ಬೆಂಗಳೂರು | ಕಡು ಬಡತನ ಮುಕ್ತ ಕೇರಳ ರಾಜ್ಯ – ಎಲ್ ಡಿ ಎಫ್ ಸರ್ಕಾರಕ್ಕೆ ಕೆಪಿಆರ್‌ಎಸ್ ಅಭಿನಂದನೆ

ಬೆಂಗಳೂರು : ಸ್ವಾತಂತ್ರ್ಯ ಬಂದ 77 ವರ್ಷಗಳಲ್ಲಿ ಭಾರತ ದೇಶದ ಯಾವುದೇ ರಾಜ್ಯ ಹಾಗೂ ಇಡೀ ದೇಶ ಸಾಧಿಸಲು ಸಾಧ್ಯವೇ ಆಗದ ಕಡು ಬಡತನ ಮುಕ್ತ ಹೆಗ್ಗಳಿಕೆಯ ಮಹತ್ತರ ಸಾಧನೆ ಮಾಡಿರುವ ಕೇರಳ ರಾಜ್ಯದ ಸಿಪಿಐಎಂ ನೇತೃತ್ವದ ಎಲ್ ಡಿ ಎಪ್ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ಸಮಿತಿ ರಾಜ್ಯದ ಕಡು ಬಡತನದಲ್ಲಿ ನರಳುತ್ತಿರುವ ಅಸಂಖ್ಯಾತ ಬಡರೈತರು ಹಾಗೂ ಗ್ರಾಮೀಣ ಶ್ರಮಿಕರ ಪರವಾಗಿ ಹಾರ್ಧಿಕವಾಗಿ ಅಭಿನಂದಿಸುತ್ತದೆ. ಬೆಂಗಳೂರು

ಇದನ್ನೂ ಓದಿ : ರಸ್ತೆ ಬದಿಯಲ್ಲಿ ಕಸ: 218 ಮನೆಗಳ ಮುಂದೆ ಕಸ ಸುರಿದು; 2.80 ಲಕ್ಷ ರೂ. ದಂಡ ವಸೂಲಿ ಮಾಡಿದ ಗಿಬಿಎ

ಸ್ವಾತಂತ್ರ್ಯ ಬಂದ ಮೊದಲ ಕೇರಳ ರಾಜ್ಯ ಶಾಸನ ಸಭೆಗೆ ಚುನಾಯಿತವಾದ ಇಎಂಎಸ್ ನೇತೃತ್ವದ ಎಲ್ ಡಿ ಎಫ್ ಸರ್ಕಾರದ ಭೂ ಹಂಚಿಕೆ, ಶಿಕ್ಷಣ, ಆರೋಗ್ಯ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ಸಾರ್ವಜನಿಕ ವಲಯದ ಪಾತ್ರವನ್ನು ಬಲಪಪಡಿಸಿದ ಅಡಿಗಲ್ಲು, ಎಲ್ ಡಿ ಎಫ್ ಸರ್ಕಾರ ಅಧಿಕಾರ ಕಳೆದುಕೊಂಡ ನಂತರ ಸಡಿಲಗೊಂಡು ದುರ್ಬಲಗೊಳ್ಳುತ್ತಿದ್ದಾಗ್ಯೂ, ಸತತ ಎರಡನೇ ಅವಧಿಗೆ ಅಧಿಕಾರ ನಡೆಸಲು ಅವಕಾಶ ಸಿಕ್ಕ ಫಲವಾಗಿ ಪಿನರಾಯಿ ವಿಜಯನ್ ನೇತೃತ್ವದ ಸರ್ಕಾರ ಕಡು ಬಡತನ ಮುಕ್ತ ಕೇರಳ ರಾಜ್ಯ ನಿರ್ಮಾಣದ ತನ್ನ ಗುರಿಯನ್ನು ಸಾಧಿಸಿದೆ. ಭಾರತ ದೇಶವೂ ಸೇರಿದಂತೆ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಇಡೀ ಪ್ರಪಂಚ ಹೆಚ್ಚು ಹೆಚ್ಚು ಕಡು ಬಡತನಕ್ಕೆ ಸಿಲುಕಿ ನರಳುತ್ತಿರುವುದು ತೀವ್ರವಾಗಿ ಹೆಚ್ಚಳ ಆಗುತ್ತಿರುವ ಸಾರ್ವತ್ರಿಕ ವಿದ್ಯಮಾನದಲ್ಲಿ ನವ ಉದಾರೀಕರಣ ಬಂಡವಾಳಶಾಹಿ ಅಭಿವೃದ್ಧಿ ಚೌಕಟ್ಟಿನ ಒಳಗೆ ಅತ್ಯಂತ ಸೀಮಿತ ಅವಕಾಶದಲ್ಲಿ ಇಂತಹ ಸಾಧನೆ ಜನ ಕಲ್ಯಾಣದ ಸಂವಿಧಾನ ಆಶಯದ ಒಂದು ವಿಶಿಷ್ಟ ಮಾದರಿಯನ್ನು ಇಡೀ ದೇಶಕ್ಕೆ ಪರಿಚಯಿಸಿದಂತೆ ಆಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ವಿಶ್ಲೇಷಿಸುತ್ತದೆ.

