ಕೇರಳ ಚುನಾವಣೆ ಹೇಗಿದೆ? ಎಲ್.ಡಿ.ಎಫ್‌ ಯುಡಿಎಫ್‌ ನಡುವೆ ನಡೆದಿದೆ ನೇರ ಹಣಾಹಣಿ

ಎಡರಂಗದ ನೇತೃತ್ವ ವಹಿಸಿರುವ ಸಿಎಂ ಪಿಣರಾಯಿ ವಿಜಯನ್ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಭರವಸೆಯಲ್ಲಿದ್ದಾರೆ. ಅತ್ತ ಕಾಂಗ್ರೆಸ್​ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಏರಲು ತೀವ್ರ ಕಸರತ್ತು ನಡೆಸುತ್ತಿದೆ. ಕೇರಳದಲ್ಲಿ ಖಾತೆ ತರೆಯಲು ಬಿಜೆಪಿ ಸಂಘ ಪರಿವಾರದ ನೇತೃತ್ವದಲ್ಲಿ ಅಣಿಯಾಗಿದೆ. ​​​ಇವೆಲ್ಲದರ ನಡುವೆ ಇತಿಹಾಸ್‌ ಬ್ರೆಕ್‌ ಮಾಡುತ್ತಾ ಎಡರಂಗ? ಹೇಗಿದೆ ಕೇರಳ ಚುನಾವಣೆ.

ಇತರ  ರಾಜ್ಯಗಳಿಗಿಂತ ಕೇರಳದ ರಾಜಕೀಯ ವಿಭಿನ್ನವಾಗಿದೆ. ಇಲ್ಲಿ ಎರಡು ಮೈತ್ರಿಕೂಟಗಳು 80 ರ ದಶಕದಿಂದಲೂ ಆಡಳಿತ ನಡೆಸುತ್ತಿವೆ. ಆ ಎರಡು ರಂಗಗಳು ಯಾವವು ಎಂದರೆ, ಸಿಪಿಎಂ  ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್ ಫ್ರಂಟ್, ಎಲ್​ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಯುಡಿಎಫ್, ಕೇರಳದಲ್ಲಿ ಒಂದು ಬಾರಿ ಎಲ್.ಡಿ.ಎಫ್.‌ ಒಂದು ಬಾರಿ ಯುಡಿಎಫ್‌ ಆಡಳಿತ ನಡೆಸುತ್ತಾ ಬಂದಿದೆ. 1982 ರಿಂದ ಈಚೆಗೆ, ಯಾವುದೇ ರಾಜಕೀಯ ರಂಗಗಳು ಸತತ ಅವಧಿಗೆ ಆಡಳಿತ ನಡೆಸಿಲ್ಲ. ಅತಿ ಹೆಚ್ಚು ಬಾರಿ ಎಲ್.ಡಿ.ಎಫ್.‌ ಆಡಳಿತವನ್ನು ನಡೆಸಿದೆ.

