ಬೆಂಗಳೂರು: 13 ವರ್ಷದ ಬಾಲಕನನ್ನು ಅಪಹರಿಸಿ ಸುಟ್ಟು ಹಾಕಿದ ಭಯಂಕರ ಘಟನೆ ನಗರದ ಕಗ್ಗಲಿಪುರ ಪ್ರದೇಶದಲ್ಲಿ ನಡೆದಿದೆ. ನಿಶ್ಚಿತ್ ಎನ್ನುವ ಮಗುವಿನ ಮೃತದೇಹ ಸುಟ್ಟು ಕರಕಲಾಗಿದೆ. ಇದೀಗ ಈ ಸುದ್ದಿ ಇಡೀ ನಗರದಲ್ಲಿ ಸಂಚಲನ ಮೂಡಿಸಿದೆ.
ನಿಶ್ಚಿತ್ ತನ್ನ ಕುಟುಂಬದೊಂದಿಗೆ ಅರೆಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಬಾಲಕನ ತಂದೆ ಪ್ರಸಿದ್ಧ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಆಗಸ್ಟ್ 30 ಸಂಜೆ ಟ್ಯೂಷನ್ ಮುಗಿಸಿ ಮಗು ಹಿಂತಿರುಗುತ್ತಿದ್ದಾಗ ನಿಶ್ಚಿತ್ ನನ್ನು ಅಪಹರಿಸಲಾಗಿದ್ದೂ, ನಂತರ ಅಪಹರಣಕಾರರು ಕುಟುಂಬಕ್ಕೆ ಕರೆ ಮಾಡಿ 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ನಾಲ್ವರ ಅಮಾನತು ರದ್ದು; ಸ್ಥಳ ನಿಯೋಜನೆ
ಶಾಲಾ ಮಗುವಿನ ಅಪಹರಣ :
ಬೆಂಗಳೂರಿನ ಹುಳಿಮಾವಿನಲ್ಲಿ 10 ವರ್ಷದ ಮಗುವನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ಸನ್ನು ಸಾಧಿಸಿದ್ದಾರೆ. ಗುರುವಾರ ರಾತ್ರಿ ತಡವಾಗಿ ನಡೆದ ಎನ್‌ಕೌಂಟರ್ ನಂತರ ಇಬ್ಬರು ಆರೋಪಿಗಳನ್ನು (ಗುರುಮೂರ್ತಿ ಮತ್ತು ಗೋಪಿಕೃಷ್ಣ ಅಲಿಯಾಸ್ ಗೋಪಾಲ್) ಬಂಧಿಸಲಾಯಿತು. ಬನ್ನೇರುಘಟ್ಟ ಪೊಲೀಸ್ ವ್ಯಾಪ್ತಿಯ ಕಗ್ಗಲಿಪುರ ರಸ್ತೆಯ ಬಳಿ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ, ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದಾಗ ಇಬ್ಬರಿಗೂ ಗುಂಡು ಹಾರಿಸಲಾಯಿತು. ಗಾಯಗೊಂಡ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಗುರುಮೂರ್ತಿ ಮೃತ ಬಾಲಕನ ಮನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಗುರು ಮೂರ್ತಿ ಮತ್ತು ಆತನ ಸಹಚರ ಗೋಪಿಕೃಷ್ಣ ಸೇರಿಕೊಂಡು ನಿಶ್ಚಯ್‌ನನ್ನು ಅಪಹರಿಸಿ ಕೊಂದು ಹಾಕಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ನಿಶ್ಚಯ್ ಕ್ರೈಸ್ಟ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಅರಕೆರೆಯ ವ್ಯಾಸ ಬ್ಯಾಂಕ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಗುರುವಾರ ಸಂಜೆ ಬನ್ನೇರುಘಟ್ಟ-ಗೊಟ್ಟಿಗೆರೆ ರಸ್ತೆಯ ಬಳಿ ಅರ್ಧ ಸುಟ್ಟ ಸ್ಥಿತಿಯಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆರೋಪಿಗಳು ಕಗ್ಗಲೀಪುರ ರಸ್ತೆಯ ಬಳಿ ಅಡಗಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ, ಹುಳಿಮಾವು ಪೊಲೀಸ್ ಠಾಣೆಯ ತಂಡವು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಪೊಲೀಸರ ಮೇಲೆ ದಾಳಿಗೆ ಮುಂದಾದ ಆರೋಪಿಗಳು :
ಪೊಲೀಸರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದಾಗ, ಪೋಲಿಸ್ಸರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಪ್ರತಿ ದಾಳಿಯಾಗಿ ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು. ಗುರುಮೂರ್ತಿಯ ಎರಡೂ ಕಾಲುಗಳಿಗೆ ಗುಂಡು ತಗಲಿದ್ದರೆ, ಗೋಪಿಕೃಷ್ಣನ ಬಲಗಾಲಿಗೆ ಗುಂಡೇಟು ಬಿದ್ದಿದೆ. ಇಬ್ಬರನ್ನೂ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಪ್ರಕಾರ, ಬುಧವಾರ ಸಂಜೆ ಟ್ಯೂಷನ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ನಿಶ್ಚಯ್ ನನ್ನು ಗುರುಮೂರ್ತಿ ಅಪಹರಿಸಿದ್ದಾನೆ. ಮಗು ಕಾಣೆಯಾದ ನಂತರ, ಕುಟುಂಬವು ತಕ್ಷಣವೇ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ಪೊಲೀಸರು ತಕ್ಷಣ ಶೋಧ ಕಾರ್ಯಾಚರಣೆಯನ್ನು ಆರಂಭಿಸಿ ಶಂಕಿತರ ಫೋನ್ ಸಿಗ್ನಲ್‌ಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದರು.
ಈ ಮಧ್ಯೆ, ಕುಟುಂಬಕ್ಕೆ ಹಣದ ಬೇಡಿಕೆ ಇಟ್ಟು ಫೋನ್ ಬಂದ ನಂತರ ತನ್ನ ಮಗು ಸುರಕ್ಷಿತವಾಗಿ ಮಡಿಲು ಸೇರಲಿ ಎಂದು ಆ ತಾಯಿ ಪ್ರಾರ್ಥಿಸುತಲೇ ಇದ್ದರು. ಆದರೆ ದುರಾದೃಷ್ಟ ಆ ತಾಯಿಯ ಕುಡು ಯಾವ ದೇವರಿಗೂ ಕೇಳಿಸಲಿಲ್ಲ. ಸಂಜೆ 5 ಗಂಟೆ ಸುಮಾರಿಗೆ, ಬನ್ನೇರುಘಟ್ಟ-ಕಗ್ಗಲೀಪುರ ರಸ್ತೆಯ ಬಳಿಯ ನಿರ್ಜನ ಸ್ಥಳದಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಇದನ್ನೂ ನೋಡಿ: ಧರ್ಮಸ್ಥಳ: ಮೃತದೇಹಗಳ ಹೂತಿಟ್ಟ ಜಾಗವನ್ನು ತೋರಿಸಿದ ಸಾಕ್ಷಿ ದೂರುದಾರ Janashakthi Media
