ಮಂಗಳೂರು: ಹಿಂದೂ ಮುಸ್ಲಿಮರ ನಡುವ ಕೋಮು ಭಾವನೆಗಳನ್ನು ಕೆರಳಿಸುವ ಮೂಲಕ ಗಲಭೆಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಇಲ್ಲಿನ 13 ವರ್ಷದ ಬಾಲಕನೊಬ್ಬ ಪ್ರಚಾರದ ಗೀಳು ಹತ್ತಿಸಿಕೊಂಡು ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡು ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿ ಕೋಮುಗಲಭೆ ಸೃಷ್ಟಿಸಲು ಮುಂದಾದನು.
ಬಾಲಕ ತನ್ನ ಮೇಲೆ ಯಾರೂ ಗಮನಹರಿಸುತ್ತಿಲ್ಲ. ಶಾಲೆಯಲ್ಲಿ, ಮನೆಯಲ್ಲಿಯೂ ನನಗೆ ಮುತುವರ್ಜಿ ವಹಿಸುತ್ತಿಲ್ಲ, ಶಾಲೆಯಲ್ಲಿ ಕಲಿತ ಪಾಠ ತಲೆಗೆ ಹತ್ತುತ್ತಿಲ್ಲ’ ಎಂದು ದಿಢೀರ್ ಎಂದು ಪ್ರಚಾರದಲ್ಲಿರಬೇಕೆಂದು ಮುಂದಾಗಿ `ನಾನು ಮದರಸಾನಿಂದ ಬರುತ್ತಿದ್ದೆ. ಆಗ ಬೈಕ್‌ನಲ್ಲಿ ಕೇಸರಿ ಶಾಲು ಧರಿಸಿ ವ್ಯಕ್ತಿಗಳಿಬ್ಬರು ಬಂದು ನನ್ನ ಮೇಲೆ ಹಲ್ಲೆ ಮಾಡಿದರು’ ಎಂದು ಕಥೆ ಹೆಣೆದಿದ್ದಾನೆ.
ಈ ಮೂಲಕ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಪರಿಣಾಮ ಪೊಲೀಸರು ಆತನ ಸತ್ಯಾಂಶ ಬಯಲುಗೊಂಡಿದೆ. ಪೊಲೀಸರು ವೈದ್ಯರು ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಮುಂದೆ ಬಾಲಕನನ್ನು ತನಿಖೆಗೆ ಒಳಪಡಿಸಿದಾಗ ಈ ಸತ್ಯ ಬಯಲಾಗಿದೆ. ಬಾಲಕ ಹೇಳಿದ್ದಷ್ಟೂ ಕಟ್ಟು ಕಥೆ ಎಂಬುದು ಗೊತ್ತಾಗಿದೆ.
ಬಾಲಕನು ಮದರಸಾದಲ್ಲಿ 6ನೇ ತರಗತಿ ಓದುತ್ತಿದ್ದು, ಕಳೆದ ಜೂನ್ 27ರಂದು ಮಂಗಳೂರು ನಗರ ಹೊರವಲಯದ ಕಾಟಿಪಳ್ಳದಲ್ಲಿ ಘಟನೆ ನಡೆದಿದೆ.
ಕೇಸರಿ ಶಾಲು ಧರಿಸಿ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಸೀದಿ ಉಸ್ತಾದ್ ಗಳಿಗೆ ದೂರು ನೀಡಿದ್ದಾನೆ. ದೂರು ನೀಡುವ ಮುನ್ನ ಪೆನ್ನಿನಿಂದ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಬಂದಿದ್ದಾನೆ. ಇದೇ ವಿಚಾರವನ್ನು ಮುಂದಿಟ್ಟು ಎಲ್ಲರ ಗಮನ ಸೆಳೆಯಲು ಮುಂದಾಗಿದ್ದಾನೆ. ಆದರೆ ಸೂಕ್ಷ್ಮಪ್ರದೇಶವಾಗಿದ್ದ ಮಂಗಳೂರಿನಲ್ಲಿ ಬಾಲಕನ ಹಲ್ಲೆ ವಿಚಾರ ಆತಂಕ ಮೂಡಿಸಿತ್ತು. ಪೊಲೀಸರು ಬಾಲಕನನ್ನು ತನಿಖೆಗೆ ಒಳಪಡಿಸಿದಾಗ ಅದು ಕಟ್ಟುಕಥೆ ಎಂಬುದು ಬಯಲಾಗಿದೆ.