ಖಾಸಗಿ ಆಸ್ಪತ್ರೆಗಳು ಮೃತ ದೇಹದ ಹಸ್ತಾಂತರ ನಿರಾಕರಿಸುವಂತಿಲ್ಲ

ಬೆಂಗಳೂರು: ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಬಾಕಿ ವೆಚ್ಚಗಳು ಪಾವತಿಸಿದ ನಂತರವೇ ಸಂಬಂಧಪಟ್ಟವರಿಗೆ ನೀಡಲಾಗುವುದು ಎಂದು ವಿಧಿಸಲಾಗುತ್ತಿರುವ ಷರತ್ತುಗಳು ಬಗ್ಗೆ ದೂರುಗಳು ಎಲ್ಲೆಡೆ ಕೇಳಿ ಬರುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರವು ಸುತ್ತೋಲೆಯನ್ನು ಹೊರಡಿಸಿದ್ದು, ಖಾಸಗಿ ಆಸ್ಪತ್ರೆಗಳ ಈ ರೀತಿಯ ನಡವಳಿಕೆಯು ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ ಆಕ್ಟ್‌ (ಕೆಪಿಎಂಇ), 2007 ಭಾಗ 11 (ಐ) ಉಪ ಷರತ್ತು (vi) ರ ಅನ್ವಯ ಒತ್ತಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನು ಓದಿ: ಕೋವಿಡ್: ಬೆಂಗಳೂರಿನ ಚಿತಾಗಾರ ಹಾಗು ರುದ್ರಭೂಮಿ ಕಾರ್ಮಿಕರಲ್ಲಿ ತೀವ್ರಗೊಂಡ ದುಸ್ಥಿತಿ

ಖಾಸಗಿ ಆಸ್ಪತ್ರೆಗಳು ಮೃತದೇಹ ಹಸ್ತಾಂತರ ವಿಚಾರಗಳಲ್ಲಿ ಬಾಕಿ ಮೊತ್ತ ಪಾವತಿಗೆ ಒತ್ತಡ ಹೇರಿದ ವರದಿಗಳು ಕಂಡು ಬಂದಲ್ಲಿ ಕೆಪಿಎಂಇ ಕಾಯ್ದೆಯ ನಿಯಮಾನುಸಾರ ಸದರಿ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜಿಲ್ಲೆಗಳಲ್ಲಿ ಕೆಪಿಎಂಇ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ರೀತಿ ಗಂಭೀರವಾದ ಪ್ರಕರಣಗಳ ಮಾಹಿತಿ ಹಾಗೂ ಕೈಗೊಂಡ ಕ್ರಮಗಳ ಕುರಿತು ವಾರಕ್ಕೆ ಒಂದು ಬಾರಿ ರಾಜ್ಯ ಮಟ್ಟಕ್ಕೆ ವರದಿ ಸಲ್ಲಿಸುವಂತೆಯೂ ಸರಕಾರ ಆದೇಶಿಸಿದೆ.

Donate Janashakthi Media

Leave a Reply

Your email address will not be published. Required fields are marked *