ಕೇರಳ ವಿಧಾನ ಸಭೆಯು ಒಟ್ಟು 140 ಸ್ಥಾನಗಳನ್ನು ಹೊಂದಿದೆ. ಆಡಳಿತವನ್ನು ನಡೆಸಬೇಕಾದರೆ 71 ಸ್ಥಾನಗಳನ್ನು ಗೆಲ್ಲಬೇಕು. 2016 ರ ಚುನಾವಣೆಯಲ್ಲಿ ಎಲ್ ಡಿ ಎಫ್ 91, ಯುಡಿಎಫ್ 47, ಎನ್.ಡಿ.ಎ 1 ಸ್ಥಾನದಲ್ಲಿ ಗೆಲುವನ್ನು ಸಾಧಿಸಿತ್ತು. ಮಾರ್ಕ್ಸ್‌ವಾದಿ ಕಮ್ಯೂನಿಷ್ಟ ಪಾರ್ಟಿ, ಸಿಪಿಐಎಂ ನೇತೃತ್ವದ ಎಲ್.ಡಿ.ಎಫ್.‌ ನಲ್ಲಿ  ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಜಾತ್ಯತೀತ ಜನತಾದಳ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಕೇರಳ ಕಾಂಗ್ರೆಸ್ ಸ್ಕರಿಯಾ ಬಣ, ಜನಾಧಿಪತ್ಯ ಕೇರಳ ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಲೀಗ್, ಕೇರಳ ಕಾಂಗ್ರೆಸ್ ಬಿ ಸೇರಿದಂತೆ ಪ್ರಮುಖ ಪಕ್ಷಗಳು ಇವೆ.  ಇನ್ನೂ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ನಲ್ಲಿ  ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್,  ಕೇರಳ ಕಾಂಗ್ರೆಸ್ (ಜೋಸೆಫ್ ಬಣ), ಕ್ರಾಂತಿಕಾರಿ ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ಪಕ್ಷಗಳಿವೆ. ಬಿಜೆಪಿ ನೇತೃತ್ವದ ಎನ್.ಡಿಎ ಮೈತ್ರಿಕೂಟದಲ್ಲಿ ಭಾರತ್ ಧರ್ಮ ಜನಸೇನೆ  ಅಂದ್ರೆ ಬಿಡಿಜೆಎಸ್,  ಪಿ ಸಿ ಥಾಮಸ್ ಬಣದ ಕೇರಳ ಕಾಂಗ್ರೆಸ್, ಜನಾಧಿಪತ್ಯ ಸಮೃಷ್ಣ ಸಮಿತಿ ಅಂದ್ರೆ ಜೆಎಸ್‌ಎಸ್ ಸೇರಿದಂತೆ ಇತರೆ ಪಕ್ಷಗಳು ಇವೆ.

ಈಗಾಗಲೆ ಮೂರು ರಂಗಗಳು ಟಿಕೇಟ್‌ ಗಳನ್ನು ಘೋಷಿಸಿ ಪ್ರಚಾರವನ್ನು ನಡೆಸುತ್ತಿವೆ. ನಾವು ಈಗ ಒಂದೊಂದು ಪಕ್ಷದ ವಿವರಣೆಗಳನ್ನು ನೋಡ್ತಾ ಹೋಗೋಣ, ಮೊದಲಿಗೆ  ಬಿಜೆಪಿ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡ್ತಾ ಇದೆ ಎನ್ನುವದನ್ನು ನೋಡೋಣ. ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ಕೇರಳದಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ 115 ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಮಾಡುತ್ತಿದೆ. ಮಿತ್ರ ಪಕ್ಷಗಳಿಗೆ  ಪಕ್ಷಗಳು 25 ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದೆ.

ಒಂದು  ಅಚ್ಚರಿಯ ವಿಚಾರವೆಂದರೆ, ಬಿಜೆಪಿ ಅಭ್ಯರ್ಥಿಯೆಂದು ಒಬ್ಬರ ಹೆಸರನ್ನು ಘೋಷಣೆ ಮಾಡ್ತಾರೆ, ಆಗ ಆ ವ್ಯಕ್ತಿಗೆ ಆಚ್ಚರಿಯಾಗುತ್ತೆ, ಎಂಬಿಎ ಪದವೀಧರನಾಗಿರುವ ಆದಿವಾಸಿ ಹುಡುಗ ಮಣಿಕುಟ್ಟೀನ್‌ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿರುವುದು ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಅವರ ಸ್ಪರ್ಧೆಯನ್ನು ಮಾಡದಿರುವದಕ್ಕೆ ಕಾರಣವನ್ನು ನೀಡಿದ್ದಾರೆ, ನನ್ನನ್ನು ತಲೆ ಕೆಳಗಾಗಿಸಿ ನೇತಾಡಿಸಿದರೂ ನನ್ನ ಜನಗಳಿಗೆ ದ್ರೋಹ ಎಸಗಲಾರೆ” ಎಂಬ ಅಂಬೆಡ್ಕರ್ ಮಾತನ್ನು ಉಲ್ಲೇಖಿಸಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದಾರೆ. ನಮ್ಮ ಬೆಂಬಲ ಎಲ್.ಡಿಎಫ್‌ ಗೆ ಎಂದು ಅವರು ಖಡಕ್‌ ಉತ್ತರವನ್ನು ಬಿಜೆಪಿ ಗೆ ನೀಡಿದ್ದಾರೆ.

