ಬೆಂಗಳೂರು : ಕರ್ನಾಟಕ ಚರ್ಚ್ ಗಳಲ್ಲಿ ಏಕಪಕ್ಷೀಯವಾಗಿ ಕೊಂಕಣಿ ಗುಂಪುಗಳು ಅಧಿಕಾರವನ್ನು ಹಿಡಿದುಕೊಂಡು ಕನ್ನಡ ಕ್ರೈಸ್ತರನ್ನು ಕ್ರಮಬದ್ಧವಾಗಿ ಹತೋಟಿಗೆ ಒಳಪಡಿಸುತ್ತಿವೆ ಮತ್ತು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿವೆ ಎಂದು ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಎ.ಐಸಾಕ್ ಆರೋಪ ಮಾಡಿದ್ದಾರೆ. ಕೊಂಕಣಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಚರ್ಚ್ ನಲ್ಲೂ ಒಬ್ಬರೂ ಕನ್ನಡಿಗ ಬಿಷಪ್ ಇಲ್ಲ, ಒಟ್ಟು 14 ಧರ್ಮ ಕ್ಷೇತ್ರಗಳಿದ್ದರೂ, ಚಿಕ್ಕಮಗಳೂರನಲ್ಲಿ ಮಾತ್ರ ಇದ್ದಾರೆ ಕರಾವಳಿ ಮೂಲದ ಬಲವಾದ ಮತದಾನ ಪ್ರಭಾವದಿಂದ ಕನ್ನಡಿಗ ಬಿಷಪ್‌ಗಳನ್ನು ಬೆಳಸದಂತೆ ತಡೆಯಲಾಗುತ್ತಿದೆ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ನಡೆದ ಭಾರಿ ಭ್ರಷ್ಟಾಚಾರದ ತನಿಖೆಗೆ ಆಗ್ರಹ
ಮುಖ್ಯ ಚರ್ಚ್ ಹುದ್ದೆಗಳು ಧರ್ಮಕ್ಷೇತ್ರ ಆಡಳಿತ, ಆಯೋಗಗಳು, ಸೆಮಿನರಿ ತರಬೇತಿ ಸಂಸ್ಥೆಗಳು, ಪ್ರಮುಖ ಸಂಸ್ಥೆಗಳು ಎಲ್ಲವೂ ಕರಾವಳಿ ಕೊಂಕಣಿ ವಲಯದ ಹಿಡಿತದಲ್ಲಿದ್ದು, ಬೆಂಗಳೂರು ಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾಡೊ ಮತ್ತು ಮಾಜಿ ಮಹಾಧರ್ಮಾಧ್ಯಕ್ಷ ಬರ್ನಾರ್ಡ್ ಮೋರಾಸ್ ಇಬ್ಬರೂ ಕನ್ನಡ ಕ್ರೈಸ್ತರ ನ್ಯಾಯಬದ್ಧ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಾರೆ. ಕನ್ನಡ ಕ್ರೈಸ್ತರನ್ನು ತಮ್ಮದೇ ನೆಲದಲ್ಲಿ ಗೊಂಬೆಯ ಪ್ರೇಕ್ಷಕರನ್ನಾಗಿಸಿದೆ ಎಂದು ಐಸಾಕ್ ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಮಂಗಳೂರಿನ ರಾಯ್ ಕಾಸ್ಟೆಲಿನೊ ಅವರ ಸಾರ್ವಜನಿಕ ಹೇಳಿಕೆ ವಿವಾದ ಹೆಚ್ಚಿಸಿದ್ದು, ಅವರ ಹಸ್ತಕ್ಷೇಪ ಅನಧಿಕೃತ ಮತ್ತು ಕನ್ನಡ ಕ್ರೆöÊಸ್ತರ ಭಾವನೆಗಳಿಗೆ ಅವಮಾನಕಾರಿಯಾಗಿದೆ. ಮಹಾಧರ್ಮಾಧ್ಯಕ್ಷರು ಈ ಕೂಡಲೇ 3/1983ರ ಸುತ್ತೋಲೆಯನ್ನು ರಾಜ್ಯದ ಎಲ್ಲೆಡೆ ಅನುಷ್ಠಾನಗೊಳಿಸಬೇಕು. ಕರಾವಳಿ ಏಕಾಧಿಕಾರಕ್ಕೆ ಅಂತ್ಯಹಾಡಿ, ತಮಿಳುನಾಡು, ತೆಲಂಗಾಣ ರಾಜ್ಯದ ಚರ್ಚ್ಗಳಲ್ಲಿ ಸ್ಥಳೀಯ ಬಿಷಪ್‌ಗಳಿಗೆ ಆಧ್ಯತೆ ನೀಡಿದಂತೆ, ರಾಜ್ಯದಲ್ಲಿಯೂ ಕನ್ನಡಿಗ ಪಾದ್ರಿಗಳಿಗೆ ಸೂಕ್ತ ಪ್ರತಿನಿಧಿತ್ವ ಮತ್ತು ಕನ್ನಡಕ್ಕೆ ಯೋಗ್ಯ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದ ಎಲ್ಲ ಚರ್ಚುಗಳಲ್ಲಿಯೂ ಕನ್ನಡಕ್ಕೆ, ಆದ್ಯತೆ ನೀಡಿ ಕನ್ನಡದಲ್ಲಿಯೇ ಪೂಜೆಗಳಾಗಬೇಕು. ಆಧ್ಯಾತ್ಮಿಕವಾಗಿ ಮುನ್ನಡೆಸಲು ಇರುವಂತಹ ಧರ್ಮಾಧ್ಯಕ್ಷರುಗಳನ್ನು ಕನ್ನಡ ಯಾಜಕರ ಬಳಗದಿಂದಲೇ ಆಯ್ಕೆ ಮಾಡಬೇಕು. ನಮ್ಮ ನೆಲದಲ್ಲಿರುವ ಸಂತ ಪೇತ್ರರ ಗುರುಮಠ ಕರ್ನಾಟಕ ಪ್ರಾಂತೀಯ ಗುರುಮಠವಾಗಬೇಕು ಎಂದು ಐಸಾಕ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಬರ್ತಲೋಮಿಯಾ, ಉಪಾಧ್ಯಕ್ಷ ಅಂತೋಣಿ ರಾಜು ಸಿ., ಖಜಾಂಚಿ ಜಾರ್ಜ್ ಕುಮಾರ್ ವೈ., ಕನ್ನಡ ಹೋರಾಟಗಾರರಾದ ಚಂದ್ರಶೇಖರ್, ಚನ್ನೇಗೌಡ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು!! ರೀ ಓಪನ್ ಆಗುತ್ತಾ ಸೌಜನ್ಯ ಕೇಸ್ ?!!v Janashakthi Media
