ಖಾತೆ ಹಂಚೆಕೆಗೆ ಅಮಿತ್ ಶಾ ಎಂಟ್ರಿ, ದೊಡ್ಡ ದೊಡ್ಡ ಖಾತೆಗೆ ಬೇಡಿಕೆ ಇಟ್ಟ ನೂತನ ಸಚಿವರು
ಬೆಂಗಳೂರು 16 : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ 7 ಮಂದಿ ನೂತನ ಸಚಿವರ ಸೇರ್ಪಡೆಯಾಗಿದೆ. ಅವರಿಗೆ ಖಾತೆಗಳನ್ನು ಹಂಚಿಕೆ ಯಡಿಯೂರಪ್ಪ ಗೆ ತಲೆ ನೋವಾಗಿದೆ. ಅನೇಕರು ದೊಡ್ಡ ದೊಡ್ಡ ಖಾತೆಗಳಿಗೆ ಬೇಡಿಕೆ ಇಟ್ಟದ್ದೆ ಇದಕ್ಕೆ ಕಾರಣವಾಗಿದೆ. ಈಗಾಗಲೆ ಸಿ.ಡಿ, ಬ್ಲ್ಯಾಕ್ ಮೇಲ್ ವಿಚಾರಗಳಿಂದ ಯಡಿಯೂರಪ್ಪ ಡಿಸ್ಟರ್ಭ್ ಆಗಿದ್ದು ಖಾತೆ ಹಂಚಿಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಬಂದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮೊನ್ನೆಯಷ್ಟೇ ಮುಖ್ಯಮಂತ್ರಿಗಳು ಹೇಳಿದ್ದರು.ಈಗಿರುವ ಸಚಿವರುಗಳಿಗೆ ಖಾತೆ ಮರು ಹಂಚಿಕೆಯಾಗಲಿದೆಯೇ ಮತ್ತು ಹಿರಿಯ ಸಚಿವರುಗಳ ಖಾತೆ ಮರು ಹಂಚಿಕೆಯಾಗಲಿದೆಯೇ ಎಂಬ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡಿಲ್ಲ.
ಈ ಬಾರಿ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳಿಗೆ ಸವಾಲಾಗಬಹುದು. ತಾವು ಈಗ ಹೊಂದಿರುವ ಖಾತೆಗಳನ್ನು ನೂತನ ಸಚಿವರುಗಳಿಗೆ ಏಕಾಏಕಿ ಹಂಚಿಕೆ ಮಾಡಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗದಿರಬಹುದು. ಹೊಸಬರು ಮತ್ತು ಈಗಾಗಲೇ ಇರುವ ಸಚಿವರುಗಳ ಮಧ್ಯೆ ಸಮತೋಲನ ಕಾಯ್ದುಕೊಳ್ಳಬೇಕಿದೆ. ಈ ಪ್ರಕ್ರಿಯೆಯಲ್ಲಿ ಕೆಲವು ಸಚಿವರುಗಳ ಖಾತೆ ಪುನರ್ರಚನೆಯಾಗಬಹುದು ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ನೂತನ ಸಚಿವರುಗಳಿಗೆ ಪ್ರಮುಖ ಖಾತೆಗಳ ಮೇಲೆ ಕಣ್ಣಿದೆ. ನೂತನ ಸಚಿವ ಆರ್ ಶಂಕರ್, ನಾನು ರಾಜೀನಾಮೆ ನೀಡಿದ್ದ ವೇಳೆ ಮುಖ್ಯಮಂತ್ರಿಗಳು ನನಗೆ ಪ್ರಮುಖ ಖಾತೆ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಅದನ್ನು ಅವರು ಈಗ ಈಡೇರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇನ್ನು ಅರವಿಂದ ಲಿಂಬಾವಳಿಯವರು ಬೆಂಗಳೂರು ಅಭಿವೃದ್ಧಿ ಸಚಿವಾಲಯ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಹುದ್ದೆ ಮೇಲೆ ಕಂದಾಯ ಸಚಿವ ಆರ್ ಅಶೋಕ್ ಅವರಿಗೂ ಆಸೆಯಿದೆ.
ಲಿಂಬಾವಳಿ ಅಥವಾ ಅಶೋಕ ಅವರಿಗೆ ಖಾತೆ ನೀಡಿದರೆ, ಹಿರಿಯ ಮಂತ್ರಿಗಳಲ್ಲಿ ಸಣ್ಣ ಪುನರ್ರಚನೆ ಆಗಬಹುದು. ಆರ್ ಅಶೋಕ ಅವರು ಗೃಹ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈಗ ಗೃಹ ಸಚಿವರಾಗಿರುವ ಬೊಮ್ಮಾಯಿಯವರು ನೀರಾವರಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿಗೆ ಇಂಧನ ಖಾತೆ ಮೇಲೆ ಒಲವಿದೆ. ನೂತನವಾಗಿ ಸಚಿವರಾದವರಲ್ಲಿ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ ಹಿರಿಯರು. ಎಸ್ ಅಂಗಾರ, ಸಿ ಪಿ ಯೋಗೇಶ್ವರ್, ಆರ್ ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಸಹ ಪ್ರಮುಖ ಖಾತೆ ನೀಡುವ ಕೆಲಸ ಮುಖ್ಯಮಂತ್ರಿಗಳ ಮೇಲೆ ಇದೆ.
ಇವರಂದುಕೊಂಡಂತೆ ಖಾತೆಗಳು ಸಿಗುವುದು ಕಷ್ಟ ಇಟ್ಟಾರೆ ಖಾತೆ ಹಂಚಿಕೆ ವಿಚಾರದಲ್ಲಿ ಅಮಿತ್ ಶಾ ತೆಗೆದುಕೊಳ್ಳು ನಿರ್ಧಾರ ಅಂತಿಮವಾಗಲಿದೆ.