ಕೇರಳದ ಇನ್ನೊಂದು ಪ್ರಥಮ : ನಗರೀಕರಣ ಕಮಿಶನ್

– ಟಿಕೆಂದರ ಸಿಂಗ್ ಪನ್ವರ್ ( ಶಿಮ್ಲಾ ದ ಮಾಜಿ ಉಪ ಮೇಯರ್)
2024 ಪ್ರಾರಂಭವಾಗುತ್ತಿರುವಂತೆ ನಗರಗಳ ಕ್ಷೇತ್ರದಲ್ಲಿ ಒಂದು ಒಳ್ಳೆಯ ಸುದ್ದಿ. ಸುಮಾರು 38 ವರ್ಷಗಳ ನಂತರ ನಗರ ಕಮಿಷನ್ನಿನ ಪ್ರಾರಂಭವಾಗಿದೆ – ಅದು ಕೇರಳ ರಾಜ್ಯದಲ್ಲಿ. ನಗರೀಕರಣದ ಮೊದಲ ಕಮಿಷನ್ ಅನ್ನು ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿ ಅವರು ದೇಶದ ಒಬ್ಬ ಅತ್ಯುತ್ತಮ ಶಿಲ್ಪಿ ಯೆಂದು ಪರಿಗಣಿಸಲ್ಪಟ್ಟ ಚಾರ್ಲ್ಸ್ ಕೊರಿಯ ಅವರ ಮುಂದಾಳ್ತನದಲ್ಲಿ ನೇಮಿಸಿದ್ದರು. ರಾಜೀವ್ ಗಾಂಧಿ ಅವರ ಹತ್ಯೆ ನಂತರ ಅದರ ಹಲವು ಶಿಫಾರಸ್ಸುಗಳನ್ನು ಪರಿಗಣಿಸಲಾಗಲಿಲ್ಲ. ಆದರೆ 74 ನೇ ಸಂವಿಧಾನ ತಿದ್ದುಪಡಿ ಒಂದು ಸಕಾರಾತ್ಮಕ ಬೆಳವಣಿಗೆಯಾಗಿತ್ತು. ಆನಂತರದಲ್ಲಿ ನಗರ ಬೆಳವಣಿಗೆಯ ನೀತಿಗಳಲ್ಲಿ ಆಮೂಲಾಗ್ರ ಬದಲಾವಣೆಗಳಾಗಿ ಖಾಸಗಿ ಮುಂದೊಡಗು ಮತ್ತು ಹೂಡಿಕೆಗಳಿಗೆ ಮನ್ನಣೆ ಬಂದಿತ್ತು. ಕೇರಳ

ನಗರ ಕಮಿಷನ್ನಿನ ಅವಶ್ಯಕತೆ

ಸದ್ಯ ಜಾಗತಿಕವಾಗಿ ನೋಡಿದರೆ ಶೇ 56 ರಷ್ಟು ಜನ ನಗರ ಪ್ರದೇಶಗಳಲ್ಲಿ ವಾಸಿಸುತಿದ್ದಾರೆ. ಕಾರ್ಲ್ ಮಾರ್ಕ್ಸ್ ಅವರು ಬಂಡವಾಳ ಕೃತಿ ಬರೆದ ಸಮಯದಲ್ಲಿ ನಗರಗಳು ಔದ್ಯಮಿಕ ಉತ್ಪಾದನೆಯ ಮತ್ತು ಬಂಡವಾಳ ಶೇಖರಣೆಯ ಕೇಂದ್ರಗಳಾಗಿದ್ದವು ಮತ್ತು ಶೇ 5 ಕ್ಕಿಂತ ಸ್ವಲ್ಪ ಹೆಚ್ಚು ಜನ ಮಾತ್ರ ನಗರಗಳಲ್ಲಿ ವಾಸಿಸುತ್ತಿದ್ದರು. ನಗರೀಕರಣ ಜಗತ್ತಿನಾದ್ಯಂತ ಅಪರಿಮಿತ ಬದಲಾವಣೆಗಳನ್ನು ತಂದಿದೆ. ಅದು ಹವಾಮಾನ ವೈಪರೀತ್ಯಗಳನ್ನು ಹೆಚ್ಚಿಸಿದೇ ಅಷ್ಟೇ ಅಲ್ಲ ಅದು ಭೂ ಬಳಕೆ, ಕಟ್ಟಡ ರೂಪಾಂತರಗಳು, ಅಸಮ ನಗರಗಳು, ದ್ವಂದ್ವ, ಅನೌಪಚಾರಿಕತೆ, ಮಾಲಿನ್ಯದ ಬಿಕ್ಕಟ್ಟು, ವಸತಿ, ನೀರು ಮತ್ತು ಸ್ವಚ್ಛತೆಯ ಸವಾಲುಗಳನ್ನು ಮಾತ್ರವಲ್ಲದೆ ಇತ್ಯಾದಿ ಪ್ರಮುಖ ಬದಲಾವಣೆಗಳನ್ನು ತಂದಿದ್ದಲ್ಲದೆ, ಕೆಲವು ತೀವ್ರ ನಗರ ಅಸಮತೆಗಳನ್ನು ಹುಟ್ಟು ಹಾಕಿದೆ. ಬಂಡವಾಳ ಶೇಖರಣೆಯ ಒಂದು ಮುಖ್ಯ ವಿಧಾನವೆಂದರೆ ನಗರ ಅಭಿವೃದ್ದಿ ಎಂಬಂತಾಗಿದೆ.

