ಕೊಪ್ಪಳ: 4 ವರ್ಷದ ಬಾಲಕಿ ಸೇರಿದಂತೆ 25 ಮಂದಿಗೆ ಕಚ್ಚಿದ ರೇಬಿಸ್ ನಾಯಿ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ರೇಬಿಸ್‌ನಿಂದ ಬಳಲುತ್ತಿದ್ದ ಶಂಕಿತ ನಾಯಿಯೊಂದು ನಾಲ್ಕು ವರ್ಷದ ಬಾಲಕಿ ಸೇರಿದಂತೆ ಸುಮಾರು 25 ಮಂದಿಗೆ ಕಚ್ಚಿರುವ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ. ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಘಟನೆ ವರದಿಯಾಗಿದೆ ಎಂದು TNIE ವರದಿ ಹೇಳಿದೆ. ರೇಬಿಸ್ ನಾಯಿ

ಪ್ರಸ್ತುತ ಎಂಟು ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ವರ್ಷದ ಬಾಲಕಿ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳೀಯ ಅಧಿಕಾರಿಗಳು ನಾಯಿಯನ್ನು ಹಿಡಿದಿದ್ದರಾದರೂ, ಅದು ಗಾಯಗೊಂಡು ಸಾವನ್ನಪ್ಪಿದೆ ಎಂದು ವರದಿ ಹೇಳಿದೆ. ರೇಬಿಸ್ ನಾಯಿ

ಇದನ್ನೂ ಓದಿ: ಸಾಕ್ಷಿ ಮಲಿಕ್‌ಗೆ ಬೆಂಬಲಿಸಿ ಪದ್ಮಶ್ರೀ ಹಿಂದಿರುಗಿಸಲಿರುವ ‘ಗೂಂಗಾ ಪೈಲ್ವಾನ್’ ವೀರೇಂದ್ರ ಸಿಂಗ್!

ನಾಯಿ ಕಚ್ಚಿದ್ದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅದೇ ವೇಳೆ ಕೆಲವು ಜನರು ಚಿಕಿತ್ಸೆ ಪಡೆಯಲು ಕೇಂದ್ರಕ್ಕೆ ಬಂದಿದ್ದಾರೆ ಎಂದು ಸಂತ್ರಸ್ತರಲ್ಲಿ ಒಬ್ಬರಾದ ವೀರೇಶ್ ಹೇಳಿದ್ದಾಗಿ TNIE ಹೇಳಿದೆ.

“ನಾಯಿಯು ತನ್ನ ದಾರಿಯಲ್ಲಿ ಬಂದವರನ್ನೆಲ್ಲ ಕಚ್ಚುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಿದೆ. ಸ್ವಲ್ಪ ಸಮಯದಲ್ಲೇ ನಾಯಿ ನನ್ನ ಬಳಿಗೆ ಬಂದು ಕಚ್ಚಿತು. ಇಡೀ ಘಟನೆಯಲ್ಲಿ ಮಕ್ಕಳು ಸಹ ಗಾಯಗೊಂಡಿದ್ದರಿಂದ ಅದು ಭಯಾನಕ ವಾತಾವರಣ ನಿರ್ಮಾಣ ಮಾಡಿತ್ತು” ಎಂದು ವೀರೇಶ್ ತಿಳಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳು ನಾಯಿಯನ್ನು ಬಲೆಗೆ ಕೆಡವಿ ಮತ್ತು ಹೆಚ್ಚಿನ ಹಾನಿಯಾಗುವ ಮೊದಲು ಅದನ್ನು ಹಿಡಿದುಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ. ಗ್ರಾಮದಲ್ಲಿ ಹಲವಾರು ಬೀದಿನಾಯಿಗಳಿವೆ ಆದರೆ ಈ ರೀತಿಯ ಘಟನೆ ಇದೊಂದೆ ನಡೆದಿದ್ದು ಎಂದು ಗ್ರಾಮಸ್ಥ ಭೀಮಣ್ಣ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ರೇಬಿಸ್ ನಾಯಿ

ಇದನ್ನೂ ಓದಿ: ಗುಜರಾತ್ | ಶಾಲಾ ಪಠ್ಯಕ್ರಮಕ್ಕೆ ‘ಭಗವದ್ಗೀತೆ’ ಸೇರ್ಪಡೆ

ವರದಿಯೊಂದರ ಪ್ರಕಾರ, ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 59 ಸಾವಿರ ಜನರು ನಾಯಿ ದಾಳಿಯಿಂದ ಸಾಯುತ್ತಿದ್ದಾರೆ. ಅಧಿಕೃತವಾಗಿ, ಭಾರತವು 60 ಲಕ್ಷ ಬೀದಿ ನಾಯಿಗಳನ್ನು ಹೊಂದಿದ್ದು, ಭಾರತ ಸರ್ಕಾರದ ಅಂಕಿಅಂಶಗಳ ಪ್ರಕಾರ, 2019 ರಿಂದ 2022 ರ ನಡುವೆ, ಭಾರತದಾದ್ಯಂತ 1.5 ಕೋಟಿಗೂ ಹೆಚ್ಚು ನಾಯಿ ಕಡಿತದ ಘಟನೆಗಳನ್ನು ವರದಿಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಬೀದಿ ನಾಯಿಗಳಿಂದ ಲಕ್ಷಾಂತರ ದಾಳಿ ಪ್ರಕರಣಗಳು ಭಾರತದಲ್ಲಿ ಪ್ರತಿ ವರ್ಷ ಸಂಭವಿಸುತ್ತವೆ. ಇದರಿಂದಾಗಿ ಉಂಟಾಗುವ ರೇಬೀಸ್‌ನಿಂದ ವಾರ್ಷಿಕ ಹತ್ತಾರು ಸಾವಿರ ಸಾವುಗಳು ಸಂಭವಿಸುತ್ತದೆ. ಈ ವರ್ಷ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಸಚಿವಾಲಯವು 25 ಲಕ್ಷ ನಾಯಿ ಕಡಿತದ ಪ್ರಕರಣಗಳನ್ನು ದಾಖಲಿಸಿದೆ.

ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *