ಕೊಚ್ಚಿ: ಕೆಲಸದ ಸ್ಥಳಗಳಲ್ಲಿ ಲಿಂಗ ಲೆಕ್ಕ ಪರಿಶೋಧನೆ ನಡೆಸಲಾಗುವುದು ಮತ್ತು ಪುರುಷರಿಗೆ ಸಮಾನವಾಗಿ ಮಹಿಳೆಯರಿಗೆ ಸಮಾನ ವೇತನವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಹೇಳಿದ್ದಾರೆ. ರಾಜ್ಯದ ಮಹಿಳೆಯರೊಂದಿಗೆ ಮುಖ್ಯಮಂತ್ರಿಗಳ ಮುಖಾಮುಖಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, ಉದ್ಯೋಗಗಳು ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಬೇಕು ಎಂದು ಹೇಳಿದ್ದಾರೆ.
“ಇತ್ತೀಚಿನವರೆಗೂ ಮಹಿಳೆಯರಿಗೆ ಶಿಕ್ಷಣಕ್ಕೆ ಮಾತ್ರ ಒತ್ತು ನೀಡಲಾಗುತ್ತಿತ್ತು. ಆದರೆ ಅವರು ಇನ್ನು ಮುಂದೆ (ಔಪಚಾರಿಕ) ಉದ್ಯೋಗಿಗಳಲ್ಲಿ ಭಾಗವಹಿಸುವ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಉದ್ಯೋಗಗಳು ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಬೇಕು. ಅದಕ್ಕಾಗಿ ಕೆಲಸದ ಸ್ಥಳಗಳಲ್ಲಿ ಜೆಂಡರ್ ಆಡಿಟ್ ನಡೆಸಿ, ಮಹಿಳೆಯರಿಗೆ ಸಮಾನ ವೇತನವನ್ನು ಖಾತ್ರಿಪಡಿಸಲಾಗುವುದು” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ – ಉಕ್ರೇನ್ ಯುದ್ಧ ಭೂಮಿಯಲ್ಲಿ ಗುಜರಾತ್, ಕರ್ನಾಟಕ & ಯುಪಿಯ ಯುವಕರು; ಸರ್ಕಾರದ ಮಧ್ಯಪ್ರವೇಶಕ್ಕೆ ಓವೈಸಿ ಪತ್ರ
ತಮ್ಮ ಸರ್ಕಾರದ ಮಹಿಳಾ ಸ್ನೇಹಿ ನೀತಿಗಳನ್ನು ಎತ್ತಿ ಹಿಡಿದ ಅವರು, ‘ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡುವ ಮೂಲಕ ಕೇರಳ ದೇಶಕ್ಕೆ ಮಾದರಿಯಾಗಿದೆ’ ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಕೇರಳ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳೆಯರ ಭಾಗವಹಿಸುವಿಕೆಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೆ ಮುಂದುವರೆಸಿ ಔಪಚಾರಿಕ ಉದ್ಯೋಗಗಳಿಗೂ ಸೇರುವಂತ ವಾತಾವರಣವನ್ನು ಉಂಟು ಮಾಡಬೇಕು ಎಂದು ಅವರು ಹೇಳಿದ್ದಾರೆ.
1997 ರಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಜೆಂಡರ್ ಬಜೆಟ್ ಅನ್ನು ಜಾರಿಗೆ ತಂದ ಮೊದಲ ರಾಜ್ಯವೂ ಕೇರಳವಾಗಿದೆ ಎಂದು ಮುಖ್ಯಮಂತ್ರಿ ನೆನಪಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವನ್ನು ಟೀಕಿಸಿದ ಪಿಣರಾಯಿ ವಿಜಯನ್, “ಕೇಂದ್ರ ಸರ್ಕಾರ ಹೆಸರಿಗಾಗಿ ಲಿಂಗ ಬಜೆಟ್ ಅನ್ನು ಮಂಡಿಸುತ್ತದೆ. ಆದರೆ ಒಮ್ಮೆ ಕೂಡ ಈ ಅಂಕಿ ಅಂಶವು ಒಟ್ಟು ಬಜೆಟ್‌ನ ಶೇಕಡಾ ಆರಕ್ಕಿಂತ ಹೆಚ್ಚಾಗಿಲ್ಲ” ಎಂದು ಹೇಳಿದ್ದಾರೆ.
“ಕೇರಳದಲ್ಲಿ, ಈ ವರ್ಷದ ಒಟ್ಟು ಬಜೆಟ್‌ನ 21.5% ದಷ್ಟು ಜೆಂಡರ್ ಬಜೆಟ್ ಆಗಿದೆ. 2017-18 ರಿಂದ, ವಾರ್ಷಿಕ ಜೆಂಡರ್ ಬಜೆಟ್ ಅನ್ನು ಪ್ರತಿ ವರ್ಷ ರಾಜ್ಯ ಬಜೆಟ್‌ನೊಂದಿಗೆ ಪರಿಚಯಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಮೈಸೂರು | ತೆರಿಗೆ ಪಾಲಿನಲ್ಲಿ ಕೇಂದ್ರದಿಂದ ಅನ್ಯಾಯ : ಕರ್ನಾಟಕ ಜನರಂಗದಿಂದ ಅಹೋರಾತ್ರಿ ಧರಣಿ Janashakthi Media