ಹಾಗೆಯೇ, ಮೆಟ್ರೋಮ್ಯಾನ್‌ ಎಂದೇ ಖ್ಯಾತರಾದ ಇ.ಶ್ರೀಧರನ್‌ ಬಿಜೆಪಿ ಪಕ್ಷ ಸೇರಿ ಚುನಾವಣೆ ಸ್ಪರ್ಧಿಸುತ್ತಿರುವು ನಿರ್ಧಾರವಾಗುತ್ತಿದ್ದಂತೆ ಶ್ರೀಧರನ್‌ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಕೆಲವರು ಪ್ರಯತ್ನಿಸಿದ್ದರು. ನಂತರದಲ್ಲಿ ಶ್ರೀಧರನ್‌ ಮುಖ್ಯಮಂತ್ರಿ ಅಭ್ಯರ್ಥಿಯಲ್ಲವೆಂದು ಸಮಜಾಯಿಸಿ ನೀಡಬೇಕಾಗಿ ಬಂದಿತು. ಕರ್ನಾಟಕದ ಬಿಜೆಪಿ ನಾಯಕರು ಅದರಲ್ಲೂ ಕರಾವಳಿಯ ಬಿಜೆಪಿ ನಾಯಕರು ಕೇರಳದಲ್ಲಿ ಪ್ರಚಾರವನ್ನು ನಡೆಸುತ್ತಿದ್ದಾರೆ.  ಅವರು ಎಷ್ಟೇ ಪ್ರಚಾರ ನಡೆಸಿದರೂ ಗೆದ್ದಿರುವ ಒಂದು ಸೀಟನ್ನು ಈ ಬಾರಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇರಳದ ಜನತೆ ಮಾತನಾಡ್ತಾ ಇದ್ದಾರೆ.

ಇನ್ನೂ ಯುಡಿಎಫ್‌ ಕಡೆ ಗಮನವನ್ನು ಹರಿಸುವುದಾದರೆ  ಕಾಂಗ್ರೆಸ್‌ ಪಕ್ಷವು 86 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಇತರ ಸ್ಥಾನಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟು ಕೊಟ್ಟಿದೆ. ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್‌ ನೀಡಲ್ಲ ಎಂಬ ಆರೋಪಗಳನ್ನು ಕಾಂಗ್ರೆಸ್‌ ಎದರಿಸ್ತಾ ಇದೆ. ಚುನಾವಣೆಯಲ್ಲಿ ತನಗೂ ಟಿಕೇಟ್‌ ಸಿಗಬಹುದೆಂಬ ಬಹುನಿರೀಕ್ಷೆಯಲ್ಲಿದ್ದ ಮಹಿಳಾ ವಿಭಾಗದ ಮುಖ್ಯಸ್ಥರೊಬ್ಬರು ತಮ್ಮನ್ನು ಅಭ್ಯರ್ಥಿಯೆಂದು ಘೋಷಣೆ ಮಾಡದಿರುವುದನ್ನು ಪ್ರತಿಭಟಿಸಿದ್ದಾರೆ.