ಕೇರಳದ ಇನ್ನೊಂದು ಪ್ರಥಮ : ನಗರೀಕರಣ ಕಮಿಶನ್

ಸ್ವಾತಂತ್ರ್ಯೋತ್ತರ ಭಾರತ ಎರಡು ಸ್ಪಷ್ಟವಾದ ನಗರ ಅಭಿವೃದ್ದಿ ಅವಧಿಗಳನ್ನು ಕಂಡಿದೆ. ನೆಹರು ಅವಧಿ ಸುಮಾರು ಮೂರು ದಶಕಗಳ ಕಾಲ ನಡೆದು, 1980ರ ದಶಕದ ಕೊನೆಯ ಹೊತ್ತಿಗೆ ಬಿಚ್ಚಿಕೊಳ್ಳಲಾರಂಭವಾಯಿತು.  ಈ ಅವಧಿಯಲ್ಲಿ 150 ಹೊಸ ನಗರಗಳನ್ನು ಕಟ್ಟಲಾಯಿತು. ಇಲ್ಲಿ ಪರಿಪೂರ್ಣ ಧೋರಣೆ ಇದ್ದು ಕೇಂದ್ರೀಕೃತ ಯೋಜನಾ ಪದ್ದತಿ ಅಳವಡಿಸಿಕೊಂಡು ಸಮಗ್ರ ಬೆಳೆವಣಿಗೆಯ ಯೋಜನೆಗಳನ್ನು ರೂಪಿಸಲಾಯಿತು. ಇದೂ ದಯನೀಯವಾಗಿ ಸೋಲು ಕಂಡಿತು. ಯಾಕೆಂದರೆ ಈ ವಿಧಾನದ ಮುಖ್ಯ ಲಕ್ಷಣ, ಪ್ರಭುತ್ವವು ಇದನ್ನು ಬಂಡವಾಳ ಶೇಖರಣೆಯ ಸಾಧನವಾಗಿ ಬಳಸಿಕೊಳ್ಳುವ ಚಿಂತನೆಯ ಮೇಲೆ ಆಧಾರಿತವಾಗಿತ್ತು. ಅದು ಲಕ್ಷಾಂತರ ಜನರನ್ನು ಹಳ್ಳಿಗಳಿಂದ ನಗರದ ಪ್ರದೇಶಗಳಿಗೆ ತಳ್ಳಿತು. ಕೈಗಾರಿಕಾ ಉತ್ಪಾದನೆ ಇದರ ಮುಖ್ಯ ಚಾಲನ ಶಕ್ತಿಯಾಗಿತ್ತು. ಆದರೆ ಅದು ಈ ಪ್ರಕ್ರಿಯೆಯ ಮುಖ್ಯ ಚಾಲನಾ ಶಕ್ತಿಯಾಗಿ ಉಳಿಯಲಿಲ್ಲ ಯಾಕೆಂದರೆ ಈ ದಿಸೆಯಲ್ಲಿ ಅದು ವಿಫಲವಾಯಿತು. ಅದರಿಂದಾಗಿ ಹೊಸ ದಾರಿಗಳು ತೆರೆದುಕೊಂಡವು. ಹೀಗಿದ್ದರೂ ನಗರಗಳು ಲಕ್ಷಾಂತರ ಜನರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡವು. ಅನೌಪಚಾರಿಕ ವಲಯಗಳು ಕೇಂದ್ರಕ್ಕೆ ಬಂದು, ನಗರ ಯೋಜನೆಗಳು ದಯನೀಯವಾಗಿ ಸೋಲು ಕಂಡವು.

