ಸಾರ್ವಜನಿಕ ಸ್ಥಳಗಳಲ್ಲಿ ಕಸದ ತೊಟ್ಟಿ ಅಳವಡಿಸಲು ಕೇರಳ ಸರ್ಕಾರ ನಿರ್ಧಾರ!

ತಿರುವನಂತಪುರಂ: ಸಾರ್ವಜನಿಕ ಕಸವನ್ನು ತಡೆಗಟ್ಟಲು ಹಾಗೂ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ಮತ್ತು ವೈಜ್ಞಾನಿಕವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಕೇರಳ ಸರ್ಕಾರ ಮತ್ತೆ ಹಳೆಯ ಮಾದರಿಯನ್ನು ಅಳವಡಿಸುವತ್ತ ಹೆಜ್ಜೆ ಹಾಕಿದೆ. ರಾಜ್ಯದ ಸ್ಥಳೀಯ ಆಡಳಿತ ಸಚಿವಾಲಯ (ಎಲ್‌ಎಸ್‌ಜಿಡಿ)ಯು ಸಾರ್ವಜನಿಕರಲ್ಲಿ ನಡವಳಿಕೆಯ ಬದಲಾವಣೆಗಳನ್ನು ತರಲು ಮತ್ತು ‘ಮಾಲಿನ್ಯ ಮುಕ್ತಂ ನವ ಕೇರಳಂ ಅಭಿಯಾನ’ದ ಭಾಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ರಾಜ್ಯದಾದ್ಯಂತ ಸ್ಥಾಪಿಸಲು ಮುಂದಾಗಿದೆ.

ಸಾರ್ವಜನಿಕ ಸ್ಥಳಗಳು, ಪ್ರವಾಸಿ ತಾಣಗಳು, ಮಾರುಕಟ್ಟೆ ಸ್ಥಳಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕಸದ ತೊಟ್ಟಿಗಳು ಸ್ಥಾಪಿಸಲು ರಾಜ್ಯಾದ್ಯಂತ ಸಾವಿರಾರು ಸ್ಥಳಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.  ‘ಮಾಲಿನ್ಯ ಮುಕ್ತಂ ನವ ಕೇರಳಂ ಅಭಿಯಾನ’ದ ಭಾಗವಾಗಿ, ಎಲ್‌ಎಸ್‌ಜಿಡಿ ಸರ್ಕಾರಿ ಸಂಸ್ಥೆಗಳಲ್ಲಿ 20,530 ಡಸ್ಟ್‌ಬಿನ್‌ಗಳನ್ನು, ಮಾರುಕಟ್ಟೆಗಳು ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 4,231 ಕಸದ ತೊಟ್ಟಿಗಳನ್ನು ಮತ್ತು ಪ್ರವಾಸಿ ತಾಣಗಳಲ್ಲಿ 416 ಡಸ್ಟ್‌ಬಿನ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ.

ಇದನ್ನೂ ಓದಿ: ಬಿಲ್ಕಿಸ್ ಬಾನೊ ಪ್ರಕರಣ | ಸುಪ್ರೀಂನಲ್ಲಿ ಶರಣಾಗತಿಗೆ ಸಮಯ ಕೋರಿದ 3 ಅಪರಾಧಿಗಳು

ಇದಲ್ಲದೆ, ಸಾರ್ವಜನಿಕ ರಸ್ತೆಗಳಲ್ಲಿ ಪ್ರತಿ 500 ಮೀಟರ್‌ಗೆ 26,757 ಡಸ್ಟ್‌ಬಿನ್‌ಗಳನ್ನು ಅಳವಡಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ.”ಈ ರೀತಿಯ ಡಸ್ಟ್‌ಬಿನ್‌ಗಳು ಸಾರ್ವಜನಿಕರ ನಡೆಯಲ್ಲಿ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ. ಜೊತೆಗೆ ತ್ಯಾಜ್ಯ ನಿರ್ವಹಣೆಯಲ್ಲಿ ಅವರನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಸಹಾಯ ಮಾಡುತ್ತದೆ” ಎಂದು ಸ್ಥಳೀಯ ಆಡಳಿತ ಇಲಾಖೆ ಸಚಿವ ಎಂ.ಬಿ. ರಾಜೇಶ್ ಹೇಳಿದ್ದಾರೆ.

