ಬೆಂಗಳೂರು ; ಜ, 21 : ಸಚಿವ ಸಂಪುಟ ವಿಸ್ತರಣೆ ಬಳಿಕ ಒಂದು ವಾರ ಕಳೆಯುತ್ತಿದ್ದಂತೆ ಸಿಎಂ ಯಡಿಯೂರಪ್ಪ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದರ ಜೊತೆಗೆ ಕೆಲವು ಖಾತೆ ಮರು ಹಂಚಿಕೆ ಮಾಡಿದ್ದಾರೆ. ಖಾತೆ ಖಾತ್ರಿಯಾಗುತ್ತಿದ್ದಂತೆ ಸಚಿವರು ಮತ್ತೆ ಅಸಮಾಧಾನ ಹೊರ ಹಾಕಿದ್ದು ಯಡಿಯೂರಪ್ಪನವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಹಾಗಾದರೆ ಯಾರಿಗೆ ಯಾವ ಖಾತೆ ಕೊಡಲಾಗಿದೆ.
ಖಾತೆಯ ವಿವರ ಹೀಗಿದೆ
ಉಮೇಶ ಕತ್ತಿ | ಆಹಾರ ಮತ್ತು ನಾಗರಿಕ ಪೂರೈಕೆ |
ಅಂಗಾರ | ಮೀನುಗಾರಿಕೆ ಮತ್ತು ಬಂದರು |
ಬೊಮ್ಮಾಯಿ | ಗೃಹ ಜೊತೆಗೆ ಕಾನೂನು ಸಂಸದೀಯ |
ಮಾಧುಸ್ವಾಮಿ | ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ |
ಸಿ ಸಿ ಪಾಟೀಲ್ | ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ |
ಅರವಿಂದ ಲಿಂಬಾವಳಿ | ಅರಣ್ಯ ಖಾತೆ |
ಮುರುಗೇಶ್ ನಿರಾಣಿ | ಗಣಿಗಾರಿಕೆ |
ಎಂಟಿಬಿ ನಾಗರಾಜ್ | ಅಬಕಾರಿ |
ಕೋಟ ಶ್ರಿನಿವಾಸ್ | ಮುಜರಾಯಿ ಜೊತೆ ಹಿಂದುಳಿದ ವರ್ಗ |
ಡಾ. ಕೆ ಸುಧಾಕರ್ | ಆರೋಗ್ಯ ಇಲಾಖೆ |
ಆನಂದ್ ಸಿಂಗ್ | ಪ್ರವಾಸೋದ್ಯಮ, ಪರಿಸರ |
ಸಿ ಪಿ ಯೋಗೇಶ್ವರ್ | ಸಣ್ಣ ನೀರಾವರಿ |
ಪ್ರಭು ಚೌಹಾಣ್ | ಪಶುಸಂಗೋಪನೆ |
ಆರ್ ಶಂಕರ್ | ಪೌರಾಡಳಿತ ಮತ್ತು ರೇಶ್ಮೆ |
ಗೋಪಾಲಯ್ಯ | ತೋಟಗಾರಿಕೆ ಮತ್ತು ಸಕ್ಕರೆ |
ನಾರಾಯಣ ಗೌಡ | ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್ |
ಖಾತೆ ಮರು ಹಂಚಿಕೆಗೆ ಹಿನ್ನೆಲೆ ಅಸಮಧಾನ ಸ್ಪೋಟವ್ಯಕ್ತವಾಗಿದೆ. ಈ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಕತ್ತಿಯವರ ಹೇಳಿಕೆ ಆಶ್ಚರ್ಯವನ್ನು ಉಂಟುಮಾಡಿದೆ. ಈ ಹಿಂದೆ ಅಸಮಾಧಾನ ಖ್ಯಾತೆ ತೆಗೆಯುತ್ತಿದ್ದ ಕತ್ತಿ ವಿಧಾನಸೌಧದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಖಾತ್ರಿಯಾದ ಬಳಿಕ ಅಸಮಾಧಾನ ಇದ್ದರೆ ಅವರನ್ನೇ ಕೇಳಿ ಎಂದು ಭಿನ್ನವಾಗಿ ನುಡಿದಿದ್ದಾರೆ.