ತೊಂಬತ್ತರ ದಶಕದಲ್ಲಿ ಕಟುವಾದ ಖಾಸಗೀಕರಣವನ್ನು ಆರಂಭಿಸಲಾಯಿತು. ಜಾಗತಿಕ ನಗರಗಳನ್ನು ಮಾದರಿಯಾಗಿಟ್ಟುಕೊಂಡು ಅಭಿವೃದ್ದಿ ಪ್ರಕ್ರಿಯೆಗಳನ್ನು ಕಟ್ಟಲಾಯಿತು. ಸಮಗ್ರ ಯೋಜನೆಗಳನ್ನು ರೂಪಿಸುವ ಜವಾಬ್ದಾರಿಗಳನ್ನು ಪಾಶ್ಚಿಮಾತ್ಯ ಸರ್ಕಾರಿ ಪ್ರಾಯೋಜಿತ ದೈತ್ಯ ಸಂಸ್ಥೆಗಳಿಗೆ ಮತ್ತು ಸಮಾಲೋಚಕ ಸಂಸ್ಥೆಗಳಿಗೆ ಕೊಡಲಾಯಿತು. ಅವು ಸಾಮಾಜಿಕ ವಸತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಇತ್ಯಾದಿ ಪರಿಕಲ್ಪನೆಗಳಿಗೆ ತಿಲಾಂಜಲಿ ಬಿಟ್ಟು ರಿಯಲ್ ಎಸ್ಟೇಟ್ ಗೆ ಪ್ರಾಮುಖ್ಯತೆ ನೀಡಿದವು,  ನಗರಗಳನ್ನು ವಸತಿ, ಮನೋರಂಜನೆ ಮತ್ತು ಭವಿಷ್ಯದ ಕನಸುಗಳ ಕೇಂದ್ರಗಳಾಗಿಸುವ ಬದಲು, ಅವುಗಳನ್ನು ‘ಬೆಳವಣಿಗೆಯ ಇಂಜಿನ್’ ಗಳನ್ನಾಗಿಸಿ, ಸ್ಪರ್ಧಾತ್ಮಕಗೊಳಿಸಿದವು. ಸಮಗ್ರ  ನಗರದ ಧೋರಣೆಯ ಬದಲಾಗಿ, ಒಂದು ಯೋಜನೆಯನ್ನು ರೂಪಿಸುವುದೇ ಮಾರ್ಗದರ್ಶಕ ಸೂತ್ರವಾಯಿತು. ಜವಾಹರಲಾಲ್ ರಾಷ್ಟ್ರೀಯ ನಗರ ಪುನರುಜ್ಜೀವನ ಮಿಷನ್, ಸ್ಮಾರ್ಟ್ ಸಿಟಿ ಮಿಷನ್ ಇತ್ಯಾದಿ “ಮಿಷನ್ ವಿಧಾನ” (ಒಂದು ಗುರಿಗೆ ಸೀಮಿತ ಯೋಜನೆ) ಬಳಕೆಗೆ ಬಂತು. ಕೇರಳ