ಲತಿಕಾ ಸುಭಾಷ್‌  ಎನ್ನುವವರು ಕಾಂಗ್ರೆಸ್ ಟಿಕೇಟ್‌ ನೀಡದಿರುವುದನ್ನು ಖಂಡಿಸಿ ಕೇರಳ ಕಾಂಗ್ರೆಸ್‌ ಪಕ್ಷದ ಕಚೇರಿ ಮುಂಭಾಗ ತಲೆ ಬೋಳಿಸಿಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮತ್ತು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಪಕ್ಷದ ನಾಯಕತ್ವದ ವಿರುದ್ಧ ಈ ರೀತಿಯ ಪ್ರತಿಭಟನೆ ವ್ಯಕ್ತವಾಗ್ತಾ ಇದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇರಳ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಅಘಾತವಾಗಿದ್ದು ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಪ್ರಮುಖ ಸ್ಥಾನಗಳನ್ನು ಅಲಂಕಿರಿಸಿದ್ದ ಪಿಸಿ ಚಾಕೋ ಮತ್ತು ವಿಜಯನ್ ಥೋಮಸ್ ಕಾಂಗ್ರೆಸ್ ತೊರೆದು ಬೇರೆ ಪಕ್ಷಗಳಿಗೆ ಶಿಫ್ಟ್ ಆಗಿದ್ದಾರೆ.

ಕಾಂಗ್ರೆಸ್‌ ನಲ್ಲಿ ಎರಡು ಗುಂಪುಗಳಿದ್ದು ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಮತ್ತು ರಮೇಶ್‌ ಚೆನ್ನಿತಲ ಅವರ ಗುಂಪುಗಾರಿಕೆಯಿಂದ ಕೇರಳ ಕಾಂಗ್ರೆಸ್‌ ನಲ್ಲಿ ಹಲವು ನಾಯಕರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಯುಡಿಎಫ್‌ ಗೆ ಇದು ಭಾರಿ ಪೆಟ್ಟು ನೀಡಲಿದೆ ಎಂಬುದು ಕೇರಳ ಜನರ ಅಭಿಪ್ರಯಾವಾಗಿದೆ.

ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಲ್ಲಿ ಸಾಕಷ್ಟು ಬೆಳವಣಿಗೆಯಾಗುತ್ತಿರುವುದರ ನಡುವೆಯೆ ಈ ಚುನಾವಣೆಯಲ್ಲಿ ಸಿಪಿಐಎಂ ಪಕ್ಷವು ಅತ್ಯಂತ ಭಿನ್ನವಾಗಿ ಕಾಣ್ತಾ ಇದೆ. ಎಲ್.ಡಿಎಫ್‌  ನೇತೃತ್ವವನ್ನು ವಹಿಸಿಕೊಂಡಿರುವ ಸಿಪಿಐ(ಎಂ) ಪಕ್ಷವು ಈಗಾಗಲೇ 85 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಳಿದ ಕ್ಷೇತ್ರಗಳನ್ನು ತನ್ನ ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ  ಪ್ರಮುಖ ಸಚಿವರು ಚುನಾವಣಾ ಕಣದಲ್ಲಿ ಇದ್ದಾರೆ. ‌

ಒಂದು ಪ್ರಮುಖ ವಿಚಾರವೆನು ಅಂದರೆ, ಈ ಬಾರಿ ಸಿಪಿಐ(ಎಂ) ಪಕ್ಷದಿಂದ ಶಾಸಕರಾಗಿದ್ದ 33 ಜನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅದರಲ್ಲಿ ಐದು ಜನ ಸಚಿವರು ಇದ್ದಾರೆ,  ಎರಡು ಬಾರಿ ಶಾಸಕರಾಗಿ ಅಥವಾ ಸಚಿವರಾಗಿ ಕೆಲಸ ಮಾಡಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದು ಸಿಪಿಐ(ಎಂ) ಪಕ್ಷದ ನಿಲುವಾಗಿದೆ. ಹೀಗಾಗಿ ಹಿಂದಿನ ಚುನಾವಣೆಯಲ್ಲಿ ಗೆದ್ದ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ತಮ್ಮನ್ನು ಘೋಷಣೆ ಮಾಡದಿರುವ ಬಗ್ಗೆ ಯಾರೊಬ್ಬರೂ ಪಕ್ಷದ ವಿರುದ್ದ ತಮ್ಮ ಹೇಳಿಕೆಯನ್ನು ನೀಡಲಿಲ್ಲ ಮತ್ತು ಚುನಾವಣಾ ಪ್ರಚಾರದಲ್ಲಿ ನಿರಾಸಕ್ತಿಯನ್ನು ಸಹ ವಹಿಸದಿರುವುದು ಕೇರಳದ ಚುಣಾವಣಾ ಕಣದಲ್ಲಿ ಅತ್ಯಂತ ಆಕರ್ಷಕವಾದ ವಿಷಯವಾಗಿದೆ.