ಅಂತಹ ದೊಡ್ಡಮಟ್ಟದ ಅಸಮಾಧಾನ ಯಾವುದು ಇಲ್ಲ, ನಾನು ರಾಜ್ಯದ ಮಂತ್ರಿಯಾಗಿ ಆತ್ಮಸಾಕ್ಷಿಯಾಗಿ ಸಂತೋಷವಾಗಿದ್ದೇನೆ, ಬಿಪಿಎಲ್ ಕಾರ್ಡುದಾರರಿಗೆ ಅನುಕೂಲ ಮಾಡುತ್ತೇನೆ, ಜೋಳ, ರಾಗಿ ದೊರೆಯುವಂತೆ ಮಾಡುತ್ತೇನೆ, ನನಗೆ ಯಾವುದೇ ಅಸಮಾಧಾನ ಇಲ್ಲ, ನಾನು ಈ ಹಿಂದೆ 13 ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಮಂತ್ರಿ ಸ್ಥಾನ ನನಗೆ ಹೊಸದಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಈ ಖಾತೆ ಹಂಚಿಕೆ ಸಂಬಂಧಿಸಿದಂತೆ ಯಡಿಯೂರಪ್ಪನ ಆಪ್ತ ಆನಂಸಿಂಗ್ ಮತ್ತೊಮ್ಮೆ ಯಡಿಯೂರಪ್ಪನವರನ್ನು ಹಾಡಿ ಹೋಗಳಿದ್ದಾರೆ. ಸಿಎಂ ನಮಗೆ ಯಾವಾಗಲ್ಲೂ ಕ್ಯಾಂಪ್ಟನ್ ಇದ್ದಂತೆ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಖಾತೆ ಮರು ಹಂಚಿಕೆ ಮಾಡಿದ್ದಾರೆ. ಇದರಿಂದ ನನಗೆ ಯಾವುದೇ ಅಸಮಾಧವಿಲ್ಲ ಎಂದು ಹೇಳಿದ್ದಾರೆ.
ಇನ್ನು ಮಾಧುಸ್ವಾಮಿ ಅವರ ಖಾತೆ ಬದಲಾವಣೆಯಾದೆ. ಅವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಖಾತೆ ಕೊಡಲಾಗಿದೆ. ಈ ಹಿಂದ ಡಾ. ಕೆ ಸುಧಾಕರ್ ನಿಭಾಯಿಸುತ್ತಿದ್ದರು. ಈ ಖಾತೆಯಿಂದ ಮಾಧುಸ್ವಾಮಿ ಅಮಾಧಾನ ಹೊರಹಾಕಿದ್ದಾರೆ. ಸಧ್ಯದಲ್ಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ರಾಜೀನಾಮೆ ಪ್ರತಿಯನ್ನು ಇನ್ನು ಅಧಿಕೃತವಾಗಿರಾಜ್ಯಪಾಲರಿಗೆ ಸಲ್ಲಿಸಿಲ್ಲ.
ಖಾತೆ ಹಂಚಿಕೆ ಅಸಮಾಧಾನ ಬೆನ್ನಲ್ಲೆ ಇನ್ನು ಇಬ್ಬರು ಸಚಿವರು ಸಧ್ಯದಲ್ಲೆ ರಾಜೀನಾಮೆ ನೀಡಿವ ಸಾಧ್ಯತೆಗಳಿವೆ ಎಂದು ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಸಚಿವ ಸ್ಥಾನ, ಖಾತೆ ಹಂಚಿಕೆ ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನು ಉಂಟುಮಾಡುವೆ ಸಾಧ್ಯತೆಗಳು ಕಂಡುಬರುತ್ತಿವೆ.