ಬೆಂಗಳೂರು : ” ನಿಮ್ಮ ಸಮಸ್ಯೆಯನ್ನು ಆಲಿಸಲು” ಇಂದು ಕೋಗಿಲು ಬಡಾವಣೆಗೆ ಜಿಲ್ಲಾಧಿಕಾರಿ ಬರುತ್ತಿದ್ದಾರೆ ಹಾಗಾಗಿ ಹೊರಗಿನ ಜನ ಯಾರು ಇರಬಾರದೆಂದು, ಇಲ್ಲಿ ಇರುವ ಜನರು ಮಾತ್ರ ಇರಬೇಕು ಎಂದು ಹೇಳಿದ್ದ ಪೊಲೀಸರು ಶಾಸಕರನ್ನು ಕರೆ ತಂದ ಘಟನೆ ನಡೆದಿದೆ.
ಫಕೀರ್ ಕಾಲೋನಿ ಮತ್ತು ವಸೀಂ ಕಾಲೋನಿಯ ಸುತ್ತ ಬ್ಯಾರಿಕೇಡ್ ಹಾಕಿ, ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದ ಕಾರಣ ಜಿಲ್ಲಾಧಿಕಾರಿ ಬರಬಹುದು ಎಂದು ಅಲ್ಲಿನ ನಿರಾಶ್ರಿತರು ನಂಬಿದ್ದರು. ಆದರೆ ಬಿಜೆಪಿಯ ಶಾಸಕ ವಿಶ್ವನಾಥ್, ಮುನಿರಾಜು, ತಮ್ಮೆಗೌಡ, ಮಾಳಾವಿಕ ಅವಿನಾಶ ಆಗಮನವನ್ನು ಪ್ರಶ್ನಿಸಿದ ನಿರಾಶ್ರಿತರು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ದುಡಿಯುವ ಜನರ ವೇದಿಕೆಯ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ : ಕೋಗಿಲು ತೆರವು ಕಾರ್ಯಾಚರಣೆ: ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ನೀಡಲು ಮಾನವ ಹಕ್ಕುಗಳ ಆಯೋಗದ ಸೂಚನೆ
ಪ್ರತಿಭಟನೆ ನಡೆಯುತ್ತಿದ್ದಂತೆ ಬಿಜೆಪಿಯ ನಾಯಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನೀವು ಪ್ರತಿಭಟನೆ, ಘೋಷಣೆ ಕೂಗುವುದಾದರೆ ಫ್ರೀಡಂಪಾರ್ಕ್ ಹೋಗಿ ಎಂದು ಪೊಲೀಸರು ಹೇಳುತ್ತಿದ್ದಂತೆ ಪ್ರತಿಭಟನೆಕಾರರು ಮತ್ತಷ್ಟು ಆಕ್ರೋಶಗೊಂಡರು. ಪೊಲೀಸರು ಮತ್ತು ಪ್ರತಿಭಟನೆಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಇಲ್ಲಿನ ಬಡ ನಿರಾಶ್ರಿತರ ಜೊತೆ ಕಾಂಗ್ರೆಸ್ ಸರ್ಕಾರ ಒಂದು ತರದ ಆಟ ಆಡಿದರೆ, ಬಿಜೆಪಿ ಇನ್ನೊಂದು ರೀತಿಯ ಆಟವಾಡುತ್ತಿದೆ. ಈ ಘಟನೆಯಲ್ಲಿ ಧರ್ಮವನ್ನು ಹೆಕ್ಕಿ ತೆಗದು ಈ ಪ್ರಕರಣವನ್ನು ಕೋಮುವಾದೀಕರಣಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ ತಿಳಿಸಿದ್ದಾರೆ. ನಿರಾಶ್ರಿತರಿಗೆ ವಸತಿ ಸೌಕರ್ಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ : ಮರ್ಯಾದೆಗೇಡು ಹತ್ಯೆ ತಡೆಗೆ ಪ್ರತ್ಯೇಕ ಕಾಯ್ದೆಗೆ ಸಿದ್ಧತೆ!?| ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
