ಕೇರಳ ಸಿಪಿಐ ಕಾರ್ಯದರ್ಶಿ ಕನಂ ರಾಜೇಂದ್ರನ್ (73) ನಿಧನ

ಕೊಚ್ಚಿ: ಇಲ್ಲಿನ ಅಮೃತ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ 5.30ಕ್ಕೆ ಹಠಾತ್ ಹೃದಯಾಘಾತದಿಂದ ಸಿಪಿಐ ಕೇರಳ ರಾಜ್ಯ ಕಾರ್ಯದರ್ಶಿ ಕನಂ ರಾಜೇಂದ್ರನ್ ಅವರು ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಕಾಲಿನ ವಾಸಿಯಾಗದ ಗಾಯ ಸೇರಿದಂತೆ ಹಲವು ಕಾಯಿಲೆಗಳಿಂದ ಅಕ್ಟೋಬರ್ 25 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಮಧುಮೇಹದಿಂದಾಗಿ ಗಾಯವು ವಾಸಿಯಾಗದ ಸೋಂಕಿನ ಕಾರಣ ಅವರ ಎಡ ಪಾದವನ್ನು ಕತ್ತರಿಸಬೇಕಾಗಿತ್ತು. ಅವರಿಗೆ ಹೃದಯ ಸಂಬಂಧಿ ಸಮಸ್ಯೆಯೂ ಇತ್ತು ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಚೇತರಿಕೆಯ ಹಾದಿಯಲ್ಲಿದ್ದ ಅವರು ಶುಕ್ರವಾರ ಸಂಜೆ ಹೃದಯ ಸ್ತಂಭನಕ್ಕೆ ಒಳಗಾದ ನಂತರ ಅವರನ್ನು ಕ್ರಿಟಿಕಲ್ ಕೇರ್ ಯೂನಿಟ್‌ಗೆ ಸೇರಿಸಲಾಯಿತು. ಸಂಜೆ 5.30ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಕನಂ ರಾಜೇಂದ್ರನ್

ಇದನ್ನೂ ಓದಿ: Actress Leelavathi | ನೆಲಮಂಗಲದಲ್ಲಿ ನಟಿ ಲೀಲಾವತಿ ಅಂತಿಮ ದರ್ಶನ, ರವೀಂದ್ರ ಕಲಾಕ್ಷೇತ್ರದಲ್ಲಿ 11 ಗಂಟೆಯಿಂದ ಅವಕಾಶ

ಈ ಹಿಂದಿನ ಕೇರಳ ಸಿಪಿಐ ಕಾರ್ಯದರ್ಶಿ ಸಿ. ಕೆ. ಚಂದ್ರಪ್ಪನವರ ನಿಧನದ ನಂತರ ರಾಜೇಂದ್ರನ್ ಅವರು 2015 ರಿಂದ ಪಕ್ಷದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಇಡೀ ಸಚಿವ ಸಂಪುಟವು ನಡೆಯುತ್ತಿರುವ ನವಕೇರಳ ಸದಸ್‌ನ ಅಂಗವಾಗಿ ಪಟ್ಟಣದಲ್ಲಿ ಇರುವ ವೇಳೆ ಅವರು ನಿಧನರಾಗಿದ್ದಾರೆ.

ನವೆಂಬರ್ 10, 1950 ರಂದು ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕಲ್‌ನಲ್ಲಿ ಜನಿಸಿದ ರಾಜೇಂದ್ರನ್ ಅವರು, CPIನ ಯುವ ಸಂಘಟನೆಯಾದ ಆಲ್ ಇಂಡಿಯಾ ಯೂತ್ ಫೆಡರೇಶನ್ (AIYF) ಮೂಲಕ ರಾಜಕೀಯ ಪ್ರವೇಶಿಸಿದ್ದರು. 1969 ರಲ್ಲಿ ತನ್ನ 19 ನೇ ವಯಸ್ಸಿನಲ್ಲಿ ಎಐವೈಎಫ್ ಕಾರ್ಯದರ್ಶಿಯಾದ ಅವರು ಎರಡು ವರ್ಷಗಳ ನಂತರ ಅವರು ಸಿಪಿಐ ಸದಸ್ಯರಾದರು.

ಇದನ್ನೂ ಓದಿ: ವಿವಾದ ಸೃಷ್ಟಿಸುವ ಬದಲು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿ | ಶಾಸಕರು, ಸಚಿವರಿಗೆ ಸ್ಪೀಕರ್ ಖಾದರ್ ಸೂಚನೆ

ರಾಜೇಂದ್ರನ್ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ ತಿರುವನಂತಪುರಂಗೆ ಕೊಂಡೊಯ್ಯಲಾಗುವುದು. ಅಲ್ಲಿ ಎಡಪಳಂಜಿಯಲ್ಲಿರುವ ಅವರ ಪುತ್ರನ ನಿವಾಸದಲ್ಲಿ ಮತ್ತು ಸಾರ್ವಜನಿಕರ ಗೌರವಾರ್ಥವಾಗಿ ಪಟ್ಟಂನಲ್ಲಿರುವ ಪಿಎಸ್ ಸ್ಮಾರಕದಲ್ಲಿರುವ ಸಿಪಿಐ ರಾಜ್ಯ ಕಚೇರಿಯಲ್ಲಿ ಇರಿಸಲಾಗುವುದು ಎಂದು ದಿ ಹಿಂದೂ ತನ್ನ ವರದಿಯಲ್ಲಿ ಹೇಳಿದೆ. ನಂತರ ಕೊಟ್ಟಾಯಂನಲ್ಲಿರುವ ಪಕ್ಷದ ಜಿಲ್ಲಾ ಕಚೇರಿಗೆ ಕೊಂಡೊಯ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ಕನಂನ ಅವರ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದೆ.

ಎಡಪಕ್ಷದ ಹಿರಿಯ ನಾಯಕನ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಖ್ಯಾತ ರಾಜಕೀಯ ನಾಯಕ, ರಾಜಕಾರಣಿ, ಶಾಸಕ ಮತ್ತು ಸಾರ್ವಜನಿಕ ವ್ಯಕ್ತಿ ಕನಂ ರಾಜೇಂದ್ರನ್ ಅವರ ನಿಧನದಕ್ಕೆ ಕೇರಳ ಸಂತಾಪ ವ್ಯಕ್ತಪಡಿಸಿದೆ. ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ದೃಢವಾಗಿ ಎತ್ತಿಹಿಡಿಯುವ ಕೇರಳದ ಕಮ್ಯುನಿಸ್ಟ್ ಮತ್ತು ಪ್ರಗತಿಪರ ಚಳವಳಿಗೆ ಅವರ ಗಮನಾರ್ಹ ಕೊಡುಗೆಗಳು ಅನುಕರಣೀಯವಾಗಿವೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಕೊಡಗು : ಹಾಡಿ ಜನರಿಗೆ ಬದುಕಿನ ಗ್ಯಾರಂಟಿ ಬೇಕಿದೆ Janashakthi Media

Donate Janashakthi Media

Leave a Reply

Your email address will not be published. Required fields are marked *