ಕಲಬುರಗಿ: ಕಲಬುರಗಿ ನಗರದ ಸಾಯಿ ಮಂದಿರ ಹತ್ತಿರದ ಅಪಾರ್ಟ್ಮೆಂಟ್ ಬಳಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ ಆಗಿದೆ. ಈರಣ್ಣಗೌಡ ಪಾಟೀಲ್ (40) ಹತ್ಯೆಯಾದ ವಕೀಲ. ಕಲಬುರಗಿಯಲ್ಲಿ
ಈರಣ್ಣಗೌಡ ಕೋಟ್೯ಗೆ ತೆರುಳುವಾಗ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಏಕಾಏಕಿ ಮಚ್ಚು, ಲಾಂಗ್‌ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ವಕೀಲ ಈರಣ್ಣಗೌಡ ಬೈಕ್ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಆದರೂ ಬಿಡದೆ ಹಂತಕರಿಬ್ಬರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬರೋಬ್ಬರಿ ಅರ್ಧ ಕಿಲೋ ಮೀಟರ್ ಅಟ್ಟಾಡಿಸಿಕೊಂಡು ಬಂದಿದ್ದಾರೆ. ಹಾಡಹಗಲೇ
ಇದನ್ನೂ ಓದಿ:ನ್ಯಾಯಾಲಯದ ಆವರಣದಲ್ಲಿಯೇ ವಕೀಲನ ಬರ್ಬರ ಹತ್ಯೆ : ಹಂತಕನನ್ನು ಬಂಧಿಸಿದ ಪೊಲೀಸರು
ಅವರಿಂದ ತಪ್ಪಿಸಿಕೊಂಡು ವಕೀಲ ಈರಣ್ಣಗೌಡ ಅಪಾರ್ಟ್‌ಮೆಂಟ್ ಕಡೆಗೆ ನುಗ್ಗಿದ್ದಾರೆ. ವಕೀಲ ಈರಣ್ಣಗೌಡ ಓಡುತ್ತಲೇ ತಮ್ಮ ರಕ್ಷಣೆಗಾಗಿ ಇಟ್ಟುಕೊಂಡಿದ್ದ ರಿವಾಲ್ವಾರ್ ತೆಗೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಹಂತಕರು ಕೊಚ್ಚಿ ಕೊಲೆಗೈದಿದ್ದಾರೆ. ಹಂತಕ ಸಿಟ್ಟು ಎಷ್ಟು ಇತ್ತು ಎಂದರೆ ವಕೀಲ ಸತ್ತಿದ್ದರೂ ದೊಡ್ಡ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿದ್ದಾರೆ. ಆತ ಉಸಿರು ಚೆಲ್ಲಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು ಪರಾರಿ ಆಗಿದ್ದಾರೆ. ವಕೀಲನನ್ನು ಅಟ್ಟಾಡಿಸಿ ಕೊಲೆಗೈದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಾಡಹಗಲೇ
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಧಿಕರಿಂದಲೇ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿವಿ ಠಾಣೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ರಕ್ತಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಲಬುರಗಿಯಲ್ಲಿ ವಕೀಲನ ಬರ್ಬರ ಹತ್ಯೆ ಸುದ್ದಿ ಹರಿದಾಡುತ್ತಿದ್ದಂತೆ ಕಲಬುರಗಿಯ ಜಿಲ್ಲಾ ನ್ಯಾಯವಾದಿಗಳ ಸಂಘ ಪ್ರತಿಭಟಿಸಿದೆ. ನಗರದ ಎಸ್‌ವಿಪಿ ವೃತ್ತದ ಬಳಿ ಜಿಲ್ಲಾ ನ್ಯಾಯವಾದಿಳು ಪ್ರತಿಭಟಿಸಿ, ಕೊಲೆ ಮಾಡಿದ ಹಂತಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಕಲಬುರಗಿಯಲ್ಲಿ
ಈ ಕೊಲೆ ಘಟನೆ ಅತ್ಯಂತ ಖಂಡನಿಯ, ದಿನ ನಿತ್ಯ ವಕೀಲರ ಮೇಲೆ ದಾಳಿ, ದೌರ್ಜನ್ಯ , ಕೊಲೆ ಹಾಗೂ ಹಲ್ಲೆಯಂತಹ ಘಟನೆಗಳು ನಡೆಯುತ್ತಿವೆ. ವಕೀಲರಿಗೆ ಹಾಗೂ ವಕೀಲರ ಕುಟುಂಬಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕೂಡಲೇ ಸರಕಾರಗಳು ವಕೀಲರ ರಕ್ಷಣಾ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಲು ಕ್ರಮ ವಹಿಸಬೇಕು ಈ ಕೂಡಲೇ ಪೋಲಿಸರು ಕೊಲೆ ಆರೋಪಿಗೆ ಸೂಕ್ತ ಹಾಗೂ ಸರಿಯಾದ ತನಿಖೆ ನಡೆಸಿ ತಕ್ಕ ಶಿಕ್ಷೆ ವಿಧಿಸಲು ಮತ್ತು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.
ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್ 07 | ಭಾಗ 01 Live #wintersession2023