ಕೇರಳ : ಮನೆ, ಜಮೀನು ಇಲ್ಲದ 174 ಕುಟುಂಬಗಳಿಗೆ ಸ್ವಂತ ಗೂಡು

ಕೇರಳ : ವಾಸ ಮಾಡಲಿಕ್ಕೆ ಸ್ವಂತ ಮನೆ, ಬದುಕಿಗೆ ಆಧಾರವಾಗಿ ಜಮೀನು ಇಲ್ಲದ 174 ಕುಟುಂಬಗಳಿಗೆ ಕೇರಳ ಸರ್ಕಾರ ಪ್ರತಿ ವಸತಿ ಸಮುಚ್ಚಯ ನಿರ್ಮಿಸಲು 6.7 ಕೋಟಿಯಿಂದ 7.85 ಕೋಟಿ ವೆಚ್ಚ  ಮಾಡಿ ಕುಟುಂಬಗಳಿಗೆ ಸ್ವಂತ ಮನೆಯ ಕನಸನ್ನು ನನಸು ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಾಳೆ ಉದ್ಘಾಟನೆ ನೆರವೇರಿಸಲಿದ್ದಾರೆ.

ವಾಸದ ಮನೆಯ ವ್ಯವಸ್ಥೆ ಇಂತಿದೆ :  ಎಲ್ಲಾ ಮನೆಗಳು ಎರಡು ಮಲಗುವ ಕೋಣೆ, ಒಂದು ಹಾಲ್ ಮತ್ತು ಕಿಚನ್ , ಶೌಚಾಲಯ, ಸ್ನಾನ ಗೃಹ. ಅಪಾರ್ಟ್‌ಮೆಂಟ್‌ಗಳಿಗೆ ಸಾಮಾನ್ಯ ಕಾರಿಡಾರ್, ಕೊಳವೆ ಬಾವಿ, ಕುಡಿಯುವ ನೀರು ಸಂಗ್ರಹಣೆ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಜನರೇಟರ್ ಮತ್ತು ಸೋಲಾರ್ ಲೈಟ್ ವ್ಯವಸ್ಥೆಯನ್ನು ಒದಗಿಸಲಾಗಿದೆ.

ಲೈಫ್ ಮಿಷನ್ ಮೂಲಕ ಈಗಾಗಲೇ 3,39,822 ಕುಟುಂಬಗಳಿಗೆ ಮನೆಗಳನ್ನು ಒದಗಿಸಿರುವುದು ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರದ ತನ್ನ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ.

ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು. ಇನ್ನೂ 25 ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕೇರಳ ಸರಕಾರದ ಈ ನಡೆ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಇಂತಹ ಕೆಲಸಗಳು ಪ್ರತಿ ರಾಜ್ಯದಲ್ಲಿಯೂ ಆಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *