ಬೆಂಗಳೂರು ಕಂಬಳ ಮಾದರಿಯಲ್ಲಿ ಕೊಬ್ಬರಿ ಹೋರಿ ನಡೆಸಿ | ಸಿಎಂ ಸಿದ್ದರಾಮಯ್ಯಗೆ ಪತ್ರ

ಹುಬ್ಬಳ್ಳಿ: ಹಾವೇರಿ ಮತ್ತು ಶಿವಮೊಗ್ಗ ಭಾಗಗಳಲ್ಲಿ ನಡೆಯುವ ಗ್ರಾಮೀಣ ಕ್ರೀಡೆಯಾದ ‘ಕೊಬ್ಬರಿ ಹೋರಿ’ ಕ್ರೀಡೆಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಕಂಬಳ’ ಕಾರ್ಯಕ್ರಮದ ಮಾದರಿಯಲ್ಲಿ ರಾಜ್ಯ ರಾಜಧಾನಿಯಲ್ಲಿ ನಡೆಸಲು ರಾಜ್ಯ ಸರ್ಕಾರವನ್ನು ಸಂಪರ್ಕಿಸಲು ಯೋಜಿಸಿದ್ದಾಗಿ ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ. ಈ ಬಗ್ಗೆ ಈಗಾಗಲೆ ಮುಖ್ಯಮಂತ್ರಿಗೆ ಮನಿವಿ ಪತ್ರವನ್ನು ಕೂಡಾ ಸಲ್ಲಿಸಿದ್ದಾರೆ.

ರಾಜ್ಯದ ವಿವಿಧ ಬೃಹತ್ ಕೊಬ್ಬರಿ ಹೋರಿ ಕಾರ್ಯಕ್ರಮಗಳಿಗೆ ಕೇಂದ್ರ ಸ್ಥಾನವಾಗಿರುವ ಹಾವೇರಿಯ ಹಾನಗಲ್‌ನ ಆಯೋಜಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದು, ಬೆಂಗಳೂರಿನಲ್ಲಿ ಹೆಚ್ಚಿನ ಪ್ರೇಕ್ಷಕರಿಗೆ ಗ್ರಾಮೀಣ ಕ್ರೀಡೆಗಳನ್ನು ಪ್ರದರ್ಶಿಸಲು ಇದು ಒಂದು ಅನನ್ಯ ಅವಕಾಶ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಧರ್ಮ ವೈಯಕ್ತಿಕ ಆಯ್ಕೆ: ರಾಮ ಮಂದಿರ ಉದ್ಘಾಟನೆ ಸಮಾರಂಭದ ಆಹ್ವಾನ ತಿರಸ್ಕರಿಸಿದ ಸೀತಾರಾಮ್ ಯೆಚೂರಿ

“ಸರ್ಕಾರವು ಕಂಬಳವನ್ನು ಕ್ರೀಡಾ ಸಂಘಟಕರನ್ನು ಬೆಂಗಳೂರಿಗೆ ಆಹ್ವಾನಿಸಿದೆ. ನಾವು ಈ ಕಾರ್ಯಕ್ರಮವನ್ನು ಆಯೋಜಿಸಲು ಯೋಚಿಸಿದ್ದೇವೆ. ಅದಕ್ಕಾಗಿ ಬೆಂಗಳೂರಿನಲ್ಲಿ ಸಣ್ಣ ಸೆಟ್‌ಅಪ್ ಅನ್ನು ರಚಿಸಲಾಗಿದ್ದು, ಜನರು ಇಲ್ಲಿ ಆಡುವ ಗ್ರಾಮೀಣ ಕ್ರೀಡೆಗಳನ್ನು ವೀಕ್ಷಿಸಬಹುದು” ಎಂದು ಹೇಳಿದ್ದಾರೆ.

