ಕೊಪ್ಪಳ: ಬಲ್ಡೋಟಾ ಸ್ಟೀಲ್ ಕಾರ್ಖಾನೆಯ 54 ಸಾವಿರ ಕೋಟಿ ರೂ. ವೆಚ್ಚದ ವಿಸ್ತರಣೆ ವಿರೋಧಿಸಿ ನಗರದಲ್ಲಿ ಕಳೆದ 100 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದೂ, ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಇದು ದಾಖಲೆಯ ಹೋರಾಟವಾಗಿದೆ. ಈ ಕುರಿತು, ಫೆಬ್ರವರಿ 24ರಂದು ಕೊಪ್ಪಳ ಬಂದ್ ಮಾಡಲು ನಿರ್ಧರಿಸಲಾಗಿದೆ.
ಕಾರ್ಖಾನೆಯ ಹೊಗೆಯಿಂದ ಹಲವು ಗ್ರಾಮಗಳಿಗೆ ಪರಿಸರ ಸಮಸ್ಯೆ ಕಾಡುತ್ತಿದ್ದು, ಸರ್ಕಾರ ಸ್ಪಂದಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ
ಇದನ್ನೂ ಓದಿ: ಅರೆಮಲ್ಲಾಪುರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬೆಡ್ ವಿತರಣೆ: ಎಸ್ಎಫ್ಐ ಮನವಿಗೆ ಬಿಸಿಎಮ್ ಇಲಾಖೆ ಸ್ಪಂದನೆ
ಏನಿದು ವಿವಾದ..?
ಬಲ್ಡೋಟಾ ಸ್ಟೀಲ್ ಆಯಂಡ್ ಪವರ್ ಲಿಮಿಟಿಡ್, ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಸುಮಾರು 54 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿಸ್ತರಣೆಯಾಗಿದೆ. ಅಲ್ಲಾನಗರ, ಬಸಾಪೂರ, ಹಾಲವರ್ತಿ, ಕುಣಿಕೇರಿ, ಹಿರೇಬಗನಾಳ ಸೇರಿ ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಇದರಿಂದ ಸಮಸ್ಯೆ ಎದುರಾಗಿದೆ. ಈ ಕಾರಣಕ್ಕೆ ಬಲ್ಡೋಟಾ ವಿಸ್ತರಣೆ ಬೇಡ ಎಂದು ಹೋರಾಟ ನಡೆಸಲಾಗುತ್ತಿದೆ.
2025ರಲ್ಲಿ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕೊಪ್ಪಳ ಬಂದ್ ಮಾಡಲಾಗಿತ್ತು. ಈ ಬಾರಿಯೂ ಬಂದ್ ಮಾಡಿ ನಮ್ಮ ಹೋರಾಟ ಗಟ್ಟಿಗೊಳಿಸಲು ಹೋರಾಟಗಾರರು ತೀರ್ಮಾನ ಮಾಡಿದ್ದಾರೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದಲೋನ ಸಮಿತಿಯಿಂದ ನಿರಂತರ 100ದಿನಗಳ ಧರಣಿ ನಡೆದಿದೆ. ಸಾರ್ವಜನಿಕರು ಸಹ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ಯುಡಿಆರ್‌ನಲ್ಲಿ ಹೂತ ಸತ್ಯಗಳು, ಎಫ್‌ಐಆರ್‌ನಲ್ಲಿ ಹೊರಬರಲಿವೆಯೇ? Janashakthi Media