1998 ರಿಂದ ಸತತವಾಗಿ ಸುಮಾರು 30 ವರ್ಷಗಳ ಕಾಲ ನಿರಂತರ ಅಧಿಕಾರದಲ್ಲಿ ಇರುವ ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರದ ಕಡು ಬಡತನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡರೆ ಕೇರಳ ರಾಜ್ಯದ ಎಲ್ ಡಿ ಎಫ್ ಸರ್ಕಾರದ ಸಾಧನೆ ಎಷ್ಟು ಅಮೂಲ್ಯ ಹಾಗೂ ಅಪರೂಪದ ಮಹತ್ ಸಾಧನೆ ಎಂಬುದು ಗಮನಾರ್ಹ .

ಅತ್ಯಂತ ಸೀಮಿತ ಸ್ವಂತ ತೆರಿಗೆ ಹಾಗೂ ನರೇಂದ್ರ ಮೋದಿ ಸರ್ಕಾರವು, ತೆರಿಗೆ ಹಂಚಿಕೆ ಹಾಗೂ ಶಾಸನಬದ್ಧ ಅನುದಾನ ಹಂಚಿಕೆಯಲ್ಲಿ ಗರಿಷ್ಠ ಪ್ರಮಾಣದ ತಾರತಮ್ಯ, ಅನ್ಯಾಯ ಹಾಗೂ ಅಸಹಕಾರದ ನಡುವೆಯೂ ಎಲ್ ಡಿ ಎಫ್ ಸರ್ಕಾರ ಇಂತಹ ಮಹತ್ವದ ಯಶಸ್ಸನ್ನು ಸಾಧಿಸಿರುವುದು, ಹೋಲಿಕೆಯಲ್ಲಿ ಹೆಚ್ಚು ತೆರಿಗೆ ಸಂಗ್ರಹ ಇರುವ , ಉತ್ತಮ ಅರ್ಥಿಕ ಬೆಳವಣಿಗೆ ದರ ಇರುವ ಕರ್ನಾಟಕ ದಂತಹ ರಾಜ್ಯಗಳಿಗೆ ಅಧ್ಯಯನ ಯೋಗ್ಯ ಹಾಗೂ ಅನುಕರಣೀಯವಾಗಿದೆ.

ಕೇರಳ ಸರ್ಕಾರದ ಈ ಜನ ಕಲ್ಯಾಣದ ಪರ್ವ ಮುಂದುವರೆಯಲು ಎಲ್ಲಾ ಕುಟುಂಬಗಳಿಗೂ ವಸತಿ ಇರುವ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಲು ಬಾಕಿ ಇರುವ ಕೆಲವೇ ಹೆಜ್ಜೆಗಳನ್ನು ದೃಢವಾಗಿ ಇಡಲು ಮತ್ತೊಂದು ಅವಧಿಗೆ ಎಲ್ ಡಿ ಎಫ್ ಸರ್ಕಾರ ಮುನ್ನಡೆಸಲು ಕೇರಳದ ಜನತೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ವಿನಂತಿಸುತ್ತದೆ.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಎಸ್ಐಟಿ ಪೊಲೀಸರು ದೌರ್ಜನ್ಯ ಮಾಡುವಂತಿಲ್ಲ- ಹೈಕೋರ್ಟ್ ಆದೇಶ Janashakthi Media

Donate Janashakthi Media

Leave a Reply

Your email address will not be published. Required fields are marked *