ಒಕ್ಕೂಟ ತತ್ವದ ಮೇಲೆ ದಾಳಿಯ ವಿರುದ್ಧ ಕೇರಳದ ಜನತೆಯ ಸತ್ಯಾಗ್ರಹ: ಸಿಪಿಐ(ಎಂ) ಪೊಲಿಟ್‍ಬ್ಯುರೊ ಬೆಂಬಲ

ನವದೆಹಲಿ: ಸಿಪಿಐ(ಎಂ) ಪೊಲಿಟ್ ಬ್ಯೂರೋ, ಕೇರಳದ ಎಲ್‌ಡಿಎಫ್ ಸರ್ಕಾರ ತನ್ನ ಹಕ್ಕುಗಳ ರಕ್ಷಣೆಯಲ್ಲಿ  ಹಾಗೂ ಒಕ್ಕೂಟ ತತ್ವದ ಮೇಲೆ ಕೇಂದ್ರ ಸರ್ಕಾರದ ದಾಳಿಯ ವಿರುದ್ಧ ಹೋರಾಟದಲ್ಲಿ  ಮತ್ತು ರಾಜ್ಯದ ಹಕ್ಕುಗಳ ನಿರಾಕರಣೆಯ ವಿರುದ್ಧದ ಹೋರಾಟದಲ್ಲಿ ಸೌಹಾರ್ದವನ್ನು ವ್ಯಕ್ತಪಡಿಸುತ್ತ , ಕೇರಳದ ಸತ್ಯಾಗ್ರಹಕ್ಕೆ ತನ್ನ ಸಂಪೂರ್ಣ ಹಾರ್ದಿಕ ಪೂರ್ಣ ಹೃದಯದ ಬೆಂಬಲವನ್ನು ನೀಡಿದೆ. ಈ ಹೋರಾಟವು ಕೇಂದ್ರ ಸರ್ಕಾರವು ರಾಜ್ಯದತ್ತ ತೋರಿಸುತ್ತಿರುವ ಆರ್ಥಿಕ ನಿರ್ಲಕ್ಷ್ಯದ ವಿರುದ್ಧವೂ ಆಗಿದೆ ಎಂದು ಅದು ಹೇಳಿದೆ.

ಕಳೆದ ಐದು ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಕೇರಳದ ವಿರುದ್ಧ ನಡೆಸಿದ ಹಣಕಾಸು ತಾರತಮ್ಯದ ಪರಿಣಾಮವಾಗಿ, ಕೇರಳವು ರೂ. 57,000 ಕೋಟಿಗಳಷ್ಟು ಭಾರೀ ಆದಾಯ ನಷ್ಟವನ್ನು ಅನುಭವಿಸಿದೆ. ತೆರಿಗೆ ಹಂಚಿಕೆ, ಅನುದಾನಗಳು ಮತ್ತು ಯೋಜನಾ ನಿಧಿಗಳಲ್ಲಿ ಕೇರಳದ ಪಾಲನ್ನು ಕಡಿತಗೊಳಿಸಲಾಗಿದೆ. ಸಂವಿಧಾನಾತ್ಮಕ ವಿಧಿಗಳನ್ನು ತಪ್ಪಾಗಿ ವ್ಯಾಖ್ಯಾನಿಸುವ ಮೂಲಕ ಅದರ ಸಾಲ ಪಡೆಯುವ ಮಿತಿಗಳ ಮೇಲೂ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇದನ್ನೂ ಓದಿ: ಪಾಂಡವಪುರ | ವಿಬಿ–ಜಿ ರಾಮ್‌ ಜಿ ಯೋಜನೆ ರದ್ದುಪಡಿಸಿ ಮನರೇಗಾ ಬಲಪಡಿಸುವಂತೆ ಒತ್ತಾಯಿಸಿ ಚಳವಳಿ- ಎಂ.ಪುಟ್ಟಮಾದು

10ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ತೆರಿಗೆಗಳಲ್ಲಿ ಕೇರಳದ ಪಾಲು 3.875 ಶೇಕಡಾ ಇದ್ದದ್ದು, ಪ್ರಸ್ತುತ 15ನೇ ಹಣಕಾಸು ಆಯೋಗದಲ್ಲಿ ಕೇವಲ 1.925 ಶೇಕಡಕ್ಕೆ ಇಳಿಸಲಾಗಿದೆ. 2024–25ನೇ ವರ್ಷವೊಂದರಲ್ಲೇ ಇದರಿಂದ ರಾಜ್ಯಕ್ಕೆ ರೂ. 27,000 ಕೋಟಿಗಳಷ್ಟು ನಷ್ಟ ಉಂಟಾಗಿದೆ. ರಾಜ್ಯಕ್ಕೆ ಬರಬೇಕಾಗಿರುವ ಹಲವಾರು ಪಾವತಿಗಳನ್ನು ಕೇಂದ್ರ ಸರ್ಕಾರ ಬಾಕಿ ಇಟ್ಟುಕೊಂಡಿದೆ. ಇವೆಲ್ಲವೂ ರಾಜ್ಯದ ಹಣಕಾಸಿನ ಮೇಲೆ ಗಂಭೀರ ನಿರ್ಬಂಧಗಳನ್ನು ಉಂಟುಮಾಡುತ್ತಿವೆ.

ಅಭಿವೃದ್ಧಿ ಮತ್ತು ಕಲ್ಯಾಣ ಎರಡೂ ಕ್ಷೇತ್ರಗಳಲ್ಲಿ ಕೇರಳವು ಇಡೀ ದೇಶಕ್ಕೆ ಮಾದರಿಯಾಗಿದೆ. ರಾಜ್ಯವು ಕೇಂದ್ರ ಸರ್ಕಾರದಿಂದ ಯಾವುದೇ ಉದಾರತೆ ಬೇಡುತ್ತಿಲ್ಲ, ತನಗೆ  ನ್ಯಾಯಸಮ್ಮತವಾಗಿ ಸಲ್ಲದೆ ಬಾಕಿಯಿರುವುದನ್ನೇ ಮಾತ್ರ ಕೇಳುತ್ತಿದೆ. ಕೇರಳದ ನ್ಯಾಯಸಮ್ಮತ ಕಾಳಜಿಗಳಿಗೆ  ಕೇಂದ್ರ ಸರ್ಕಾರ ಸ್ಪಂದಿಸಬೇಕು ಮತ್ತು ರಾಜ್ಯದ ವಿರುದ್ಧ ತನ್ನ ಆರ್ಥಿಕ ಹಗೆ ಸಾಧನೆಯನ್ನು ತಕ್ಷಣವೇ ಅಂತ್ಯಗೊಳಿಸಬೇಕು ಎಂದು ಪೊಲಿಟ್ ಬ್ಯೂರೋ ಆಗ್ರಹಿಸಿದೆ.

ತಮ್ಮ ಮುಖ್ಯಮಂತ್ರಿಗಳು, ಸಚಿವರು, ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ, ದೊಡ್ಡ ಸಂಖ್ಯೆಯಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿರುವ ಕೇರಳದ ಜನತೆಗೆ ಪೊಲಿಟ್ ಬ್ಯೂರೋ ಅಭಿನಂದನೆ ಸಲ್ಲಿಸಿದೆ.

ಇದನ್ನೂ ನೋಡಿ: ರಸ್ತೆ ನಿಯಮ ಪಾಲಿಸಿ : ಅಪಘಾತಗಳನ್ನು ತಪ್ಪಿಸಿ Janashakthi Media

Donate Janashakthi Media

Leave a Reply

Your email address will not be published. Required fields are marked *