ಕೋಲಾರ: ಕೆಂಪೇಗೌಡ ಜಯಂತಿಯಂದು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆಯಾಗಿರುವ ಬಗ್ಗೆ ವರದಿಯಾಗಿದ್ದು, ಕೈಕೈಮಿಲಾಯಿಸಿರುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೋಲಾರದ ಪ್ರವಾಸಿ ಮಂದಿರದ ಎದುರು ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ತಕರ್ತರು ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಗಲಾಟೆ ವಿಕೋಪಕ್ಕೆ ತೆರಳಿ ತಳ್ಳಾಟ, ನೂಕಾಟ ನಡೆದಿದೆ.
ಕಾರ್ಯಕ್ರಮದ ವೇದಿಕೆಯ ಬಳಿ ನಿಂತಿದ್ದ ಜೆಡಿಎಸ್‌ನ ಕೆಲ ಕಾರ್ಯಕರ್ತರು ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರು ಹೇಳುವಂತೆ ಸಂಘಟಕರ ಬಳಿ ಒತ್ತಾಯಿಸಿದರು.
ಇದನ್ನೂ ಓದಿ: ಉಡುಪಿ: ನಜ್ಜುಗುಜ್ಜಾದ ಹೊಸ ಫಾರ್ಚೂನರ್ ಕಾರು
ಇದರಿಂದ ಸಿಟ್ಟಾದ ಕಾಂಗ್ರೆಸ್‌ನ ಎಂಎಲ್‌ಸಿ ಅನಿಲ್ ಕುಮಾರ್, ‘ನೀವಿಲ್ಲಿ ರಾಜಕೀಯ ಮಾಡಲು ಬಂದಿದ್ದರೆ ನನಗೂ ರಾಜಕೀಯ ಮಾಡಲು ಬರುತ್ತದೆ. ನೋಡ್ತೀರಾ’ ಎಂದು ಜೆಡಿಎಸ್ ಮುಖಂಡರಿಗೆ ಅವಾಜ್ ಹಾಕಿದ್ದಾರೆ.
ಇದರಿಂದ ಜೆಡಿಎಸ್ ಕಾರ್ಯಕರ್ತರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಪರಸ್ಪರ ಹೊಡೆದಾಟಕ್ಕೂ ಮುಂದಾದರು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ತಡೆದರು.
ಸದ್ಯ ಕಾರ್ಯಕ್ರಮದಲ್ಲಿ ಕೆಲಕಾಲ ಗದ್ದಲದ ವಾತಾವರಣ ಉಂಟಾಗಿದ್ದು, ವೇದಿಕೆ ಮೇಲಿದ್ದ ಆದಿಚುಂಚನಗಿರಿ ಶಾಖಾ ಮಠದ ಮಂಗಳಸ್ವಾಮೀಜಿ ಈ ಬಗ್ಗೆ ಮಾತನಾಡಿದ್ದು, ಈ ಘಟನೆ ಬಹಳ ಬೇಸರ ತಂದಿದೆ ಎಂದರು.
ಇದನ್ನೂ ನೋಡಿ: ಪ್ರಜ್ವಲ್ – ಸೂರಜ್ ವಿರುದ್ದ ಒಂದರ ಹಿಂದೆ ಮತ್ತೊಂದು ದೂರು ದಾಖಲು – ಒಬ್ಬರ ಜೊತೆ ಮತ್ತೊಬ್ಬರು ಜೈಲು ಪಾಲು