ಬೆಳಗಾವಿ: ಮುಖ್ಯ ಶಿಕ್ಷಕನ ಕಿರುಕುಳದಿಂದಾಗಿ ಬೇಸತ್ತು ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಅನ್ನಪೂರ್ಣ ರಾಜು ಬಸಾಪೂರೆ(55) ಎಂಬ ಶಿಕ್ಷಕಿಯು ತನ್ನ ಮೇಲಿನ ಕಿರುಕುಳದ ಬಗ್ಗೆ ಪತ್ರ ಬರೆದಿಟ್ಟು ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕಿ ಸೇರಿಕೊಂಡು ಕಿರುಕುಳ ಕೊಡುತ್ತಿದ್ದಾರೆ ಎಂದು ಬೇಸತ್ತು ಅದೇ ಶಾಲೆಯ ಶಿಕ್ಷಕಿಯಾಗಿರುವ ಅನ್ನಪೂರ್ಣ ರಾಯಬಾಗ ರೈಲು ನಿಲ್ದಾಣದ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಕಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ನಿವಾಸಿ ಆಗಿದ್ದು, ಖಾಸಗಿ ಅನುದಾನಿತ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನು ಓದಿ: ದೇಶದಲ್ಲಿ ಕೆಮ್ಮು, ಜ್ವರ ಹೆಚ್ಚಳಕ್ಕೆ ಹೆಚ್3ಎನ್2 ಕಾರಣ; ಅವೈಜ್ಞಾನಿಕ ರೋಗನಿರೋಧಕಗಳ ಬಳಕೆ ಬೇಡ-ಐಸಿಎಂಆರ್
ಪತ್ರದಲ್ಲಿ ʻʻನನ್ನ ಸಾವಿಗೆ ಹೆಡ್ ಮಾಸ್ಟರ್ ಜಮಾದರ್ ಸರ್, ಉಮಾ ಟೀಚರ್, ಮಯೂರಿ ಕುಡುಚಿ” ಕಾರಣಕರ್ತರೆಂದು ಬರೆದಿದ್ದಾರೆ. ಈ ಘಟನೆ ರಾಯಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಿರುಕುಳದ ಬಗ್ಗೆ ಆರೋಪಿಸಿ, ತಪ್ಪಿತಸ್ಥರ ಹೆಸರುಗಳನ್ನು ಉಲ್ಲೇಖಿಸಿ ಪತ್ರ ಬರೆದಿಟ್ಟು ಆತ್ಮಹತ್ಯೆ ಶರಣಾದ ಶಿಕ್ಷಕಿಯ ಶವವಿಟ್ಟು ಖಾಸಗಿ ಶಾಲೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಮುಖ್ಯ ಶಿಕ್ಷಕ ಹಾಗೂ ಅವರೊಂದಿಗೆ ಕಿರುಕುಳ ನೀಡಿದ ಇನ್ನಿಬ್ಬರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮತ್ತು ಮೃತ ಶಿಕ್ಷಕಿಯ ಕಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