ಈ ಹಿನ್ನೆಲೆಯಲ್ಲಿ 1985 ರಲ್ಲಿ ಸ್ಥಾಪಿಸಲಾದ ‘ನಗರ ಕಮಿಷನ್’ ಅನ್ನು ಮತ್ತೆ ಅವಲೋಕಿಸಬೇಕು. ಚೂರು ಪಾರುಗಳ ವಿಧಾನ ಪ್ರಯೋಜನಕಾರಿಯಲ್ಲ. ಇವು ಯಾವುದೇ  ಜಿಗಿತ ಕೊಡುವುದಿಲ್ಲ. ಆದುದರಿಂದಲೇ ರಾಷ್ಟ್ರ ಮಟ್ಟದಲ್ಲಿ ಹಾಗೆಯೇ ರಾಜ್ಯ ಮಟ್ಟದಲ್ಲೂ ಸಹ ನಗರ ಕಮಿಷನ್ ನ ಅವಶ್ಯಕತೆ ಇದೇ ಎನ್ನುವುದು. ನಗರೀಕರಣದ ವಾಸ್ತವಿಕ ಮಾದರಿಗಳನ್ನು ಅರ್ಥ ಮಾಡಿಕೊಳ್ಳಲು ಇವು ಅವಶ್ಯ. ಜನರ ಗುಳೆ ಇದರಲ್ಲಿ ಪ್ರಮುಖವಾದ ವಿಷಯ. ವಸತಿ ಪಡ್ಡತಿಗಳು ಇನ್ನೊಂದು. ಮಾಹಿತಿ ತಂತ್ರಜ್ಞಾನ ಸಬಲೀಕರಣದ ಮತ್ತೂ ಅಬಲೀಕರಣದ ಸಾಧನವಾಗುತ್ತದೆ. ಇಡೀ ಪ್ರಕ್ರಿಯೆಯನ್ನು ಸಮಗ್ರವಾಗಿ  ಅರ್ಥ ಮಾಡಿಕೊಳ್ಳುವ ಅವಶ್ಯಕತೆಯಿದೆ. ನಗರೀಕರಣ ಪ್ರಕ್ರಿಯೆಯನ್ನು ಯಾವುದೋ ಮಿಷನ್ ವಿಧಾನಕ್ಕೆ ಇಳಿಸುವುದು ಸಾಧ‍್ಯವಿಲ್ಲ. ಈ ವರೆಗಿನ ಎಲ್ಲ ಮಿಷನ್ನುಗಳು – AMRUT (Atal Mission for Rejuvenation and Urban Transformation), HRIDAY (National Heritage City Development and Augmentation Yojana),  PMAY Pradhan Mantri Awas Yojana – ವಿಫಲವಾಗಿವೆ ಮತ್ತು ಇನ್ನು ಮುಂದೆಯೂ ವಿಫಲವಾಗುತ್ತವೆ; ಏಕೆಂದರೆ ಅವು ವಾಸ್ತವದಿಂದ ಬಹು ದೂರವಾಗಿವೆ. ಕೇರಳ

ಇದನ್ನು ಓದಿ : 2023 ಪತ್ರಕರ್ತರಿಗೆ ಅತ್ಯಂತ ಮಾರಕ ವರ್ಷ

ಹಾಗೆಯೇ ನಗರಗಳಲ್ಲಿ ಆಡಳಿತ ಗಬ್ಬೆದ್ದು ಹೋಗಿದೆ. ನಗರಗಳಿಗೆ ವರ್ಗಾಯಿಸಬೇಕಾಗಿದ್ದ 12 ನೇ ಅನುಚ್ಛೇದದ 18 ವಿಷಯಗಳನ್ನು ಇನ್ನೂ ಮಾಡಿಲ್ಲ. ಚುನಾಯಿತ ಪ್ರತಿನಿಧಿಗಳ ಬದಲು ನಗರ ಆಡಳಿತದಲ್ಲಿ ನಿರ್ವಹಣಾ ಅಧಿಕಾರಿಗಳಿರಬೇಕು ಎಂಬ ಚರ್ಚೆ ರಾಜಕೀಯ ವಲಯಗಳಲ್ಲಿದೆ. ಹಣಕಾಸಿನ ವಿನ್ಯಾಸದಲ್ಲಿ ಅತೀ ಕೇಂದ್ರೀಕರಣ ಇದೇ ಎಂಬುದು ಹದಿನೈದನೇ ಹಣಕಾಸು ಕಮಿಷನ್ನಿನ ಶಿಫಾರಸುಗಳಿಂದ ಸ್ಪಷ್ಟವಾಗಿದೆ. ಅ ಶಿಫಾರಸ್ಸಿನ ಪ್ರಕಾರ ನಗರಗಳಿಗೆ ಕೊಡುವ ಅನುದಾನ ಆಸ್ತಿ ತೆರಿಗೆ ಸಂಗ್ರಹಣಾ ಸಾಮರ್ಥ್ಯಕ್ಕೆ ಅನುಗುಣವಾಗಿರಬೇಕು’ ಅದು ರಾಜ್ಯದ ಜಿ ಎಸ್ ಟಿ ಹೆಚ್ಚಳಕ್ಕೆ ಅನುಗುಣವಾಗಿ ಇರಬೇಕು ಎಂಬುದು. ನಗರಗಳ ಸಂದರ್ಭದಲ್ಲಿ ಉಗಮಿಸುತ್ತಿರುವ ಬಹಳ ಸಂಕೀರ್ಣ ಮತ್ತು ಜಟಿಲ ಪ್ರಕ್ರಿಯೆಗಳಿವು.  ಕೇರಳ