ಕೊಬ್ಬರಿ ಹೋರಿಯನ್ನು ಕ್ರೀಡೆಯನ್ನು ಅಲಂಕೃತವಾದ ಎತ್ತುಗಳನ್ನು ಬಳಸಿ ಆಡಲಾಗುತ್ತದೆ. ಈ ಕ್ರೀಡೆಯನ್ನು ಆಡುವ ಅಖಾಡವನ್ನು ಕಾಂಚ ಎಂದು ಕರೆಯಲಾಗುತ್ತದೆ. ಕೆರಳಿದ ಗೂಳಿಗಳನ್ನು ತಡೆಯಲು ಸಿದ್ಧವಾಗಿರುವ ಆಟಗಾರರು ಅದೇ ಪ್ರದೇಶದೊಳಗೆ ಇದ್ದು ಅದನ್ನು ಬೆದರಿಸುತ್ತಾರೆ.

ಗೂಳಿಗಳು ಒಂದು ಕೇಂದ್ರದಿಂದ ಇನ್ನೊಂದು ಕೇಂದ್ರದ ಕಡೆಗೆ ಓಡುವಂತೆ ಮಾಡಲಾಗಿದ್ದು. ಆಟಗಾರರು ಅದನ್ನು ಹಿಡಿದು ಅದರ ಕೊರಳಲ್ಲಿರುವ ತೆಂಗಿನಕಾಯಿ ಹಾರವನ್ನು ಬಿಚ್ಚಿ ಬಹುಮಾನ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಆಟಗಾರರು ಗೂಳಿಯನ್ನು ನಿಲ್ಲಿಸಲು ಸಾಧ್ಯವಾಗದೆ ಇದ್ದರೆ ಹೋರಿಯ ಮಾಲೀಕರು ಬಹುಮಾನವನ್ನು ಪಡೆಯುತ್ತಾರೆ. ಬಹುಮಾನಗಳು ಚಿನ್ನದ ಆಭರಣಗಳಿಂದ ಹಿಡಿದು ದ್ವಿಚಕ್ರ ವಾಹನಗಳು ಮತ್ತು ಕಾರುಗಳವರೆಗೆ ಇರುತ್ತದೆ.

“ಇತ್ತೀಚಿನ ದಿನಗಳಲ್ಲಿ ಈ ಕ್ರೀಡೆಯ ಹಲವಾರು ನಿಯಮಗಳನ್ನು ಮಾರ್ಪಡು ಮಾಡಲಾಗಿದೆ. ಹಾಗಾಗಿ ಇದು ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಕಡಿಮೆ ಅಪಾಯಕಾರಿಯಾಗಿದೆ. ಇಂತಹ ಕ್ರೀಡೆಯನ್ನು ಈಗ ದೊಡ್ಡ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಸಿದ್ಧವಾಗಿದೆ. ಜಲ್ಲಿಕಟ್ಟು ಆಟವನ್ನು ನಿಷೇಧಿಸಲು ಹೊರಟಿದ್ದಾಗ ಕೊಬ್ಬರಿ ಹೋರಿ ಕ್ರೀಡೆಯ ಬಗ್ಗೆ ಆತಂಕ ಇತ್ತು. ಆದರೆ ಇದು ಇತರ ಗ್ರಾಮೀಣ ಕಾರ್ಯಕ್ರಮಗಳಂತೆಯೇ ಇದೆ ಎಂದು ಸರ್ಕಾರಗಳು ಅರಿತುಕೊಂಡಿವೆ. ಈ ಆಟವನ್ನು ಸುಗ್ಗಿಯ ನಂತರ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಆಯೋಜಿಸಲಾಗುತ್ತದೆ, ”ಎಂದು ಹಾನಗಲ್‌ನ ಸಂಘಟಕರು ಹೇಳಿದ್ದಾಗಿ TNIE ವರದಿ ಮಾಡಿದೆ.

ವಿಡಿಯೊ ನೋಡಿ: ಪ್ರಚೋದನಾಕಾರಿ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಸಿಪಿಐಎಂ ಒತ್ತಾಯ Janashakthi Media

Donate Janashakthi Media

Leave a Reply

Your email address will not be published. Required fields are marked *