ಸಿಪಿಎಂ ಘೋಷಿಸಿದ ಅಭ್ಯರ್ಥಿಗಳಲ್ಲಿ 28 ಜನ ವಕೀಲರು ಸೇರಿದಂತೆ 42 ಮಂದಿ ಪದವೀಧರರು, 14 ಜನ ಸ್ನಾತಕೋತ್ತರ ಮದವೀಧರರು, ಇಬ್ಬರು ಪಿಹೆಚ್‌ಡಿ ಹಾಗೂ ಇಬ್ಬರು ಎಂಬಿಬಿಎಸ್‌ ಪದವಿ ಪಡೆದವರಿದ್ದಾರೆ. ಈ ಪೈಕಿ ಹನ್ನೆರಡು ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ.

ಈ ಬಾರಿ ಮತ್ತೆ ಎಡರಂಗ ಅಧಿಕಾರಕ್ಕೆ ಬರಲಿದೆ ಎಂದು ರಾಜಕೀಯ ತಜ್ಙರು,  ವಿಶ್ಲೇಷಕರು ಹೇಳ್ತಾ ಇದ್ದಾರೆ.  ಸಮೀಕ್ಷೆಗಳು ಕೂಡಾ ಅದನ್ನೆ ಹೇಳ್ತಾ ಇವೆ. ಎಬಿಪಿ -ಸಿವೋಟರ್ ಸಮೀಕ್ಷೆ 2021 ಆಡಳಿತಾರೂಢ ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್ (LDF) ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಸರಳ ಬಹುಮತ ಗಳಿಸಲಿದ್ದು 77 ರಿಂದ 85 ಸ್ಥಾನ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 54 ರಿಂದ 62 ಸ್ಥಾನ ಗಳಿಸಬಹುದು ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳ್ತಾ ಇವೆ.

ಎಲ್ಲಕ್ಕಿಂತ ಮುಖ್ಯವಾಗಿ ಕೇರಳ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಒತ್ತನ್ನು ನೀಡಿದೆ. ಅನೇಕ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಹೆಸರನ್ನು ಎಡರಂಗ ಸರಕಾರ ತಂದು ಕೊಟ್ಟಿದೆ ಹಾಗಾಗಿ ಈ ಬಾರಿ ಎಡರಂಗ ಮತ್ತೆ ಅಧಿಕಾರಕ್ಕೆ ಬರಲಿದೆ, ಇತಿಹಾಸವನ್ನು ನಿರ್ಮಾಣ ಮಾಡಲಿದೆ ಎಂದು ಕೇರಳದ ಜನತೆ ಅಭಿಪ್ರಯಾವ್ಯಕ್ತ ಪಡಸ್ತಾ ಇದ್ದಾರೆ.

ಎಲ್.ಡಿ ಎಫ್‌ ಸರಕಾರವನ್ನು ಜನರು ಯಾಕೆ ಮತ್ತೆ ಬೆಂಬಲಸ್ತಾ ಇದ್ದಾರೆ, ಅದಕ್ಕೀರುವ ಕಾರಣಗಳೇನು? ಕೇರಳದ ಎಡರಂಗ ಸರಕಾರ ವಿಶ್ವ ಮಟ್ಟದಲ್ಲಿ ಗಮನ ಸೆಳೆಯಲು ಕಾರಣವೇನು? ಈ ವಿಷಯದ ಕುರಿತಾಗಿ ಮುಂದಿನ ಸಂಚಿಕೆಯಲ್ಲಿ ತಿಳಿಸಲಾಗುವುದು.

Donate Janashakthi Media

Leave a Reply

Your email address will not be published. Required fields are marked *