ಈ ಹಿನ್ನೆಲೆಯಲ್ಲಿ ಕೇರಳ ಸರಕಾರದ  ನಗರ ಕಮಿಷನ್ನಿನ ರಚನೆಯನ್ನು ಗಮನಿಸಬೇಕು.  ಕೇರಳ ಇಂತಹ ಸಂಕೀರ್ಣ ಸಂದರ್ಭವನ್ನು ನಿರ್ವಹಿಸಲು ಈ ನಗರ ಕಮಿಶನ್ ನೀತಿಯನ್ನು ಜಾರಿಗೆ ತಂದಿದೆ ಎಂಬುದು ಗಮನಾರ್ಹ. ಇದರಲ್ಲಿ ಸದಸ್ಯರುಗಳಾಗಿ ಡಬ್ಲಿನ್ ನಲ್ಲಿ ನಗರ ಪ್ರಾಧ್ಯಾಪಕರಾಗಿರುವ ಎಮ್. ಸತೀಶಕುಮಾರ, ಇತಿಹಾಸಕಾರ್ತಿ ಜಾನಕಿ ನಾಯರ್, ನವ ದೆಹಲಿಯ ಯೋಜನೆ ಮತ್ತು ಶಿಲ್ಪಕಲೆಯ ಸಂಸ್ಥೆಯ ನಗರ ವಿನ್ಯಾಸ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆದ ಕೆ ಟಿ ರವೀಂದ್ರನ್ ಇದ್ದಾರೆ. ಕೇರಳ

ನೀತಿ ಆಯೋಗದ ಪ್ರಕಾರ ಕೇರಳದಲ್ಲಿ ಈಗ ಇರುವ ಶೇ 90 ರಷ್ಟು ನಗರವಾಸಿ ಜನರ ನಗರೀಕರಣದ ಸವಾಲುಗಳನ್ನು ನಿರ್ವಹಿಸುವುದು, ಕಮಿಷನ್ನಿನ ಮುಂದಿನ 12 ತಿಂಗಳುಗಳ ಕಾರ್ಯಭಾರ,  ಮುಂದಿನ 25 ವರ್ಷಗಳ ಕಾಲ ಕೇರಳದಲ್ಲಿನ ನಗರೀಕರಣದ ನಕ್ಷೆ ಯನ್ನು ತಯಾರಿಸಿ ಅಭಿವೃದ್ದಿಗೆ ಪಥ ರೂಪಿಸುವುದು ಸಹ ಕಮಿಶನ್ ನ ಪಾತ್ರದ ಭಾಗ. ಜಾಗತಿಕ ಮತ್ತು ರಾಷ್ಟ್ರೀಯ ಸ್ತರಗಳಲ್ಲಿ ನಗರೀಕರಣದ ಪ್ರಕ್ರಿಯೆಯನ್ನು ಬೇರ್ಪಡಿಸಿ ಕೇರಳದ  ನಗರ ಅಭಿವೃದ್ದಿಯನ್ನು ನೋಡುವುದು ಸಾಧ್ಯವಿಲ್ಲ, ಆ ಕಾರಣ ಅವುಗಳ ಬಗೆಗೂ ಸರಿಯಾದ ಅಂದಾಜುಗಳನ್ನು ಮಾಡಬೇಕಿದೆ. ಕೇರಳ 

ಬೇರೆ ರಾಜ್ಯಗಳಿಗೆ ದಾರಿದೀಪ

ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಕಮಿಷನ್ನಿನ ಅವಶ್ಯಕತೆ ಇತ್ತು. ಹೇಗೆ ಇರಲಿ, ಅಂತಹ ರಾಷ್ಟ್ರೀಯ ಕಮಿಷನ್ ಇಲ್ಲದೆ ಇರುವಾಗಲೂ  ಕೇರಳದ ಈ “ನಗರ ಕಮಿಷನ್” ಅತಿ ಹೆಚ್ಚು ನಗರೀಕೃತ ಜನರಿರುವ ಗುಜರಾತ್, ಮಹಾರಾಷ್ಟ್ರ, ತಮಿಳು ನಾಡು, ಮತ್ತು ಪಂಜಾಬ್ ಗಳಿಗೆ ದಾರಿದೀಪವಾಗಲಿದೆ. ಈ ರಾಜ್ಯಗಳಿಗೆ ಈ ಕಮಿಷನ್ನಿನ ಪಾಠಗಳು ಉಪಯುಕ್ತವಾಗಲಿವೆ. ಕೇರಳ

ಇದನ್ನು ನೋಡಿ : “ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ : ರಾಜಕೀಯ ಲಾಭದ ಹೋರಾಟ ನಿಲ್ಲಿಸಿ, ಆತನಿಗೆ ಮೊದಲು ಜಾಮೀನು ಕೊಡಿಸಿ”

 

Donate Janashakthi Media

Leave a Reply

Your email address will not be published. Required fields are marked *