“ಅಭಿಯಾನದ ಆರಂಭಿಕ ಹಂತದಲ್ಲಿ ನಾವು ಡಸ್ಟ್‌ಬಿನ್‌ಗಳನ್ನು ಪರಿಚಯಿಸಲಿಲ್ಲ. ಯಾಕೆಂದರೆ ಅದಕ್ಕೆ ಪರಿಸ್ಥಿತಿ ಸೂಕ್ತವಾಗಿರಲಿಲ್ಲ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ನಮಗೆ ಖಚಿತವಿರಲಿಲ್ಲ. ಈಗ ನಾವು ಬಹಳ ದೂರ ಬಂದಿದ್ದೇವೆ ಮತ್ತು ರಾಜ್ಯದಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಣೆಯನ್ನು ಬಲಪಡಿಸಲಾಗಿದೆ. ಇದರಿಂದ ಸಾರ್ವಜನಿಕರು ಮನೆಯ ತ್ಯಾಜ್ಯವನ್ನು ಎಸೆಯುವುದನ್ನು ಕಡಿಮೆ ಮಾಡಿದ್ದಾರೆ” ಎಂದು ಸಚಿವರು ಹೇಳಿದ್ದಾರೆ.

“ಬೃಹತ್ ತ್ಯಾಜ್ಯ ಉತ್ಪಾದಕರೇ ಸ್ಥಳೀಯ ಸಂಸ್ಥೆಗಳ ಮುಂದಿನ ದೊಡ್ಡ ಸವಾಲು. ಅಂಗಡಿಗಳು ಮತ್ತು ಸಂಸ್ಥೆಗಳು ತಮ್ಮ ಆವರಣದಲ್ಲಿ ಡಸ್ಟ್‌ಬಿನ್‌ಗಳನ್ನು ಅಳವಡಿಸುವುದನ್ನು ಮತ್ತು ತ್ಯಾಜ್ಯವನ್ನು ಸ್ವಚ್ಛತಾ ಕಾರ್ಮಿಕರಿಗೆ ಪ್ರತಿದಿನ ನೀಡುವುದನ್ನು ನಾವು ಕಡ್ಡಾಯಗೊಳಿಸಿದ್ದೇವೆ. ಸಾರ್ವಜನಿಕ ಸ್ಥಳಗಳು, ರಸ್ತೆಗಳು ಮತ್ತು ಅಗತ್ಯವಿರುವೆಡೆ ಡಸ್ಟ್‌ಬಿನ್‌ಗಳನ್ನು ಅಳವಡಿಸಲಾಗುವುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಅಕ್ರಮವಾಗಿ ಕಸ ಸುರಿಯುವವರನ್ನು ತಡೆಗಟ್ಟಲು ಡಸ್ಟ್‌ಬಿನ್‌ಗಳನ್ನು ಅಳವಡಿಸುವ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲು ಎಲ್‌ಎಸ್‌ಜಿಡಿ ನಿರ್ಧರಿಸಿದೆ. ಈ ಪ್ರದೇಶಗಳಲ್ಲಿ ಸಿಸಿಟಿವಿಗಳನ್ನು ಸಹ ಅಳವಡಿಸಲಾಗುತ್ತಿದ್ದು, ಅಕ್ರಮವಾಗಿ ಕಸ ಸುರಿಯುವುದನ್ನು ತಡೆಯಲು ಕಸದ ತೊಟ್ಟಿಗಳನ್ನು ಅಳವಡಿಸಲಾಗುವುದು. ಪ್ರವಾಸಿ ತಾಣಗಳು ಮತ್ತು ಸಾರ್ವಜನಿಕ ಸ್ಥಳಗಳು ಎರಡು ಪ್ರಮುಖ ಕ್ಷೇತ್ರಗಳಾಗಿದ್ದು, ಈ ಬಗ್ಗೆ ಪ್ರಮುಖ ಗಮನವನ್ನು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

“ಸಾರ್ವಜನಿಕರ ಮತ್ತು ಪ್ರವಾಸಿಗರಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ಸಾರ್ವಜನಿಕವಾಗಿ ಕಸ ಎಸೆಯುವುದನ್ನು ತಪ್ಪಿಸಲು ನಾವು ಅವರಿಗೆ ಪರಿಹಾರಗಳನ್ನು ನೀಡಬೇಕಾಗಿದೆ. ಡಸ್ಟ್‌ಬಿನ್‌ಗಳು ಮತ್ತು ಬಾಟಲ್ ಬೂತ್‌ಗಳನ್ನು ಅಳವಡಿಸಿದ ನಂತರ ತ್ಯಾಜ್ಯವನ್ನು ಕಸದ ತೊಟ್ಟಿಗಳಲ್ಲಿ ಇಡಲು ಸಾಧ್ಯವಾಗುತ್ತದೆ” ಎಂದು ಸಚಿವ ರಾಜೇಶ್ ಹೇಳಿದ್ದಾರೆ.

ವಿಡಿಯೊ ನೋಡಿ: ಕೆಮಿಕಲ್​ ಮಿಶ್ರಿತ ನೀರು ಹೊರಹಾಕುತ್ತಿರುವ ಯತ್ನಾಳ ಸಕ್ಕರೆ ಕಾರ್ಖಾನೆ : ಜನರ ಹೊಟ್ಟೆ ಸೇರುತ್ತಿದೆ ವಿಷಕಾರಿ ನೀರು

Donate Janashakthi Media

Leave a Reply

Your email address will not be published. Required fields are marked *