವ್ಯಾಪಾರಿಗಳು ತಮ್ಮ ವ್ಯಾಪಾರಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಬಲ್ಡೊಟ

ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು, ರೈತಪರ ಸಂಘಟನೆಗಳು ಹಾಗೂ ವ್ಯಾಪಾರಸ್ಥರಿಂದ ಪ್ರತಿಭಟನೆ ಬೃಹತ್ ಮೆರವಣಿಗೆ ನಡೆಯುತ್ತಿದೆ. ಕೊಪ್ಪಳದಲ್ಲಿ ಬಲ್ದೋಟಾ ಫ್ಯಾಕ್ಟರಿ ಆರಂಭಕ್ಕೆ ತಯಾರಿ ಮಾಡಲಾಗಿದ್ದು, ಬೃಹತ್ ಸ್ಟೀಲ್ ಮತ್ತು ಪವರ್ ಪ್ಲಾಂಟ್ ಕಂಪನಿ ಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸಂಚಾರ ಮುಕ್ತ

ಬಲ್ದೋಟಾ 54,000 ಕೋಟಿ ಬಂಡವಾಳ ಹೂಡುತ್ತಿರುವ ಈ ಸಂಸ್ಥೆ ವಾರ್ಷಿಕ 10.50 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಘಟಕ ಸ್ಥಾಪನೆ ಮಾಡುತ್ತಿದೆ. ಬಲ್ದೋಟಾ ಫ್ಯಾಕ್ಟರಿ ಆರಂಭದಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

ಜನ ಕ್ಯಾನ್ಸರ್ ಹಾಗೂ ಹಲವಾರು ರೋಗಗಳಿಗೆ ತುತ್ತಾಗುತ್ತಾರೆ ಎಂದು ಕಿಡಿ ಕಾರಲಾಗಿದೆ.ಕೊಪ್ಪಳ ತಾಲೂಕಿನಲ್ಲಿ 200ಕ್ಕೂ ಹೆಚ್ಚು ವಿವಿಧ ಫ್ಯಾಕ್ಟರಿಗಳಿವೆ. ಈಗಾಗಲೇ ಫ್ಯಾಕ್ಟರಿಗಳ ಮಾಲಿನ್ಯದಿಂದ ಬದುಕು ದುಸ್ತರವಾಗಿದೆ ಬಲ್ದೋಟಾ ಘಟಕ ಆರಂಭವಾದರೆ ನಾವು ಕೊಪ್ಪಳ ಬಿಡಬೇಕಾಗುತ್ತದೆ. ]

ನಮ್ಮ ಸ್ವಂತ ಅಕ್ಕ ತಂಗಿಯರು ಅವರ ಮಕ್ಕಳು ಊರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಿಮ್ಮ ಊರಲ್ಲಿ ಬರಿ ಧೂಳು ಇದೆ ಹೀಗಾಗಿ ಬರಲ್ಲ ಹೇಳುತ್ತಿದ್ದಾರೆ ಎಂದು ಜನ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ನೋಡಿ: ಓದುವ ಹಿಗ್ಗು ಉತ್ಸವ ಉದ್ಘಾಟನಾ ಕಾರ್ಯಕ್ರಮ | ರೆಡ್‌ ಬುಕ್‌ ಡೇ , ಮಾತೃಭಾಷಾ ದಿನದ ನೆನಪಿನಲ್ಲಿ

Donate Janashakthi Media

Leave a Reply

Your email address will not be published. Required fields are marked *